ಮಾಡರ್ನ್ ಲೋಕದಜಾತಿ ಹುಳುಗಳ ನಡುವೆ ಸಿಲುಕಿದ ಪ್ರೇಮ : ಒಂದು ನೈಜಕಥನ

0
651

 
ಭಾರತೀಯ ಸಂಸ್ಕೃತಿ ,ಇತಿಹಾಸ ಎಷ್ಟು ಹಳೆಯದಾದರೂ ಇತರರಿಗೆ ಹೋಲಿಸಿದಾಗ ವಿಭಿನ್ನವಾಗಿದೆ. ಇದರ ಆಚರಣೆಯನ್ನು ಮಾಡುವುದುಕೂಡಾ ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ನಂತರ ಮಾತ್ರ ಅವನು ಭಾರತೀಯನಾಗಿ ಪರಿಪೂರ್ಣಗೊಳ್ಳುತ್ತಾನೆ ಮತ್ತು ಇದು ನಮ್ಮ ಜೀವನ ಕ್ರಮವಾದ್ದರಿಂದ ಇದನ್ನು ಒಪ್ಪಿಕೊಳ್ಳಬೇಕು ಕೂಡಾ, ಏಕೆಂದರೆ ಇವು ನಮ್ಮಅನನ್ಯತೆಯ ಪ್ರತೀಕ, ಆದುದರಿಂದ ಭಾರತೀಯ ಆಚಾರ ವಿಚಾರಗಳು, ರೂಢಿ ಸಂಪ್ರದಾಯಗಳು ಪಾಶ್ಚಿಮಾತ್ಯರ ಕಣ್ಣಲ್ಲಿ ಮೂಢನಂನಂಬಿಕೆಯೆಂದೆನಿಸಿದರೂ ಇವುಗಳ ಮೂಲಕವೇ ಭಾರತವನ್ನು ಗುರುತಿಸುವುದು ಮಾತ್ರ ಸುಳ್ಳಲ್ಲ. ಆದರೆ ಎಷ್ಟು ಇದನ್ನು ಆಚರಿಸಬೇಕಿತ್ತೋ ಅದಕ್ಕಿಂತ ತುಸು ಜಾಸ್ತಿಯಾದರೆ ಸಮಾಜದ ಸ್ವಾಸ್ಥ್ಯ ಕೆಡುವುದು. ಜಾತಿಗಳ ಮೇಲೆ ಕಲಹಗಳು ನಡೆಯುತ್ತಲೇ ಇರುತ್ತದೆ.
 
 
ಜಾತಿ ವ್ಯವಸ್ಥೆ ಭಾರತದಲ್ಲಿ ಹಾಸುಹೊಕ್ಕಾಗಿದೆ ಎಂಬುದರಲ್ಲಿ ಸಂದೇಹವಿಲ್ಲ, ಇಲ್ಲಿನ ಜಾತಿ, ಉಪಜಾತಿ ಇವೆಲ್ಲಗಳು ಸೇರಿ ಭಾರತೀಯ ಮನಸ್ಸನ್ನು Fragmentation ಮಾಡಿದೆ. ಹಳೇತಲೆಗಳು ಇದನ್ನು ಕಠೋರವಾಗಿ ನಂಬುತ್ತಿತ್ತು, ಆದರೆ ಇವಾಗೆಲ್ಲಾ ಹಾಗಿಲ್ಲಪ್ಪಾ. ಎಲ್ಲರೂ ಮಾಡರ್ನ್! ಅಂತಾರೆ ಜನ. ಆದರೆ ಇದು ಉಲ್ಟಾ ಹೊಡೆದು ಒಂದು ಕುಟುಂಬದ ಶಾಂತಿಯನ್ನೇಕಿತ್ತು ಹಾಕಿರುವುದು ಮಾಡರ್ನ್ ಜಗತ್ತಿನಲ್ಲಿ ಬ್ಯಾಕ್ಟೀರಿಯಾದಂತೆ ಅಂಟಿಕೊಂಡಿರುವ ಇಂಥಹ ಜಾತಿ ಹುಳುಗಳೇ ಈ ವಾಸ್ತವಿಕ ಬದುಕಿನಲ್ಲಿ ಅಮಾನವೀಯ ಕೆಲಸವನ್ನು ಮಾಡಿ ಹೇಗೆ ಒಂದು ಕುಟುಂಬದ ಶಾಂತಿ ಕದಡಿ ಹಾಕಿತು ಎಂದು ಬರೆಯ ಹೊರಟಿದ್ದೇನೆ.
 
