ಮಾನನಷ್ಟ ಸಿವಿಲ್ ಅಲ್ಲ ಕ್ರಿಮಿನಲ್

0
451

 
ನವದೆಹಲಿ ಪ್ರತಿನಿಧಿ ವರದಿ
ಸುಪ್ರೀಂ ಕೋರ್ಟ್ ಐಪಿಸಿ ಸೆಕ್ಷನ್ 499 ಸಂವಿಧಾನದ ಬದ್ಧವೆಂದು ಹೇಳಿದೆ. ಇದರಿಂದ ಐಪಿಸಿ ಸೆಕ್ಷನ್ 499 ರದ್ದುಗೊಳಿಸಲು ಕೋರ್ಟ್ ನಕಾರ ಎಂದಿದೆ.
 
 
ಮಹತ್ವದ ಆದೇಶ ಪ್ರಕಟಿಸಿದ ಸುಪ್ರೀಂಕೋರ್ಟ್ ಮಾನನಷ್ಟ ಕೇಸ್ ಕ್ರಿಮಿನಲ್ ಮೊಕದ್ದಮೆ ಎಂದು ಪರಿಗಣನೆ ಮಾಡಿದೆ. ಇದು ಸಂವಿಧಾನದ ಬದ್ಧವೆಂದು ತೀರ್ಪು ನೀಡಿದೆ.
 
 
 
ಹೀಗಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಸಿಎಂ ಕೇಜ್ರಿವಾಲ್, ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಗೆ ಮನ್ನಣೆ ಸಿಗಲಿಲ್ಲ. ಇವರು ಐಪಿಸಿ ಸೆಕ್ಷನ್ 499 ಅಸಂವಿಧಾನಿಕ ಎಂದು ಕೋರಿದ್ದರು. ಅಲ್ಲದೆ ಮಾನನಷ್ಟ ಕೇಸ್ ಸಿವಿಲ್ ಕೇಸ್ ಎಂದು ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
 
 
ವಿಚಾರಣೆ ನಡೆಸುವಾಗ ಎಚ್ಚರಿಕೆಯಿಂದ ಕ್ರಮಕೈಗೊಳ್ಳಿ ಎಂದು ಕೆಳಹಂತದ ಕೋರ್ಟ್ ಗಳಿಗೆ ಸುಪ್ರೀಂ ಸೂಚನೆ ನೀಡಿದೆ.

LEAVE A REPLY

Please enter your comment!
Please enter your name here