ಆದಿಶಂಕರಾಚಾರ್ಯರ ಜೀವನ ಚರಿತ್ರೆಯನ್ನು ಆಧರಿಸಿ ತ್ರಿಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಚಲನಚಿತ್ರ ‘ಆಚಾರ್ಯ ಶ್ರೀ ಶಂಕರ’ ದಲ್ಲಿ ಕೆ. ವಿ. ರಮಣ್ ಮಂಗಳೂರು
ನಟಿಸಿದ್ದಾರೆ. ಆಚಾರ್ಯ ಶಂಕರರ ತಂದೆ ಶಿವಗುರುವಿನ ಪಾತ್ರದಲ್ಲಿ ರಮಣ್ ಅಭಿನಯಿಸುತ್ತಿದ್ದು, ಮಾರ್ಚ್ ತಿಂಗಳಲ್ಲಿ ಚಿತ್ರ ತೆರೆಕಾಣಲಿದೆ.
ತಾಯಿ ಆರ್ಯಾಂಬೆಯ ಪಾತ್ರವನ್ನು ಖ್ಯಾತ ನಟಿ ವಿನಯಾ ಪ್ರಸಾದ್ ಅವರ ಪುತ್ರಿ ಪ್ರಥಮ ಪ್ರಸಾದ್ ವಹಿಸಿದ್ದಾರೆ.
ಶಂಕರಾಚಾರ್ಯರ ಪಾತ್ರದಲ್ಲಿ ನವಶೋಧ ರವೀಂದ್ರ ಭಾಗವತ್ ಕಾಣಿಸಿಕೊಳ್ಳುತ್ತಿದ್ದು, ಹಿರಿಯ ನಟರಾದ ರಾಮಕೃಷ್ಣ, ರಮೇಶ್ ಭಟ್, ಸಾಯಿಪ್ರಕಾಶ್, ವಿನಯಪ್ರಸಾದ್, ಮೈಕೋಮಂಜು,ಮೂಗು ಸುರೇಶ್,ನಾಗೇಂದ್ರ ಪ್ರಸಾದ್,ಸತ್ಯಪ್ರಸಾದ್ , ಶಶಿ ಕೋಟೆ , ವಿವಿಧ ಪಾತ್ರಗಳಲ್ಲಿದ್ದಾರೆ.ಮಾ. ಲಿಖಿತ್ ಶರ್ಮ, ಮಾ. ಬಿ.ಎ. ರೋಹಿತ್ ಶರ್ಮಾ, ಬಾಲನಟರಾಗಿ ಬೆಳ್ಳಿತೆರೆಗೆ, ಪಾದಾರ್ಪಣೆ ಮಾಡಿದ್ದಾರೆ. ತೇಜಸ್ವಿನಿ, ಸುಧಾ,ಸುರೇಖಾ ಸುಕುಮಾರ್, ಉಷಾ ಮತ್ತಿತರರಿದ್ದಾರೆ.



ಡಾ. ಆರೂಢ ಭಾರತಿ ಸ್ವಾಮಿಗಳು ಸಂಸ್ಕೃತ ಸಂಭಾಷಣೆಯ ಜತೆಗೆ ವ್ಯಾಸ ಮಹರ್ಷಿಗಳ ಪಾತ್ರವನ್ನು
ನಿರ್ವಹಿಸಿದ್ದಾರೆ. ಅನುಭವವೀ ನಿರ್ದೇಶಕ ರಾಜಾ ರವಿಶಂಕರ್ ನಿರ್ದೇಶನದ ಈ ಚಿತ್ರಕ್ಕೆ ಸಿ.ನಾರಾಯಣ್ ಛಾಯಾಗ್ರಹಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಆರ್. ಡಿ. ರವಿ ಸಂಕಲನ ಮಾಡಿದ್ದಾರೆ. ಎಮ್ಮನೂರು ಕ್ರಿಯೇಶನ್ಸ್ ಬ್ಯಾನರ್ ನಡಿ, ವೃತ್ತಿಯಲ್ಲಿ ಲೆಕ್ಕಪರಿಶೋಧಕರಾಗಿರುವ
ವೈ. ಎನ್. ಶರ್ಮಾ ಮತ್ತು ವಿಜಯಲಕ್ಷ್ಮಿ ನಿರ್ಮಿಸಿರುವ ಈ ಚಿತ್ರ ಡಬ್ಬಿಂಗ್ ಮತ್ತಿತರ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಪೂರೈಸಿ ಕೊಳ್ಳುತ್ತಿದ್ದು, ಮಾರ್ಚ್ ತಿಂಗಳಲ್ಲಿ ತೆರೆ ಕಾಣಲಿದೆ.