 
ಉತ್ತರ ಕರ್ನಾಟಕದ ಒಂದು ತುಂಬು ಬಡಕುಟುಂಬ, ಜಾತಿ ವ್ಯವಸ್ಥೆಯಲ್ಲಿ ಉನ್ನತರಾಗಿದ್ದರೂ ಮನೆಯಲ್ಲಿ ಕಿತ್ತುತಿನ್ನುವ ಬಡತನ. ಎಷ್ಟೆಂದರೆ ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸಲೂ ಸಹ ಶಕ್ತನಿಲ್ಲದೆ ಇದ್ದ ಮನೆ ಯಜಮಾನ. ಆದರೂ ತಾವು ಪಡುತ್ತಿರುವ ಕಷ್ಟ ತನ್ನ ಮಕ್ಕಳೂ ಸಹ ಪಡಬಾರದೆಂಬ ಧೃಢ ನಿಶ್ಚಯದಿಂದ ವಿದ್ಯಾಭ್ಯಾಸ ಕೊಡಿಸಿ ಕೆಲಸ ಪಡೆದು ಸಂಪಾದನೆ ಮಾಡಿ ಅವರವರ ಕಾಲಲ್ಲಿ ನಿಲ್ಲುವಂತವರಾಗಬೇಕೆಂಬ ಹಂಬಲವಿತ್ತು ಆ ತಂದೆಗೆ. ಹೀಗೆ ಕೂಲಿ ಮಾಡಿ , ತನ್ನ ಪುಟ್ಟ ಜಮೀನನ್ನೂ ನೋಡಿಕೊಂಡು ಕೃಷಿಯನ್ನು ಮಾಡಿ ತನ್ನ ಎರಡು ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಹೊರಟ. ಪರಿಸ್ಥಿತಿ ಏನಾಗಿತ್ತೆಂದರೆ ಒಂದು ಸಮಯದಲ್ಲಿ ಮಕ್ಕಳ ಫೀಸು ತುಂಬಲಾರದೆ ಮನೆಯಲ್ಲಿದ್ದ ಒಡವೆಗಳನ್ನು ಅಡಮಾನವಾಗಿರಿಸಿ ಸಾಲಮಾಡಿದ. ಹೆಂಡತಿಯ ಕೊರಳಿನಲ್ಲಿರಬೇಕಾಗಿದ್ದ ಮಾಂಗಲ್ಯ ಕೂಡಾ ಬ್ಯಾಂಕಿನಲ್ಲಿಟ್ಟ. ಇಷ್ಟರಲ್ಲಿ ತನ್ನ ಎರಡು ಮಕ್ಕಳು ಸಹ ಪದವಿ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಿಯಾಯ್ತು. ಆದರೆ ಮುಂದೇನು ಅನ್ನುವುದು ತಂದೆಗೆ ಕಾಡಿತ್ತು. ಮಕ್ಕಳಂತೂ ಕಲಿಕೆಯಲ್ಲಿ ಎತ್ತಿದ ಕೈ. ಎಲ್ಲದರಲ್ಲೂ ಮುಂದು. ಆದರೆ ಹಣದ ಕೊರತೆಯೊಂದೇಕಾಡಿತ್ತು.
 
 
 
