ಮಾಯಾವತಿ ಕುರಿತು ಅವಹೇಳನಾಕಾರಿ ಹೇಳಿಕೆ ನೀಡಿದ ಬಿಜೆಪಿ ನಾಯಕ

0
248

 
ವರದಿ: ಲೇಖಾ
ಉತ್ತರ ಪ್ರದೇಶದ ಬಿಜೆಪಿ ಉಪಾಧ್ಯಕ್ಷ ದಯಾಶಂಕರ ಸಿಂಗ್ ಅವರು ಬಿಎಸ್ ಪಿ ನಾಯಕಿ ಮಾಯಾವತಿ ಅವರನ್ನು ವೇಶ್ಯೆಗೆ ಹೋಲಿಸಿದ್ದಾರೆ.
 
 
ಸುದ್ದಿಗಾರರೊಂದಿಗೆ ಮಾಡುತ್ತಿದ್ದ ದಯಾಶಂಕರ ಸಿಂಗ್ ಅವರು ಮಾಯಾವತಿ ಅವರು ಟಿಕೆಟ್​ಗಳನ್ನು ಮಾರುತ್ತಿದ್ದಾರೆ… ಅವರು ಎಷ್ಟು ದೊಡ್ಡ ನಾಯಕಿ ಎಂದರೆ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದವರು… ಆದರೆ ಅವರು 1 ಕೋಟಿ ರೂಪಾಯಿಗಳನ್ನು ತಮಗೆ ಕೊಡುವ ಯಾರಿಗೆ ಬೇಕಾದರೂ (ಸ್ಪರ್ಧಿಸಲು) ಟಿಕೆಟ್ ಕೊಡುತ್ತಾರೆ. ಯಾರಾದರೂ 2 ಕೋಟಿ ರೂಪಾಯಿ ಜೊತೆಗೆ ಬಂದರೆ ಮಾಯಾವತಿ ಅವರಿಗೆ ಟಿಕೆಟ್ ಕೊಡುತ್ತಾರೆ. ಯಾರಾದರೂ 3 ಕೋಟಿ ರೂಪಾಯಿ ಕೊಟ್ಟರೆ ಅವರು ಹಿಂದಿನ ಅಭ್ಯರ್ಥಿಗಳಿಗೆ ಕೊಟ್ಟ ಟಿಕೆಟ್ ರದ್ದು ಪಡಿಸಿ ಮೂರನೇವರನ್ನು ಆಯ್ಕೆ ಮಾಡುತ್ತಾರೆ. ಈಗ ಅವರ ವ್ಯಕ್ತಿತ್ವ ವೇಶ್ಯೆಗಿಂತಲೂ ನಿಕೃಷ್ಟವಾಗಿದೆ’ ಎಂದು ಹೇಳಿದ್ದಾರೆ.
 
 
ಇದಕ್ಕೆ ಪ್ರತಿಕ್ರಿಯಿಸಿರುವ ಬಿಎಸ್​ಪಿ ನಾಯಕಿ ತಮ್ಮ ಪಕ್ಷ ರಾಜ್ಯದಲ್ಲಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ವ್ಯಕ್ತಗೊಂಡಿರುವ ಭ್ರಮ ನಿರಸನದ ಸಂಕೇತ ಇದು ಎಂದು ಹೇಳಿದ್ದಾರೆ.
ಬಿಜೆಪಿ ನಾಯಕ ದಯಾಶಂಕರ ಅವರ ಈ ಹೇಳಿಕೆ ರಾಜ್ಯಸಭೆಯಲ್ಲಿ ಗದ್ದಲ-ಕೋಲಾಹಲಕ್ಕೆ ಕಾರಣವಾಯಿತು.

LEAVE A REPLY

Please enter your comment!
Please enter your name here