ಮಾಜಿ ಸಚಿವ ವಿಧಿವಶ

0
364

ರಾಷ್ಟ್ರೀಯ ಪ್ರತಿನಿಧಿ ವರದಿ
ಮಾಜಿ ವಿದೇಶಾಂಗ ಖಾತೆ ರಾಜ್ಯ ಸಚಿವ ಇ.ಅಹಮದ್ ಅವರು ವಿಧಿವಶರಾಗಿದ್ದಾರೆ. ಇಂದು ಮಧ್ಯರಾತ್ರಿ 2 ಗಂಟೆ ಸುಮಾರಿಗೆ RML ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
 
 
 
ಸಂಸತ್ ನ ಜಂಟಿ ಅಧಿವೇಶನದ ವೇಳೆ ಇ.ಅಹಮದ್ ಅಸ್ವಸ್ಥರಾಗಿದ್ದರು. ರಾಷ್ಟ್ರಪತಿ ಭಾಷಣದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಸಿಬ್ಬಂದಿಗಳು RML ಆಸ್ಪತ್ರೆಗೆ ದಾಖಲಿಸಿದ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
 
 
ಇವರು ಕೇರಳದ ಸಂಸದರಾಗಿದ್ದು, ಇಂಡಿಯಾನ್ ಮುಸ್ಲಿಂ ಲೀಗ್ ನ ಅಧ್ಯಕ್ಷರಾಗಿದ್ದಾರೆ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅವರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದರು.

LEAVE A REPLY

Please enter your comment!
Please enter your name here