ಮನೆಯ ಸ್ಥಿತಿ ಅರಿತಿದ್ದ ಮಕ್ಕಳೂ ಕೂಡಾ ತಮ್ಮ ಉನ್ನತ ವ್ಯಾಸಂಗಕ್ಕೆ ಹಣವಿಲ್ಲದ್ದರಿಂದ ಮನೆಯಲ್ಲೇ ಉಳಿದುಬಿಟ್ಟರು. ಆದರೆ ತಂದೆ ಹೇಗಾದರು ಮಾಡಿ ಇವರನ್ನು ಓದಿಸಬೇಕು ಎಂಬ ಹಂಬಲ. ಮಕ್ಕಳಿಗೆ ಅರ್ಹತೆ ಇದೆ, ಆಸೆ ಇದೆ ಹೆಚ್ಚಾಗಿ ತಂದೆಗೆ ಓದಿಸಬೇಕೆಂಬ ಮನಸ್ಸಿದೆ ಆದರೆ ಹಣ ಹೊಂದಿಸುವುದೇ ಸಮಸ್ಯೆ, ಈಗಾಗಲೇ ಚಿನ್ನಾಭರಣಗಳನ್ನು ಅಡವಿಟ್ಟಾಯಿತು. ಅವಮಾನದಿಂದ ತಪ್ಪಿಸಲು ಮಕ್ಕಳಿಗೆ ಕತ್ತಲ್ಲಿ ಒಂದು ಚಿನ್ನದ ಸರಮಾಲೆಯನ್ನು ಹಾಕಬೇಕು ಎಂದು ನಿಶ್ಚಯ ಮಾಡಿದವನೇ ತನ್ನಲ್ಲಿದ್ದ ಅಲ್ಪ ಆಸ್ತಿಯನ್ನೂ ಸಹ ಮಾರ ಹೊರಟ, ಅಷ್ಟೊತ್ತಿಗಾಗಲೇ ಇನ್ನಿಲ್ಲಿದ್ದು ಏನೂ ಪ್ರಯೋಜನವಿಲ್ಲ ಎಂದು ಆತನ ತಮ್ಮಂದಿರು ಮನೆ ಬಿಟ್ಟು ಹೊರಟು ಹೋದರು ಈಗ ಆತ ಆಸ್ತಿ, ನೆಂಟರನ್ನು ಕಳೆದು ಕೊಂಡ ನಿರ್ಗತಿಕ. ಆದರೂ ದೃತಿಗೆಡದೆ ಬಾಡಿಗೆ ಮನೆಯಲ್ಲಿ ಇದ್ದು ತನ್ನ ಎರಡು ಮಕ್ಕಳಿಗೆ ಉನ್ನತ ವ್ಯಾಸಂಗ ಕೊಡಿಸಲು ಹೊರಟತದ ನಂತರ ಮೊದಲ ಮಗಳ ವಿದ್ಯಾಭ್ಯಾಸ ಪೂರ್ಣಗೊಂಡು ಕೆಲಸವು ದಕ್ಕಿತ್ತು. ಮನೆಯಲ್ಲಿ ಈಗ ಸಂತೋಷದ ಸಾಗರ. ಮತ್ತೊಂದು ವರ್ಷ ಬಿಟ್ಟು ಎರಡನೆ ಮಗಳು ಕೂಡ ತನ್ನ ಸ್ನಾತಕೊತ್ತರ ವ್ಯಾಸಂಗವನ್ನು ಪೂರ್ಣಗೊಳಿಸಿ ತಾನು ಸಹ ಅಕ್ಕನಂತೆ ಕೆಲಸವನ್ನು ಪಡೆದಳು.
 
 
 
ವಯಸ್ಸು ತುಂಬಿದ್ದರಿಂದ ತಂದೆಗೆ ಮಗಳಿಗೆ ಮದುವೆ ಮಾಡುವ ಯೋಚನೆ ಹಾಗೂ ಇದು ಕರ್ತವ್ಯವೂ ಆದುದರಿಂದ ಮದುವೆ ಮಾಡಲು ಹೋರಟು ನಿಂತಾಗ ಪುನಃ ಅದೇ ಹಣದ ಸಮಸ್ಯೆ ಈಗಾಲೇ ಎಲ್ಲಾವನ್ನು ಮಾರಿಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿರುವತಂದೆಗೆ ಒಂದು ಕಡೆಯಿಂದ ಮಗಳು ವಯಸ್ಸಿಗೆ ಬಂದಿದ್ದಾಳೆ, ಮಕ್ಕಳು ಕೇಳದಿದ್ದರೂ ತಂದೆಯಾದವನ ಕರ್ತವ್ಯ ಮಾಡಬೇಕು ಇನ್ನೊಂದೆಡೆ ಹುಡುಗ ಹುಡುಕುವುದೆಂದರೆ ಕೈಯಲ್ಲಿ ಹಣವಿಲ್ಲ. ಹಾಗಂತ ಹೇಳಿ ಯಾರನ್ನೋ ಕಟ್ಟಿಬಿಡಲಾಗುದಿಲ್ಲ ಎಂದು ಸಾಮನ್ಯವಾಗಿ ಹುಡುಗಿಯತಂದೆ ಅನಿಸುವುದು ಸಹಜ, ಮಗಳ ಕೈ ಹಿಡಿಯುವವನು ಅವಳನ್ನು ಚೆನ್ನಾಗಿ ಕೊನೆಯತನಕ ನೋಡಿಕೊಳ್ಳಬೇಕು ಎನ್ನುವುದು ಕೂಡಾ ಅಂದುಕೊಳ್ಳುವುದೇ .
 
 
 
