ದೇಶಪ್ರಮುಖ ಸುದ್ದಿವಾರ್ತೆ

ಮಾವೊ ಅಟ್ಟಹಾಸ: ಪೊಲೀಸರು ಬಲಿ

ರಾಷ್ಟ್ರೀಯ ಪ್ರತಿನಿಧಿ ವರದಿ
ಮಾವೊ ಉಗ್ರರ ಅಟ್ಟಹಾಸ ನಿರಂತರವಾಗಿ ಮುಂದುವರಿದಿದೆ. ಮಾವೊವಾದಿ ಉಗ್ರರು ರಸ್ತೆಯಲ್ಲಿ ಹುದುಗಿಸಿಟ್ಟಿದ್ದ ಪ್ರಬಲ ನೆಲಬಾಂಬ್ ಸ್ಫೋಟಕ್ಕೆ ಏಳಕ್ಕೂ ಹೆಚ್ಚು ಸಶಸ್ತ್ರಪಡೆ ಪೊಲೀಸರು ಬಲಿಯಾಗಿದ್ದ ಘಟನೆ ಒರಿಸ್ಸಾ-ಆಂಧ್ರಪ್ರದೇಶ್ ಗಡಿಯಲ್ಲಿ ಕಳೆದ ರಾತ್ರಿ ಸಂಭವಿಸಿದೆ.
 
 
 
ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಗಾಯಾಳು ಜವಾನರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ನಿನ್ನೆ ರಾತ್ರಿ ಸಶಸ್ತ್ರ ಮೀಸಲು ಪಡೆ ಪೊಲೀಸರು ಕೋರಪತ್ ಜಿಲ್ಲೆಯ ಸುಂಕಿ ಬಳಿ ತಮ್ಮ ವಾಹನದಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ಚರಂಡಿಯೊಂದರಲ್ಲಿ ಹುದುಗಿಸಿಟ್ಟಿದ್ದ ಪ್ರಬಲ ನೆಲಬಾಂಬ್ ಸ್ಫೋಟಿಸಿದೆ ಎಂದುಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
 
 
ಸ್ಫೋಟಗೊಳ್ಳುತ್ತಿದ್ದಂತೆಯೇ ಅದರ ರಭಸಕ್ಕೆ ಪೊಲೀಸರು ತೆರಳುತ್ತಿದ್ದ ಮಿನಿಬಸ್ 60 ಅಡಿ ಆಳದ ಕಣಿವೆಗೆ ಬಿದ್ದಿದೆ. ಇವರೆಲ್ಲ ಕೋರಪತ್‍ನಿಂದ ಅಂಗುಲ್‍ಗೆ ಚಾಲನಾ ತರಬೇತಿಗಾಗಿ ತೆರಳುತ್ತಿದ್ದರು. ಸುಂಕಿಗೆ ತೀರಾ ಸಮೀಪದಲ್ಲಿಯೇ ಬಿಎಸ್‍ಎಫ್ ಕ್ಯಾಂಪ್ ಇದ್ದರೂ ಘಟನೆ ನಡೆದು ಒಂದು ಗಂಟೆಯಾದರೂ ಕ್ಯಾಂಪ್‍ನ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here