ವಾರ್ತೆ

ಮಾವು ಮೇಳ-2016

 
ಮಂಗಳೂರು ಪ್ರತಿನಿಧಿ ವರದಿ
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಬೆಂಗಳೂರು ಮತ್ತು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ, ಮೂಡುಶೆಡ್ಡೆ ಮಂಗಳೂರು ಇದರ ವತಿಯಿಂದ ಎರಡು ದಿನಗಳ ಆಯೋಜಿಸಿರುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಪಿಲಿಕುಳ ವಸಂತೋತ್ಸವ 2016 ಕಾರ್ಯಕ್ರಮವನ್ನು ರಾಜ್ಯ ಯುವಜನ ಸೇವೆ, ಕ್ರೀಡೆ ಮತ್ತು ಮೀನುಗಾರಿಕಾ ಕೆ. ಅಭಯಚಂದ್ರ ಶನಿವಾರ ಉದ್ಘಾಟಿಸಿದ್ದಾರೆ.
 
 
pilikula mango
ಈ ಸಂದರ್ಭದಲ್ಲಿ ಎಂ ಕಮಲಾಕ್ಷಿ ರಾಜಣ್ಣ, ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಬೆಂಗಳೂರು, ಜೆ. ಆರ್ ಲೋಬೋ, ಶಾಸಕರು, ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರ, ಬಿ. ಎ. ಮೊಹಿಯುದ್ದೀನ್ ಬಾವಾ, ಶಾಸಕರು, ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ, ಹಾಗೂ ಐ. ಚಂದ್ರಕಾಂತ ರಾವ್, ಮಾಜಿ ಸಿ.ಇ.ಓ ಮತ್ತು ನಿರ್ದೇಶಕರು ಜಿಂದಲ್ ಪೋಲಿ ಫಿಲಿಮ್ಸ್ ಲಿಮಿಟೆಡ್ ಮತ್ತಿತ್ತರ ಗಣ್ಯರು ಉಪಸ್ಥಿತರಿದ್ದರು.
 
 
 
ಇದೇ ಸಂದರ್ಭದಲ್ಲಿ ಗಣ್ಯರಿಗೆ ಮತ್ತು ಪತ್ರಕರ್ತರಿಗೆ ಮಾವಿನ ಹಣ್ಣನ್ನು ತಿಂದು ಗೊರಟನ್ನು ಎಸೆಯುವಂತಹ ಮೋಜಿನ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಗೊರಟನ್ನು ಅತ್ಯಂತ ದೂರ ಎಸೆದವರಿಗೆ ಬಹುಮಾನವನ್ನು ವಿತರಿಸಲಾಯಿತು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here