ಎನೋ ಈಗ ಮಗಳು ದುಡಿಯುತ್ತಿರುವುದರಿಂದ ತನ್ನ ಸಾಲ ಸ್ವಲ್ಪ ಮಟ್ಟಿಗೆ ಸಂದಾಯವಾಗತೊಡಗಿತ್ತು. ಮಗಳ ಮದವೆಯ ಬಗ್ಗೆ ಚಿಂತಿಸುತ್ತಿದ್ದಾಗ ಆಕೆ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಆಕೆಯ ಜೊತೆಗಿದ್ದ ಸ್ನೇಹಿತ ಮನೆಯ ಸ್ಥಿತಿ ಕಂಡು ಯಾವುದೇ ಖರ್ಚು ಇಲ್ಲದೆ ತಾನು ಮದುವೆಯಾಗ ಬಯಸಿದ್ದ. ಅಂತೆಯೇ ಆಕೆಯ ಒಪ್ಪಿಗೆ ಯಿಂದ ತಂದೆಯೊಂದಿಗೆ ವಿಷಯವನ್ನು ಪ್ರಸ್ಥಾಪಿಸಿದ.ಆತನ ಮನೆಯಲ್ಲಿಯೂ ಇದಕ್ಕೆಯಾವುದೇ ವಿರೋಧವನ್ನು ವ್ಯಕ್ತ ಪಡಿಸಲಿಲ್ಲ. ಹುಡುಗಿಯ ತಂದೆಯೊಂದಿಗೆ ಮಗಳನ್ನು ಇಷ್ಟ ಪಟ್ಟಿರುವುದಾಗಿಯೂ ಅಂತೆಯೇ ಮದುವೆ ಮಾಡಿಕೊಡಬೇಕೆಂದೂ ಫೋನಾಯಿಸಿ ಕೇಳಿದ್ದ ಆತತನ್ನ ಹೆಸರು ,ಜಾತಿ ಎಲ್ಲಾವನ್ನು ಹೇಳಿಕೊಂಡಿದ್ದ. ಆದರೆ ಈತನ ಜಾತಿಯು ಆ ಹುಡುಗಿಯಜಾತಿಯು ಬೇರೆ ಬೇರೆ ಆಗಿತ್ತು.
 
 
ಈಕೆ ಸಮಾಜದಲ್ಲಿ ತುಸು ಉನ್ನತ ಜಾತಿಯಾದುದರಿಂದ ಸಹಜವಾಗಿಯೇ ತಂದೆಒಪ್ಪಿಗೆ ನೀಡಲಿಲ್ಲ, ಅಂದ ಮಾತ್ರಕ್ಕೆ ಹುಡುಗ ಎಲ್ಲಾವನ್ನು ನಿಜ ಹೇಳಿದರಿಂದ ಮತ್ತು ಮನೆಯ ಸ್ಥಿತಿಗತಿ ಕೂಡ ಚೆನ್ನಾಗಿ ಇರದಿದ್ದುದರ ಕಾರಣದಿಂದ ಎನಾನ್ನು ಪ್ರತಿಕ್ರಿಯಿಸಿದೆ ಯೋಚಿಸಿ ಹೇಳುವುದಾಗಿ ತಿಳಿಸಿದ್ದರು. ಆದರೆ ತಂದೆಗೆ ತನ್ನ ಎರಡನೇ ಮಗಳೂ ಕೂಡ ವಿವಾಹ ಘಟ್ಟಕ್ಕೆ ಬಂದಿದ್ದರಿಂದ ಮೊದಲ ಮಗಳ ವಿವಾಹವನ್ನ ಅನ್ಯಜಾತಿ ಹುಡುಗನೊಂದಿಗೆ ಮಾಡಿದರೆ ಎಲ್ಲಿತನ್ನಎರಡನೇ ಮಗಳ ಮದುವೆಯೂಕೈತಪ್ಪಿ ಹೋಗುವುದೋ ಎಂಬ ಆತಂಕ ಇನ್ನೋಂದಡೆ, ಬಡವರಾದ ಈ ತಂದೆಗೆ ಇರುವುದೊಂದು ಬಾಡಿಗೆ ಮನೆ ನೆಂಟರಂತು ಯಾರು ಇಲ್ಲ, ಮನೆಯ ಪರಿಸ್ಥಿತಿ ಹೇಗೂ ಹಾಳಾಗಿದೆ ಇದೀಗ ಮಗಳ ಪರಿಸ್ಥಿತಿಯನ್ನು ನೆನಸಿಕೊಂಡ ಅಳು ಬಂತು. ಮೊದಲ ಮಗಳಿಗೆ ಮದುವೆ ಮಾಡದೆ ಎರಡನೆಯಾವಳನ್ನು ಮದುವೆ ಮಾಡಿಕೊಟ್ಟರೇ ಎರಡನೆ ಹುಡುಗನ ಪೈಕಿ ಮೊದಲ ಮಗಳಿಗೆ ಮದುವೆ ಮಾಡದೇ ಎರಡನೆಯಾವಾಳಿಗೆ ಏಕೆ ಮದುವೆ ಮಾಡುತ್ತಿದ್ದಾನೆ ಎಂದು ಕೇಳಬಹುದು.
 
