ಮಾನಸ ಸರೋವರ ಯಾತ್ರೆಃ ಅರ್ಜಿ ಆಹ್ವಾನ

0
507

ಕೈಲಾಸ ಮಾನಸ ಸರೋವರ ಯಾತ್ರಿಕರಿಗೆ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ
ಬೆಂಗಳೂರು ಪ್ರತಿನಿಧಿ ವರದಿ
 2016-17 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಿಂದ ಪ್ರಥಮ ಬಾರಿಗೆ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡ ಯಾತ್ರಿಕರಿಗೆ ಸರ್ಕಾರ ಪ್ರೋತ್ಸಾಹ ಧನ ನೀಡಲು ಉದ್ದೇಶಿಸಲಾಗಿದೆ. ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳು ನೀಡಿರುವ ಮಾರ್ಗಸೂಚಿಗಳ ಷರತ್ತುಗಳಿಗೆ ಒಳಪಟ್ಟವರು ಮಾತ್ರ ಧನಸಹಾಯ ಪಡೆಯಲು ಅರ್ಹರಾಗಿರುತ್ತಾರೆ.
 
ಈ ಉದ್ದೇಶಕ್ಕಾಗಿ ಪಾಸ್‍ಪೋರ್ಟ್‍ನಲ್ಲಿ ನಮೂದಿಸಲಾಗಿರುವ ಕರ್ನಾಟಕ ರಾಜ್ಯದ ವಿಳಾಸವನ್ನು ಪರಿಗಣಿಸಲಾಗುವುದು. ಈಗಾಗಲೇ ಮಾನಸ ಸರೋವರ ಯಾತ್ರೆ ಕೈಗೊಂಡು ಸರ್ಕಾರದಿಂದ ಧನಸಹಾಯ ಪಡೆದ ಯಾತ್ರಿಕರು, ಇದೇ ಉದ್ದೇಶಕ್ಕಾಗಿ ಎರಡನೇ ಬಾರಿಗೆ ಈ ಧನಸಹಾಯ ಪಡೆಯಲು ಅರ್ಹರಾಗುವುದಿಲ್ಲ. ಸರ್ಕಾರದ ಮಾರ್ಗಸೂಚಿಗಳಿಗೆ ಒಳಪಟ್ಟು ಧನಸಹಾಯ ಪಡೆಯಲು ಇಚ್ಚಿಸುವ ಯಾತ್ರಿಕರು ತಾವು ಯಾತ್ರೆ ಮುಗಿಸಿದ್ದಕ್ಕೆ ಪಡೆಯುವ ಪ್ರಮಾಣ ಪತ್ರದ ದಿನಾಂಕದಿಂದ ನಾಲ್ಕು ತಿಂಗಳ ಒಳಗೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಈ ಕಚೇರಿಯಲ್ಲಿ ಖುದ್ದು ಪಡೆದು ಈ ಕೆಳಕಂಡ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು. ನಿಗದಿತ ಅವಧಿ ಮೀರಿ ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ವಿವರಗಳಿಗಾಗಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ. ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, 4ನೇ ಮಹಡಿ, ಮಿಂಟೋ ಶ್ರೀ ಆಂಜನೇಯ ವಾರ್ತಾ ಭವನ, ಆಲೂರು ವೆಂಕಟರಾವ್ ರಸ್ತೆ, ಚಾಮರಾಜಪೇಟೆ, ಬೆಂಗಳೂರು -18, ದೂರವಾಣಿ 080-26709689. .  Email:[email protected]
 

LEAVE A REPLY

Please enter your comment!
Please enter your name here