ಮಾದರಿ ಸಮ್ಮೇಳನಕ್ಕೆ ಭರಪೂರ ತಯಾರಿ

0
256

ವರದಿ: ಪವಿತ್ರ ಬಿದ್ಕಲ್ಕಟ್ಟೆ
ಸಾಹಿತ್ಯವು ಸಮಾಜಕ್ಕೆ ವಿನೂತನ ಅರ್ಥವೊಂದರ ದಾರಿ ತೋರಿದರೆ, ಅದನ್ನು ಇಡೀ ಸಮಾಜವೇ ಒಪ್ಪುವಂತೆ, ವಿಮರ್ಶಿಸುವಂತೆ ಮಾಡುವ ಶಕ್ತಿ ಮಾಧ್ಯಮಕ್ಕಿದೆ ಎಂದು ಉಜಿರೆಯಲ್ಲಿ ನಡೆಯುವ 21ನೇ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಡಾ.ಎಂ.ಎಂ.ದಯಾಕರ ಅಭಿಪ್ರಾಯ ವ್ಯಕ್ತಪಡಿಸಿದರು.
 
 
 
ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಪಟ್ಟಂತೆ ಎಸ್ಡಿಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ನಡೆಸಿದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಅವಕಾಶಗಳು ಬಂದರೂ ಇನ್ನೊಬ್ಬರು ಅದನ್ನು ಮಾಡಲಿ ಎಂದುಕೊಳ್ಳುವುದು ಸರಿಯಾದ ಕ್ರಮವಲ್ಲ. ಅವಕಾಶಗಳ ಸದ್ಭಳಕೆಯತ್ತ ನಾವು ಗಮನಹರಿಸಬೇಕು. ಹೀಗಾಗಿ ನಮ್ಮಲ್ಲೇ ನಡೆಯುವ ಸಾಹಿತ್ಯ ಸಮ್ಮೇಳನದ ಪರಿಪೂರ್ಣ ಪ್ರಯೋಜನವನ್ನು ಜಿಲ್ಲೆಯ ಜನತೆ ಪಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮದ ವಿದ್ಯಾರ್ಥಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.
 
 
ಇನ್ನೊಬ್ಬರಲ್ಲಿ ಅತ್ಯುತ್ತಮವಾದದ್ದೇನನ್ನೋ ಹುಡುಕುವ ನಾವು ನಾವೇ ಉತ್ತಮರು ಎಂಬ ಪ್ರಜ್ಞೆ ಮೂಡಿಸಿಕೊಳ್ಳಬೇಕು. ನಮ್ಮ ಮೇಲೆ ನಮಗೆ ನಂಬಿಕೆ ದೃಢವಾದಾಗ ಮಾತ್ರ ನಾವು ಇತರರಿಗೆ ಮಾದರಿಯಾಗಬಲ್ಲೆವು. ಹೀಗಾಗಿ ಉಜಿರೆ ವಾತಾವರಣದಲ್ಲಿ ಮಾದರಿ ಸಾಹಿತ್ಯ ಸಮ್ಮೇಳನವನ್ನು ನಡೆಸುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದರು.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದಶರ್ಿ ಎಂ.ಪಿ.ಶ್ರೀನಾಥ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಭಾಸ್ಕರ್ ಹೆಗ್ಡೆ, ಉಪನ್ಯಾಸಕ ವೃಂದ, ಸಮ್ಮೇಳನದ ಸಂಘಟನಾ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here