 
ಒಂದು ವೇಳೆ ಮೊದಲ ಮಗಳು ಬೇರೆಜಾತಿಯ ಹುಡುಗನನ್ನು ಮದುವೆಯಾಗುತ್ತಿದ್ದಾಳೇ ಎಂದು ಇವರಿಗೆ ಗೋತ್ತಾದರೆ ಸಂಬಂಧವೇ ಬೇಡ ಎಂದು ಹೋದರೆ ತನ್ನ ಎರಡನೆ ಮಗಳ ಗತಿಯೆನು ಎಂದು ಯೋಚಿಸಿದ. ಇವನಿಗೆ ಆ ಸಂದರ್ಭದಲ್ಲಿ ಮೊದಲ ಮಗಳ ಮದುವೆಯಾಗ ಬಯಸಿದ್ದ ಹುಡುಗ ಕರೆ ಮಾಡಿದ್ದ ತನಗೆ ಮದುವೆ ಮಾಡಿಕೊಡಲು ಇಷ್ಟವಿದ್ದರು ಎರಡನೆ ಮಗಳ ಭವಿಷ್ಯವನ್ನು ಒಬ್ಬತಂದೆಯಾಗಿ ನೋಡಿದಾಗ ಭಯಾವಾಗಿತ್ತದೆ, ಮೊದಲವಳಿಗೆ ಬೇರೆಜಾತಿಯ ಹುಡುಗನನ್ನು ಮದುವೆ ಮಾಡಿಕೊಟ್ಟಿದಾರೆ ಎಂಬ ವಿಷಯ ಎರಡನೆ ಮಗಳ ಹುಡುಗನ ಕಡೆಯಾವಾರಿಗೆ ತಿಳಿದರೆ ಆ ಮದುವೆಯು ಮುರಿದು ಬಿಳುತ್ತದೋ, ಒಬ್ಬ ಹೆಣ್ಣು ಹೆತ್ತ ತಂದೆಯಾಗಿ ತನ್ನ ಆತಂಕವನ್ನು, ಅಸಾಹಯಕತೆಯನ್ನು ವ್ಯಕ್ತ ಪಡಿಸಿದ್ದ ಅದರೆ ಹುಡುಗನ ಕೊರಿಕೆಯ ಮೇರಿಗೆ ಮತ್ತು ಸ್ವತಃ ತಂದೆಗೆ ಇಷ್ಟವಿದ್ದುದರಿಂದ ಎರಡನೆ ಮಗಳ ಮದುವೆಯಾದ ನಂತರ ಮದುವೆ ಮಾಡಿಕೊಡುವುದಾಗಿ ಹೇಳಿದ್ದ.
 
ಆ ಹೊತ್ತಿಗೆ ಎರಡನೆ ಮಗಳಿಗೂ ಸಂಬಂಧ ಬಂತು, ಒಳ್ಳೆಯ ಕೆಲಸ, ಕೈತುಂಬ ಸಂಪಾದನೆ ಆ ಹುಡುಗನಿಗೆ ಇತ್ತು. ಹೇಗೋ ತಂದೆ ಮೊದಲ ಮಗಳಿಗೆ ಮದುವೆಯ ಇಷ್ಟವಿಲ್ಲ ಆದ್ದರಿಂದ ಎರಡನೆ ಮಗಳನ್ನು ಮದುವೇ ಮಾಡಿಕೊಡುವುದಾಗಿ ಹೇಳಲು ನಿಂತಿದ್ದರು. ಉತ್ತಮ ಸಂಭಂದವೇನೋ ಇತ್ತು ಆದರೆ ಎಲ್ಲಿ ಅವರಿಗೆ ಮೊದಲ ಮಗಳು ಬೇರೆ ಜಾತಿಯವರನ್ನು ಮದುವೆಯಾಗುತ್ತಾಳೆ ಎಂಬ ಸುದ್ದಿ ತಿಳಿದು ಸಂಬಂಧ ನಿರಾಕರಿಸಿದರೆ ಎಂಬ ಭಯವು ಹುಟ್ಟತೊಡಗಿತ್ತು, ಅದರೆ ಇದಕ್ಕೆಲ್ಲ ಉಲ್ಟಾ ಹೋಡೆಯುವ ದಾರಿಯಲ್ಲಿಯೇ ವಿಧಿ ನಡೆದುಕೊಂಡಿತ್ತು. ಅವರ ಮನೆಯ ನೆರೆಹೊರೆಯ ಯುವಕ ತನ್ನಎರಡನೆ ಮಗಳನ್ನು ಮದುವೆಯಾಗಬೇಕಾದ ಹುಡುಗನ ಕಛೇರಿಯಲ್ಲಿಯೇ ಸಹೊದ್ಯೋಗಿಯಾಗಿದ್ದ. ಕಛೇರಿಯು ದೂರದ ರಾಜ್ಯ ಅಸ್ಸಾಂನ ಗ್ವಾಲಿಯರ್ ನಲ್ಲಿತ್ತು.
 
