ಮಾರುಕಟ್ಟೆಗೆ ಚೀನಿ ಮೌತ್ ಫ್ರೆಶ್ನರ್

0
342

 
ವಿಶೇಷ ಲೇಖನ
ಜಗಿದು ಉಗುಳುವ ಗುಟ್ಕಾಗೆ ಪರ್ಯಾಯವಾಗಿ ಚೀನಾದಲ್ಲಿ ತಯಾರದ ಬಹುನಿರೀಕ್ಷೆಯ ಅಡಕೆಯ ಮೌತ್ ಫ್ರೆಶ್ನರ್ ಉತ್ಪನ್ನ ಮಾರುಕಟ್ಟೆಗೆ ಲಗ್ಗೆಇಟ್ಟಿದೆ. ಅಲ್ಲದೆ ಈ ಉತ್ಪನ್ನ ಕರಾವಳಿ ಕರ್ನಾಟಕದ ಕ್ಯಾಂಪ್ಕೋ ಸಂಸ್ಥೆಯ ಕೈಗೂ ಸೇರಿದೆ.
 
 
ಚೀನಾ ಮೌತ್ ಫ್ರೆಶ್ನರ್ ತಯಾರಿಕೆಗೆ ಭಾರತದ ಕರಾವಳಿಯ 3,200 ಕ್ವಿಂಟಾಲ್ ಎಳೆ ಅಡಿಕೆಯನ್ನು ಸಂಗ್ರಹಿಸಿ ಕ್ಯಾಂಪ್ಕೋ ಸಂಸ್ಥೆ ಚೀನಾಕ್ಕೆ ಕಳುಹಿಸಿತ್ತು. ಅಲ್ಲದೆ ಚೀನೀ ಕಂಪನಿಗಳು ಎರಡು ಬಾರಿ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿ, ಕೃಷಿಕರ ತೋಟಗಳಿಂದ ಎಳೆ ಅಡಿಕೆ ಸಂಗ್ರಹಿಸಿತ್ತು.
 
ಹೇಗಿರಬೇಕು ಎಳೆಅಡಿಕೆ:
ಈ ಉತ್ಪಾನ್ನಕ್ಕೆ ರೋಗದಿಂದ ತುತ್ತಾದ ಅಡಿಕೆ ಮತ್ತು ಬಲಿತ ಅಡಿಕೆ ಬಳಕೆಯಾಗುವುದಿಲ್ಲ. ಸಿಪ್ಪೆರಹಿತ ಎಳೆ ಅಡಿಕೆ 2 ಇಂಚಿನಷ್ಟು ದೊಡ್ಡದಾಗಿರಬೇಕು. ಗೋಳಾಕಾರವಿರದೇ, ಉದ್ದವಾಗಿರಬೇಕು. ನಿರ್ದಿಷ್ಟ ಉಷ್ಣಾಂಶದಲ್ಲಿ ಒಣಗಿದ ಅಡಕೆ ಮೇಲ್ಭಾಗ ಉದ್ದನೆಯ ನೆರಿಗೆ ಇರಬೇಕು. ಬಿಸಲಿನಲ್ಲಿ ಒಣಗಿಸಿದ ಅಡಕೆ ಬಳಕೆಯಾಗುವುದಿಲ್ಲ. ಒಂದೇ ಸೈಸಿನ ಎಳೆ ಅಡಕೆಯನ್ನು ಬೇಯಿಸಿ, ಡೈಯರ್ ನಲ್ಲಿ ಒಣಗಿಸಿ ಮುಂದಿನ ಹಂತವಾಗಿ ಅಡಕೆಯ ಸಿಪ್ಪೆಯನ್ನು ಮೌತ್ ಫ್ರೆಶ್ನರ್ ಉತ್ಪಾದನೆಗೆ ಬಳಸುತ್ತದೆ.
 
 
ಹೇಗಿದೆ ಚೀನಿ ಮೌತ್ ಫ್ರೆಶ್ನರ್
ಎಳೆಅಡಿಕೆಯನ್ನು ಸಿಪ್ಪೆಸಹಿತ ಎರಡು ಹೋಳು ಮಾಡಿ, ಒಳಭಾಗದಲ್ಲಿ ದ್ರಾಕ್ಷಿ ತುಂಬಲಾಗುತ್ತದೆ. ಅಡಕೆಯ ತಿರುಳನ್ನು ತೆಗೆದು ಚಾಕೋಲೆಟ್ ರೀತಿಯ ಉತ್ಪನ್ನವನ್ನು ತುಂಬಲಾಗುತ್ತದೆ. ಎಳೆ ಅಡಿಕೆಯ ಸಿಪ್ಪೆ ಹಾಗೂ ದ್ರಾಕ್ಷಿಗೆ ಸಕ್ಕರೆ ಅಂಶ, ಮೆಂಥಾಲ್ ಮೊದಲಾದವನ್ನು ಸವರಲಾಗಿದೆ. ಇದನ್ನು ಚ್ಯುಯಿಂಗ್ ಗಮ್ ರೀತಿ ಜಗಿದು ರಸ ಹೀರಿದ ಬಳಿಕ ಉಗುಳಬೇಕು.

LEAVE A REPLY

Please enter your comment!
Please enter your name here