ಮಾಸಿಕ ದರ ಕೇವಲ 49ರೂ.!

0
368

ರಾಷ್ಟ್ರೀಯ ಪ್ರತಿನಿಧಿ ವರದಿ
ಲ್ಯಾಂಡ್‌ಲೈನ್‌ ಫೋನ್‌ಗಳತ್ತ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಬಿಎಸ್‌ಎನ್‌ಎಲ್‌, ಮಾಸಿಕ ಕನಿಷ್ಠ ಶುಲ್ಕವನ್ನು ಕೇವಲ 49 ರೂ.ಗೆ ಇಳಿಸಿದೆ.
 
 
ಇದದಿಂದ ಹೊಸದಾಗಿ ಸಂಪರ್ಕ ಪಡೆಯುವವರು 500 ರೂ. ಭದ್ರತಾ ಠೇವಣಿ ಜತೆಗೆ 49 ರೂ. ಶುಲ್ಕ ಪಾವತಿಸಿದರೆ ಒಂದು ತಿಂಗಳು ಒಳಬರುವ ಕರೆಗಳನ್ನು ಸ್ವೀಕರಿಸಬಹುದು. ಬಿಎಸ್‌ಎನ್‌ಎಲ್‌ ಲ್ಯಾಂಡ್‌ಲೈನ್‌ ಫೋನ್‌ಗಳಿಗೆ ಮಾಡಲಾಗುವ ಕರೆಗೆ ನಿಮಿಷಕ್ಕೆ 1 ರೂ., ಮೊಬೈಲ್‌ ಫೋನ್‌ಗಳಿಗೆ ಮಾಡಲಾಗುವ ಕರೆಗೆ ನಿಮಿಷಕ್ಕೆ 1.20 ರೂ. ಶುಲ್ಕ ವಿಧಿಸಲಾಗುತ್ತದೆ.
 
 
ಹೊಸ ಯೋಜನೆಯಡಿ ಆರು ತಿಂಗಳವರೆಗೆ ಕನಿಷ್ಠ ಮಾಸಿಕ ಶುಲ್ಕ 49 ರೂ. ಇರುತ್ತದೆ. ಆನಂತರ ಗ್ರಾಮೀಣ ಅಥವಾ ನಗರ ಕ್ಷೇತ್ರದ ಗ್ರಾಹಕರಂತೆ ಸಾಮಾನ್ಯ ಪ್ಲಾನ್‌ಗಳ ಶುಲ್ಕ ಪಾವತಿಸಬೇಕು. ಹೊಸ ಹಾಗೂ ಹಾಲಿ ಗ್ರಾಹಕರಿಗೆ ಇದು ಅನ್ವಯವಾಗುತ್ತದೆ.

LEAVE A REPLY

Please enter your comment!
Please enter your name here