ಮಾನವ ಹಕ್ಕುಗಳು ಎಂದಿಗೂ ಇರುವಂತಹದು ಸಮಾಜದ ಘನತೆಯನ್ನು ಕಾಯುವುದಕ್ಕಾಗಿ

0
406

ಉಜಿರೆ ಪ್ರತಿನಿಧಿ ವರದಿ
ಮಾನವ ಹಕ್ಕುಗಳು ಎಂಬುದು ಒಬ್ಬ ವ್ಯಕ್ತಿಗೆ ಆತನ ಘನತೆಯನ್ನು ಕಾಯುವುದಕ್ಕೆ ಸಹಕಾರ ನೀಡುತ್ತದೆ. ಆದ್ದರಿಂದ ಯಾವುದೇ ಸಮಾಜಕ್ಕೆ ಮಾನವ ಹಕ್ಕುಗಳು ಬಹುಮುಖ್ಯ. ಇದರಿಂದ ಸಮಾಜದ ಸ್ವಾಸ್ಥ್ಯ ಮತ್ತು ಘನತೆ ಕಾಪಾಡಿಕೊಳ್ಳುವುದು ಸಾಧ್ಯ ಎಂದು ಬೆಳ್ತಂಗಡಿ ನ್ಯಾಯಾಲಯದ ಹಿರಿಯ ಸ್ಯಾಯಾಧೀಶರಾದ ಜೆ ರಾಘವೇಂದ್ರ ಅಭಿಪ್ರಾಯಪಟ್ಟರು.
 
 
ಇವರು ಇತ್ತೀಚಿಗೆ ಉಜಿರೆಯ ಶ್ರೀ ಧ.ಮ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಝಾಟಿಸಿ ಮಾತನಾಡಿದರು. ವಿಶ್ವ ಸಂಸ್ಥೆ ಹೇಳಿರುವ ಎಲ್ಲಾ ಮೂಲಭೂತ ಹಕ್ಕುಗಳನ್ನು ನಮ್ಮ ಸಂವಿಧಾನವೇ ಪ್ರಜೆಗಳಿಗೆ ನೀಡಿದೆ. ತನ್ನ ಹಕ್ಕು ಉಲ್ಲಂಘನೆಯಾದಲ್ಲಿ ನೇರವಾಗಿ ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಕ್ಕು ಪ್ರಜೆಗಳಿಗಿದೆ. ಸಂವಿಧಾನವನ್ನು ಓದಿ ಎಲ್ಲಾ ಪ್ರಜೆಗಳು ಅದರ ಆಶಯವನ್ನು ತಿಳಯಬೇಕು. ಪ್ರತಿಯುಬ್ಬ ಪ್ರಜೆಯೂ ಇನ್ನೊಬ್ಬರ ಹಕ್ಕನ್ನು ಗೌರವಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
 
 
ನಂತರ ಮಾತನಾಡಿದ ಹಿರಿಯ ಸಿವಿಲ್ ಜಡ್ಜ್ ಸತೀಶ್ ಮಾಹಿತ್ ಹಕ್ಕು ಕಾಯ್ದೆ ಎಂಬುದುಪ್ರಜೆಯ ಬಹುದೊಡ್ಡ ಆಸ್ತಿ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ಜಡ್ಗ್ ಜಯಶಂಕರ್ ಮಾತನಾಡಿ ದೇಶ ಎಷ್ಟೇ ಮುಂದುವರಿದರೂ ಕೂಡ ಮಾನವ ಹಕ್ಕುಗಳ ಉಲ್ಲಂಘನೆಯಾದಲ್ಲಿ ಆ ದೇದಲ್ಲಿ ನಾಗರೀಕ ಸಮಾಜ ಇರುವುದು ಸಾಧ್ಯವಿಲ್ಲ ಎಂದರು.
 
 
ಕಾಲೇಜಿನ ಉಪಪ್ರಾಂಶುಪಾಲರಾದ ಟಿ ಎನ್ ಕೇಶವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ತೆ ಶಲೀಫ್ ಕುಮಾರಿ ಸ್ವಾಗತಿಸಿದರು. ವಿಭಾಗ್ಯದ ಉಪನ್ಯಾಸಕಿ ಸರಸ್ವತಿ ವಂದಿಸಿದರು. ವಿದ್ಯಾರ್ಥಿ ವಿಶಾಕ್ ಮತ್ತು ಅಶ್ರತ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here