 
ಮನೆಯವರೊಂದಿಗೆ ಮದುವೆ ಪ್ರಸ್ತಾಪವಾಗಿತ್ತು. ಅದರೆ ಮಗಳ ತಂದೆ ನೆರೆಹೊರೆಯ ತನ್ನ ಎರಡನೆ ಮಗಳ ಹುಡುಗನ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ. ಹುಡುಗ ದೀಪಾವಳಿಗೆಂದು ಊರಿಗೆ ಬಂದಿದ್ದ ವೇಳೆ ತನ್ನಎರಡನೆ ಮಗಳ ಮದುವೆ ಸಂಬಂಧದ ಬಗ್ಗೆ ತಿಳಿಸಿದ್ದರು. ಅದರೆ ಗ್ವಾಲಿಯರ್ ನಲ್ಲಿ ಆತನೊಂದಿಗೆ ಕೆಲಸ ಮಾಡುವ ಯುವಕನೊಂದಿಗೆಎರಡನೆ ಮಗಳ ವಿವಾಹ ನಿಶ್ಚಯವಾಗಿದೆ ಎಂದು ಆತನಿಗೆ ತಿಳಿದಾಗಿತ್ತು. ಮೊದಲ ಮಗಳ ಕಥೆ ತಿಳಿದಿದ್ದ ಈತ ತಂದೆಯೊಂದಿಗೆ ಹೇಳಲೇ ಇಲ್ಲ. ಸೀದಾ ದೀಪಾವಳಿ ಮುಗಿಸಿ ಕೆಲಸಕ್ಕೆ ಹೊರಟವನೇ ಗ್ವಾಲಿಯರ್ ಗೆ ಬಂದು ತಲುಪಿದ್ದ ತದನಂತರ ತನ್ನೊಂದಿಗೆ ಕೆಲಸ ಮಾಡುವ ಆರ್ಥಾತ್ ಎರಡನೆ ಮಗಳನ್ನು ವರಿಸಬೇಕಾಗಿದ್ದ ಹುಡುಗ ಇಬ್ಬರು ಸೇರಿ ಖಾಸಗಿ ಹೋಟೆಲ್ ಗೆ ಊಟಕ್ಕೆ ಎಂದು ತೆರಳಿದರು. ಈ ಹೊತ್ತಿನಲ್ಲಿ ಮಾತಾನಾಡುತ್ತಿರುವ ವೇಳೆ ನನಗೆ ನಿಮ್ಮ ಊರಿನ ಹುಡುಗಿಯೊಂದಿಗೆ ವಿವಾಹ ಮಾತುಕಥೆಯಾಗಿರುವುದ್ದನ್ನು ತಿಳಿಸಿದ. ಈತ ಆಕೆಯನ್ನು ತಿಳಿದಿರುವುದಾಗಿಯೂ, ಈಕೆಗೊಬ್ಬಳು ಅಕ್ಕ ಇರುವುದಾಗಿಯೂ, ಆ ಹುಡುಗಿಗೆ ಬೇರೆ ಜಾತಿ ಯುವಕನೊಂದಿಗೆ ಮದುವೆಯಾಗುತ್ತಿರುವ ವಿಚಾರವನ್ನು, ಅಕ್ಕನಿಗೆ ಮೊದಲು ಮದುವೆ ಮಾಡದೇ ಇರಲು ಇರುವ ಕಾರಣವನ್ನೂ ತಿಳಿಸಿದ. ಹಾಗೂ ಅವಳ ಮದುವೆ ಬೇರೆ ಜಾತಿಯೊಂದಿಗೆ ಆದರೆ ಎಲ್ಲಿ ತಂಗಿಗೆ ಗಂಡು ಸಿಗುವುದಿಲ್ಲ ಎಂಬ ಕಾರಣದಿಂದ ತಂಗಿಗೆ ಮದುವೆ ಆದ ನಂತರವಷ್ಟೇ ಅಕ್ಕನ ಮದುವೆ ನಿಗದಿಯಾಗಿದೆಂದು ಹೇಳಿಯೇ ಬಿಟ್ಟ , ಅವರಿಗೆ ನಮ್ಮ ಜಾತಿಯಲ್ಲಿ ಏನು ಹುಡುಗರು ಕಮ್ಮಿಯಾಗಿತ್ತೇ ಅವರಿಗೆ? ಅಂತಹ ಕುಟುಂಬದ ಹೆಣ್ಣನ್ನು ನೀನು ಮದುವೆ ಆಗುವುದು ಒಳಿತಲ್ಲ. ಯಾಕೆಂದರೆ ಇದರಿಂದ ನಿನ್ನ ಗೌರವಕ್ಕೆ ಧಕ್ಕೆ ಬರುತ್ತದೆಂದು ಹಾಗಿದ್ದಾಗ ಯಾಕೆ ಈ ಸಂಬಂಧಕ್ಕೆ ಒಪ್ಪಿಕೊಳ್ಳಬೇಕು ಎಂದು ಊದಿಬಿಟ್ಟ.
 
