ಮಾಸಿಕ ಸಭೆ

0
179

 
ಚಿತ್ರ/ವರದಿ: ಗೋವಿಂದ ಬಿ ಜಿ
ಯಕ್ಷತೂಣೀರ ಸಂಪ್ರತಿಷ್ಥಾನ ( ರಿ ) ಕೋಟೂರು ಇದರ ಮಾಸಿಕ ಸಭೆಯು ಅಡ್ಕ ಗೋಪಾಲಕೃಷ್ಣ ಭಟ್ ಅವರ ನಿವಾಸದಲ್ಲಿ ಜರಗಿತು.
 
 
ಮೇ.13 ಶುಕ್ರವಾರದಂದು ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ನಡೆಯಲಿರುವ ಅಡ್ಕವಚೋಹಾಸ ಅನಾವರಣ ಸಮಾರಂಭದ ರೂಪರೇಖೆಯ ಕುರಿತು ಸಮಾಲೋಚಿಸಲಾಯಿತು. ” ಅಡ್ಕ ವಚೋಹಾಸ ” ಕೃತಿ ರಚನಾ ಸಂಪಾದಕರಾದ ನಾ. ಕಾರಂತ ಪೆರಾಜೆ ಅವರು ಸಮಾರಂಭದ ಸಮಗ್ರ ಯೋಜನೆಯ ಮಾಹಿತಿಗಳನ್ನಿತ್ತರು.
 
ರಘುರಾಮ ಉಡುಪುಮೂಲೆ ಅವರು ಸೂಕ್ತ ಮಾರ್ಗದರ್ಶನಗಳನ್ನಿತ್ತರು. ಸಮಾರಂಭದ ಯಶಸ್ಸಿಗೆ ಡಾ. ಶಿವಕುಮಾರ್ ಅಡ್ಕ ಅವರ ನೇತೃತ್ವದಲ್ಲಿ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು. ಪೆರಡಂಜಿ ಗೋಪಾಲಕೃಷ್ಣ ಭಟ್ ಅವರು ಪ್ರಸ್ಥಾವನಾ ಮಾತುಗಳನ್ನಾಡಿದರು. ರಾಘವೇಂದ್ರ ಉಡುಪುಮೂಲೆ, ಅನುಪಮಾ ಉಡುಪುಮೂಲೆ, ಕೃಷ್ಣ ಭಟ್ ಅಡ್ಕ, ಗೋವಿಂದಬಳ್ಳಮೂಲೆ ಸಲಹೆ ಸೂಚನೆಗಳನ್ನಿತ್ತರು. ಈಶ್ವರ ಭಟ್ ಬಳ್ಳಮೂಲೆ ಅಧ್ಯಕ್ಷ ಸ್ಥಾನ ವಹಿಸಿದರು. ಕಾರ್ಯದರ್ಶಿ ಮುರಳಿ ಸ್ಕಂದ ಸ್ವಾಗತಿಸಿದರು. ಸುಬ್ರಹ್ಮಣ್ಯ ಭಟ್ ಅಡ್ಕ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here