ಮಾಧ್ಯಮಗಳಲ್ಲಿ ಕೃಷಿ : ಒಂದು ದಿನದ ಕಾರ್ಯಾಗಾರ

0
266

ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಭಾಗಿತ್ವದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಜಿ.ಕೆ.ವಿ.ಕೆ. ಆವರಣದ ಡೀನ್ (ಸ್ನಾತಕೋತ್ತರ) ಸಮ್ಮೇಳನ ಕೊಠಡಿಯಲ್ಲಿ ಸೆಪ್ಟೆಂಬರ್ 2 ರಂದು ಬೆಳಿಗ್ಗೆ 10-00 ಗಂಟಗೆ “ಮಾಧ್ಯಮಗಳಲ್ಲಿ ಕೃಷಿ” ಕುರಿತು ಒಂದು ದಿನ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್. ಆರ್. ವಿಶುಕುಮಾರ್ ಅವರು ಕಾರ್ಯಾಗಾರ ಉದ್ಫಾಟಿಸುವರು. ಕೃಷಿ ವಿಶ್ವ ವಿದ್ಯಾನಿಲಯದ ಕುಲಪತಿ ಡಾ. ಹೆಚ್.ಶಿವಣ್ಣ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಎನ್. ಚಂದ್ರಶೇಖರ್, ಬೆಂಗಳೂರು ಆಕಾಶವಾಣಿ ನಿಲಯ ನಿರ್ದೇಶಕರಾದ ಶ್ರೀಮತಿ ಬಿ.ವಿ. ಪದ್ಮ ಹಾಗೂ ಕೃಷಿ ಇಲಾಖೆಯ ನಿರ್ದೇಶಕ ಬಿ.ವೈ. ಶ್ರೀನಿವಾಸ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕಾರ್ಯಾಗಾರದಲ್ಲಿ ರೈತ ಪರ ಕೃಷಿ ಲೇಖನಗಳು ಕುರಿತಂತೆ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಅಭ್ಯುದಯ ಕೃಷಿ ಪತ್ರಿಕೋದ್ಯಮ ಕುರಿತಂತೆ ಹಿರಿಯ ಪತ್ರಕರ್ತರ ಈಶ್ವರ ದೈತೋಟ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೃಷಿ ಕುರಿತು ಕೆ. ಸುರೇಶ್‍ಕುಮಾರ್ ಅವರು ವಿಷಯ ಮಂಡನೆ ಮಾಡುವರು. ನಂತರ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

LEAVE A REPLY

Please enter your comment!
Please enter your name here