 
ಈತನಿಗೆ ಮೊದಲೇ ಆ ಕುಟುಂಬದ ಮೇಲೆ ಬೂದಿಮುಚ್ಚಿದ ವೈಶಮ್ಯ ವಿತ್ತು, ಏಕೆಂದರೆ ಮೊದಲು ಈತ ಅಕ್ಕನನ್ನು ವರಿಸುತ್ತೇನೆಂದು ಕೇಳಿದಾಗ ಆಕೆ ಮತ್ತು ತಂದೆ ಖಡಾಖಂಡಿತವಾಗಿ ನಿರಾಕರಿಸಿದ್ದರು. ಅದೇ ಕಾರಣದಿಂದ ಯಾರೂ ಮದುವೆಯಾಗದೇ ಇರಲಿ ಎಂದು ವೈಶಮ್ಯ ಇಟ್ಟಿದ್ದ. ಆದರೆ ಇವನ ಮಾತು ಕೇಳಿದ ನಂತರ ಹುಡುಗ ನನಗೆ ಈ ಸಂಬಂಧ ಇಷ್ಟವಿಲ್ಲ, ಅಕ್ಕನಿಗೆ ಬೇರೆ ಜಾತಿಯ ಯುವಕನೊಂದಿಗೆ ಮದುವೆ ನಿಶ್ಚಯಿಸಿ ನಮ್ಮ ಘನತೆಯನ್ನು ಹಾಳು ಮಾಡಬೇಕೆಂದಿದ್ದೀರಾ. ನಿಮ್ಮ ಹಾಗೇ ನಮ್ಮನ್ನು ಸಹ ಜಾತಿ ಭೃಷ್ಟರನ್ನಾಗಿ ಮಾಡಬೇಡಿ ಎಂದು ಗದರಿದ. ಆದರೆ ಈ ಮಾತನ್ನು ಕೇಳಿದ ತಂದೆಗೆ ಹೆಣ್ಣು ಹೆತ್ತ ತಪ್ಪಿಗೆ ಇನ್ನು ಬದುಕುವುದೇ ಬೇಡವೆನಿಸಿತು. ಮಗಳ ಮದುವೆ ನಿಂತು ಹೋಯಿತು ಎಂದಾದಾಗ ಆಗುವ ಅವಮಾನವನ್ನು ಯಾವ ತಂದೆಯೂ ಸಹಿಸಲಾರ ಮಗುವಿನಂತೆ ಬಿಕ್ಕಿ ಬಿಕ್ಕಿಅತ್ತ, ಈ ಸಮಾಜವೇ ಹೀಗೆ. ಜಾತಿಗಾಗಿ ಸಂಬಂಧವನ್ನೇ ತೊರೆಯುವ ಹಾಳು ಜನರಿರುವ ತನಕ ಮಗಳ ಬಾಳು ಹಸನಾಗದು, ಆದರೆ ನನಗೆ ಅವಳ ಖುಷಿ , ಸಂತೋಷ ನೋಡಬೇಕು, ಒಬ್ಬಳ ಸಂತೋಷ ಒಂದು ಕಡೆಯಾದರೆ ಇನ್ನೊಬ್ಬಳ ದುಃಖ ಇನ್ನೊಂದೆಡೆ. ಈ ದ್ವಂದ್ವದಲ್ಲಿದ್ದ ಅವನು ಕೊನೆಗೇನೂ ತೋಚದೇ ಒಂದು ನಿರ್ಧಾರಕ್ಕೆ ಬಂದು ಬಿಟ್ಟವನೇ ಇದೇ ಕೊನೇಯ ದಾರಿ ಎಂದು ಈತನೇ ಆ ಮೊದಲ ಮಗಳ ಮದುವೆಯಾಗ ಬಯಸಿದ್ದ ಹುಡುಗನ ದೂರವಾಣಿಗೆ ಪೋನಯಿಸಿ ದುಃಖತೃಪ್ತನಾಗಿ ನಿನಗೆ ನನ್ನ ಮಗಳನ್ನು ಕೊಡಲಾಗುತ್ತಿಲ್ಲ ,ನನ್ನ ಮೊದಲ ಮಗಳನ್ನು ಕೊಟ್ಟರೆ ಶಾಶ್ವತವಾಗಿ ಎರಡನೆಯವಳು ಕತ್ತಲ ಬಾಳು ಬಾಳಬೇಕಾಗುತ್ತದೆ.
 
