ಮಾವಿನಕಾಯಿ ಚಟ್ನಿ ಪುಡಿ

0
378

ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು:
ತಲಾ 100 ಗ್ರಾಂ ಕಡ್ಲೇಬೇಳೆ, ಉದ್ದಿನಬೇಳೆ,  ಹುಣಸೆಹಣ್ಣಿನ ಪುಡಿ. 15 ಒಣಮೆಣಸು,  ಸ್ವಲ್ಪ ಸಾಸಿವೆ,  ಕರಿಬೇವಿನ ಸೊಪ್ಪಿನ ಎಲೆ,  ಎರಡು ಹುಳಿ ಮಾವಿನಕಾಯಿ, ಸ್ವಲ್ಪಇಂಗು, ನಾಲ್ಕೈದು ಹಸಿಮೆಣಸು.
 
 
 
ತಯಾರಿಸುವ ವಿಧಾನ:
ಮಾವಿನ ಕಾಯಿ ಸಿಪ್ಪೆ ತೆಗೆದು ತುರಿಯಬೇಕು. ಅನಂತರ ಉಪ್ಪಿನ ನೀರಿಗೆ ತುರಿದ ಮಾವಿನಕಾಯಿಯನ್ನು ಹಾಕಿ. ನೀರು ಸಿಕ್ಕಾಪಟ್ಟೆ ಇರಬಾರದು. ಮಾರನೆ ದಿನ ಆ ತುರಿಯನ್ನು ತೆಗೆದು ಒಣಗಿಸಿ. ಎರಡು ದಿನ ಹೀಗೆ ಒಣಗಿಸಬೇಕು. ಒಂದುವೇಳೆ ಉಪ್ಪು ಜಾಸ್ತಿ ಹಿಡಿದಿರದಿದ್ದರೆ ಮತ್ತೂಮ್ಮೆ ಉಪ್ಪಿನ ನೀರಿಗೆ ಹಾಕಬಹುದು. ತುರಿಯುವಾಗ ಸ್ವಲ್ಪ ದೊಡ್ಡ ಹಲ್ಲಿನ ತುರಿಮಣೆ ಬಳಸಿ. ಆಗ ಚೆನ್ನಾಗಿರುತ್ತದೆ.
ಕಡ್ಲೇಬೇಳೆ ಮತ್ತು ಉದ್ದಿನಬೇಳೆಯನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಿ. ಬಂಗಾರದ ಬಣ್ಣ ಬರಬೇಕು. ನಂತರ ಒಣಮೆಣಸನ್ನು ಹುರಿದುಕೊಳ್ಳಿ. ಹಸಿಮೆಣಸನ್ನು ಪ್ರತ್ಯೇಕವಾಗಿ ಸ್ವಲ್ಪ ಎಣ್ಣೆ ಇಟ್ಟು ಕರಿದುಕೊಳ್ಳಿ. ಆಮೇಲೆ ಸಾಸಿವೆ ಹಾಕಿ, ಪಟಪಟನೆ ಸಿಡಿದ ಮೇಲೆ, ಕರಿಬೇವಿನಸೊಪ್ಪು ಹಾಕಿ ಹುರಿದು ತೆಗೆದಿಡಿ. ಬೇಕಾದಷ್ಟು ಉಪ್ಪು, ಸ್ವಲ್ಪ ಇಂಗಿನೊಂದಿಗೆ ಈ ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ಅದಕ್ಕೆ ಒಣಗಿದ ಮಾವಿನ ತುರಿಯನ್ನು ಬೆರೆಸಿ, ಮತ್ತೂಂದು ಸುತ್ತು ತಿರುಗಿಸಿ. ಸ್ವಲ್ಪ ಸಿಹಿ ಇರಲು, ಬೆಲ್ಲ ಪುಡಿ ಮಾಡಿ ಸೇರಿಸಿ. ಅಲ್ಲಿಗೆ ಮಾವಿನಕಾಯಿ ಚಟ್ನಿಪುಡಿ ಸಿದ್ಧವಾದಂತೆ.

LEAVE A REPLY

Please enter your comment!
Please enter your name here