ಮಾದರೀ ಹುಟ್ಟುಹಬ್ಬ…

0
957

ಮೂಡುಬಿದಿರೆ: ಮಜಾಭಾರತ ಖ್ಯಾತಿಯ ಆರಾಧನಾ ಭಟ್‌ ತನ್ನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿ ಎಲ್ಲರಿಗೂ ಮಾದರಿಯಾದರು.ಕಳೆದ ವರುಷ ಅನಾಥಾಶ್ರಮದ ಮಂದಿಯೊಂದಿಗೆ ಹುಟ್ಟುಹಬ್ಬ ಆಚರಿಸಿದರೆ, ಈ ವರ್ಷ ವಿಭಿನ್ನವಾಗಿ ಆಚರಿಸಿ ಮಾದರಿಯಾದರು. ತಾನೇ ಹುಟ್ಟುಹಾಕಿ ನಡೆಸುತ್ತಿರುವ ವಾಟ್ಸ್‌ ಆಪ್‌ ಗ್ರೂಪ್‌ ” ಆರದಿರಲಿ ಬದುಕು ಆರಾಧನಾ ತಂಡದ” ವತಿಯಿಂದ ಹುಟ್ಟು ಹಬ್ಬದ ದಿನದಂದು ಎರಡು ಕಿಡ್ನಿ ವೈಫಲ್ಯದ ಅನಾರೋಗ್ಯ ದಿಂದ ಬಳಲುತ್ತಿರುವ ಕೊಡಂಗಲ್ಲು ನಿವಾಸಿ ಪದ್ಮಾವತಿ ಅವರಿಗೆ ಸಹಾಯ ಹಸ್ತ ನೀಡುವ ಮೂಲಕ ಮಾದರಿಯಾದರು. ತಂಡದ ಸದಸ್ಯರಾದ ಗಣೇಶ್ ಪೈ,ಅಭಿಷೇಕ್ ಶೆಟ್ಟಿ ಐಕಳ, ಶಿವಾನಂದ ಕೊಡಂಗಲ್ಲು, ರಾಮಕೃಷ್ಣ, ಆರಾಧನಾ ಅವರ ತಾಯಿ ಪದ್ಮಶ್ರೀ ಭಟ್ ನಿಡ್ಡೋಡಿ ಜೊತೆಗಿದ್ದರು.

LEAVE A REPLY

Please enter your comment!
Please enter your name here