ಮಾನಸಿಕ ಮತ್ತು ದೈಹಿಕ ದೃಡತೆಗೆ ಯೋಗ ಅಗತ್ಯ : ದೇಲಂಪಾಡಿ

0
275

 
ಮಂಗಳೂರು ಪ್ರತಿನಿಧಿ ವರದಿ
ಡಿ.12 ಸೋಮವಾರದಿಂದ 23ವರೆಗೆ 10 ದಿನಗಳ ಉಚಿತ ಯೋಗ ಶಿಬಿರವನ್ನು ಜಿಲ್ಲಾ ಗೃಹರಕ್ಷಕದಳ ಮಂಗಳೂರು ಇಲ್ಲಿನ ಗೃಹರಕ್ಷಕರಿಗೆ ಹಮ್ಮಿಕೊಳ್ಳಲಾಗಿದ್ದು, ಖ್ಯಾತ ವೈದ್ಯ ಡಾ|| ಎಸ್. ಎಮ್. ಶರ್ಮ ಅವರು ಶಿಬಿರವನ್ನು ಉದ್ಘಾಟಿಸಿದರು.
 
 
ನಗರದ ಪೋಲಿಸ್ ಪೆರೇಡ್ ಮೈದಾನದಲ್ಲಿ ಬೆಳಗ್ಗೆ 7 ರಿಂದ 8 ಗಂಟೆಗಳವರೆಗೆ ಈ ಶಿಬಿರ ನಡೆಯಲಿದ್ದು ನಿರಂತರ 10 ನಡೆಯಲಿದೆ. ರೋಗ ಪ್ರಾಣಾಯಾಮ, ಧ್ಯಾನ, ಮುದ್ರೆ ಕಲರ್ ಥೆರಪಿ ಎಲ್ಲದರ ಬಗ್ಗೆ ವಿವರ ಮತ್ತು ಪ್ಯಾತ್ಯಕ್ಷಿರೆ ನಡೆಯಲಿದ್ದು ಎಲ್ಲರೂ ಶಿಬಿರದ ಪ್ರಯೋಜನ ಪಡೆಯಿರಿ ಎಂದು ಯೋಗಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಇವರು ಕರೆ ನೀಡಿದರು.
 
 
ಮಾನಸಿಕ ನೆಮ್ಮದಿ ಮತ್ತು ದೈಹಿಕ ದೃಡತೆಗೆ ಯೋಗ ಪೂರಕ ಮತ್ತು ಅತೀ ಅಗತ್ಯ ಎಂದು ಅಭಿಪ್ರಾಯಪಟ್ಟರು. ಶಿಬಿರವನ್ನು ಉದ್ಘಾಟಿಸಿದ ಡಾ|| ಶರ್ಮ ಅವರು ಮಾತನಾಡುತ್ತಾ ಸಮಾಜದ ನೆಮ್ಮದಿ ಮತ್ತು ಶಾಂತಿ ಕಾಪಾಡುವ ಗೃಹರಕ್ಷಕರು 24 ಗಂಟೆ ಕೆಲಸದ ಒತ್ತಡದಲ್ಲಿ ತಮ್ಮ ಆರೊಗ್ಯವನ್ನು ಹಾಳು ಮಾಡಿಕೊಳ್ಳಬಾರದು. ಇಂತಹ ಯೋಗ ಶಿಬಿರಗಳಿಂದ ಮಾನಸಿಕ ಒತ್ತಡ ಕಡಮೆಯಾಗಿ, ಹೆಚ್ಚು ಹುಮ್ಮಸ್ಸಿನಿಂದ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
 
ಜಿಲ್ಲಾ ಗೃಹರಕ್ಷಕದಳದ ಡಾ|| ಮುರಲೀ ಮೋಹನ್ ಚೂಂತಾರು ಅವರು ಪ್ರತಿಯೊಬ್ಬ ಗೃಹರಕ್ಷಕರ ಆರೋಗ್ಯದ ಹಿತದೃಷ್ಟಿಯಿಂದ ಈ ಉಚಿತ ಶಿಬಿರವನ್ನು ಜಿಲ್ಲಾ ಗೃಹರಕ್ಷಕ ದಳ ಆಯೋಜಿಸಿದೆ ಎಲ್ಲ ಗೃಹರಕ್ಷಕರೂ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದು ವಿನಂತಿಸಿದರು. ಸುಮಾರು 50 ಮಂದಿ ಗೃಹರಕ್ಷಕರು ಉತ್ಸಾಹದಿಂದ ಈ ಶಿಬಿರದಲ್ಲಿ ಭಾಗವಹಿಸಿದರು.
 
 
10 ದಿನಗಳ ಕಾಲ ನಡೆಯುವ ಈ ಶಿಬಿರ 23/12/16ರಂದು ಸಮಾರೋಪಗೊಳ್ಳಲಿದೆ ಮತ್ತು ಭಾಗವಹಿಸಿದ ಎಲ್ಲರಿಗೂ ಪ್ರಾಮಾಣಪತ್ರ ನೀಡಲಾಗುತ್ತದೆ. ಹಿರಿಯ ಗೃಹರಕ್ಷಕರಾದ ಬಾಸ್ಕರ್, ಅಶೋಕ್ ಕುಮಾರ್, ಸುರೇಶ್ ಶೇಟ್, ಕೇಶವ ಶೆಟ್ಟಿಗಾರ್, ಲೀಲಾ ಕುಕ್ಯಾನ್, ರಾಜಶ್ರೀ, ಅಭಿಮನ್ಯು ರೈ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here