 
ನೀನು ಬೇರೆ ಜಾತಿ ಆದ್ದರಿಂದ ನನಗೇನೂ ಮಾಡಲಾಗುತ್ತಿಲ್ಲ, ತಂದೆಯಾದ ನನಗೆ ನನ್ನೆರಡೂ ಮಕ್ಕಳು ನನ್ನಕಣ್ಣಿದ್ದಂತೆ, ಒಂದನ್ನು ಕಳಕೊಂಡರೂ ಇನ್ನೊಂದು ಸದಾಕಣ್ಣೀರು ಸುರಿಸದೆ ಇರಲಾರದಪ್ಪಾ , ನಾನು ನಿನಗೆ ಮದ್ವೆ ಮಾಡಿದರೆ ನನ್ನ ಎರಡನೆಯವಳ ಗತಿಯೇನೆಂಬುದನ್ನು ಯೋಚಿಸಿದಾಗ ನನಗೇನು ಆಗುತ್ತದೋ ನನಗೇ ತಿಳಿಯದಪ್ಪಾ, ಯಾರೂ ಮಾಡದ ತಪ್ಪಿಗೆ ಶಾಶ್ವತವಾಗಿ ಕಳಂಕಿತರಾದರೆ ನನ್ನಂಥಾ ತಂದೆಯ ಗತಿಯೇನಪ್ಪಾ. ನಾನು ಸತ್ತರೂ ಸಂತೋಷ ಆದರೆ ನನ್ನ ಮಕ್ಕಳು? ಅವರಿಗೆ ಅನ್ಯಾಯವಾಗಬಾರದು , ದಯವಿಟ್ಟು ಅರ್ಥಮಾಡಿಕೊ. ನಮ್ಮ ಕುಟುಂಬದಲ್ಲಿ ಬಿರುಗಾಳಿಯಂತೆ ದಯವಿಟ್ಟು ಬರಬೇಡ. ನನ್ನ ಮಗಳನ್ನು ಮರೆತುಬಿಡು , ನಮ್ಮನ್ನು ಮರ್ಯಾದೆಯಿಂದ ಬದುಕಲು ಬಿಡು ಎಂದಾಗ ಏನೆನ್ನಬೇಕು ಆ ಹುಡುಗ …!!
 
 
ನಿಮ್ಮ ಸಂತೋಷವೇ ನನ್ನ ಸಂತೋಷ. ಆದರೆ ಒಂದಂತೂ ಸತ್ಯ ನಾನು ಮಾತಲ್ಲೀ ಜೀವನದಲ್ಲಿ ಯಾರನ್ನೂ ಮದುವೆಯಾಗುವುದಿಲ್ಲ, ಇಷ್ಟ ಪಟ್ಟಿದ್ದು ಒಬ್ಬಳನ್ನು ಅವಳೇ ಕೊನೆ ತನಕ ನನ್ನ ಹೃದಯದಲ್ಲಿರುತ್ತಾಳೆ, ನಾನು, ನನ್ನಿಂದ ನಿಮ್ಮ ನಂದಗೋಕುಲದಲ್ಲಿ ಬಿರುಗಾಳಿ ಬೀಸುವುದಾದಲ್ಲಿ ನನ್ನ ಪ್ರವೇಶಕ್ಕೆ ನಾನೇ ಅಂಕದ ಪರದೆಯನ್ನು ಎಳೆಯುತ್ತೇನೆ, ನಿಮ್ಮಜೀವನದಿಂದ ಹೊರಟು ಹೋಗುತ್ತೇನೆಆದರೆ ನೀವು ನಿಮ್ಮ ಮಗಳನ್ನು ಸುಖವಾಗಿರಿಸುತ್ತೀರೆಂಬ ಭರವಸೆಯಿಂದ ಎಂದು ಮನಸ್ಸಿನಲ್ಲಿ ಹೇಳಲಾರದ ದು:ಖವನ್ನಿಟ್ಟುಕೊಂಡು ಪೋನ್ ಕಟ್ ಮಾಡಿದ, ಮಿಗಿಲಾಗಿ ಜಾತಿ ಎಂಬ ವ್ಯಾಘ್ರಕ್ಕೆ ತನ್ನ ನಿಶ್ಕಲ್ಮಶ ಪ್ರೀತಿಯನ್ನೇ ತ್ಯಾಗ ಮಾಡಿದ. ಪ್ರಾಯಶ: ಇದಕ್ಕೇ ಇರಬಹುದೇನೂ ತಿಳಿದವರು ಅಂದಿದ್ದು ಪ್ರೀತಿ ಮಧುರ-ತ್ಯಾಗಅಮರ.
 
ಲೇಖನ: ಹರೀಶ್ ರಾವ್
ರಾಜ್ಯಶಾಸ್ತ್ರ ಉಪನ್ಯಾಸಕರು ,
ವಿವೇಕಾನಂದ ಕಾನೂನು ಮಹಾವಿದ್ಯಾಲಯ, ಪುತ್ತೂರು.

LEAVE A REPLY

Please enter your comment!
Please enter your name here