ಮಾರ್ಕೆಟಿಂಗ್ ಸೊಸೈಟಿ ಮಹಾಸಭೆ

0
654

ವರದಿ: ಶ್ಯಾಮ್ ಪ್ರಸಾದ್. ಬದಿಯಡ್ಕ
ಕಾಸರಗೋಡು ಕೃಷಿಕರ ಕೋ ಓಪರೇಟಿವ್ ಮಾರ್ಕೆಟಿಂಗ್ ಸೊಸೈಟಿ ನೀರ್ಚಾಲು ಇದರ ವಾರ್ಷಿಕ ಮಹಾಸಭೆಯು ನೀರ್ಚಾಲು ಪ್ರಧಾನ ಕಛೇರಿಯಲ್ಲಿ ಜರಗಿತು. ಸೊಸೈಟಿಯ ಅಧ್ಯಕ್ಷ ಪದ್ಮರಾಜ್ ಪಟ್ಟಾಜೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
 
 
 
ಕೃಷಿಕರ ಎಲ್ಲಾ ಅಗತ್ಯತೆಗಳಿಗನುಸಾರವಾಗಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ಗುರಿಯೊಂದಿಗೆ ಸಂಸ್ಥೆಯನ್ನು ಮುನ್ನಡೆಸುತ್ತಿದ್ದೇವೆ. ಒಂದೇ ಸ್ಥಳದಲ್ಲಿ ಕೃಷಿಕರ ಮಾರುಕಟ್ಟೆ ಅಗತ್ಯಗಳನ್ನು ಪೂರೈಸುವ ಉದ್ದೇಶವಿದೆ. ಇದಕ್ಕೆ ಕೃಷಿಕರು ಸೂಕ್ತರೀತಿಯಲ್ಲಿ ಸ್ಪಂದಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.
 
 
 
ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಅಡಿಕೆಗೆ ಬೆಂಬಲ ಬೆಲೆಯನ್ನು ಘೋಷಿಸಿರುವುದಕ್ಕೆ ಕೇರಳ ಸರಕಾರವೂ ಸಕ್ರಿಯವಾಗಿ ಕೈಜೋಡಿಸಿ ಕೃಷಿಕರ ಸಂಕಷ್ಟಕ್ಕೆ ನೆರವಾಗಬೇಕು ಎಂಬ ಠರಾವನ್ನು ಮಂಡಿಸಲಾಯಿತು. ಕಾರ್ಯದರ್ಶಿ ಅಪ್ಪಣ್ಣ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಕ್ಯಾಂಪ್ಕೋ ಪ್ರತಿನಿಧಿಯಾಗಿ ಶಂಕರನಾರಾಯಣ ಕಿದೂರು, ವಿಘ್ನೇಶ್ವರ ಭಟ್, ಕೋರಿಕ್ಕಾರು ವಿಷ್ಣು ಭಟ್, ವಾಶೆ ಶ್ರೀಕೃಷ್ಣ ಭಟ್, ಬಾಲಕೃಷ್ಣ ಶೆಟ್ಟಿ ಕಡಾರು, ಶ್ಯಾಮ ಭಟ್ ಸರಳಿ, ರಾಮಕೃಷ್ಣ ಬೊಳುಂಬು ಮುಂತಾದವರು ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
 
 
 
ನಿರ್ದೇಶಕರುಗಳಾದ ರಾಧಾಕೃಷ್ಣ ಕೆದಿಲಾಯ, ಬಾಲಗೋಪಾಲ ಏಣಿಯರ್ಪು, ಶಶಿಕಲಾ, ರಜನಿ ಸಂದೀಪ್, ರವಿಶಂಕರ, ಭುಜಂಗ ಸೀತಂಗೋಳಿ ಮೊದಲಾದವರು ಉಪಸ್ಥಿತರಿದ್ದರು. ನಿರ್ದೇಶಕಿ ಸ್ಮಿತಾ ಸರಳಿ ಪ್ರಾರ್ಥನೆಗೈದರು. ನಿರ್ದೇಶಕ ರಾಮಕೃಷ್ಣ ಹೆಬ್ಬಾರ್ ಸ್ವಾಗತಿಸಿ, ಉಪಾಧ್ಯಕ್ಷ ದಿಲೀಪ್ ಕುಮಾರ್ ಧನ್ಯವಾದವನ್ನಿತ್ತರು.

LEAVE A REPLY

Please enter your comment!
Please enter your name here