ಮಾಂಬಳ ತಂಬುಳಿ

0
269

ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿಗಳು:
ಮಾಂಬಳ – ಬೇಕಾದಷ್ಟು, ತೆಂಗಿನತುರಿ – 1 ಕಪ್, ಹಸಿಮೆಣಸು – ಚಿಕ್ಕ ಚೂರು, ಸಾಸಿವೆ – 1/4 ಚಮಚ, ರುಚಿಗೆ ಉಪ್ಪು, ನೀರು 3 – 4 ಕಪ್
ಒಗ್ಗರಣೆಗೆ: ಎಣ್ಣೆ – 1 ಚಮಚ, ಸಾಸಿವೆ – 1/2 ಚಮಚ, ಚಿಟಿಕೆ ಇಂಗು, ಕರಿಬೇವು 4 – 5 ಎಲೆಗಳು.
 
 
ಮಾಡುವ ವಿಧಾನ:
ಮಾಂಬಳವನ್ನು ನೀರಿನಲ್ಲಿ ಸ್ವಲ್ಪ ಹೊತ್ತು ನೆನೆ ಹಾಕಿ. ನಂತರ ಅದಕ್ಕೆ ಹಸಿಮೆಣಸು, ತೆಂಗಿನತುರಿ, ಸಾಸಿವೆಯೊಡನೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣಕ್ಕೆ 3 ರಿಂದ 4 ಕಪ್ ನಷ್ಟು ನೀರು ಸೇರಿಸಿ ತೆಳ್ಳಗೆ ಮಾಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಒಗ್ಗರಣೆ ಸೌಟಿನಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ಮಾಡಿ ತಂಬುಳಿ ಮಿಶ್ರಣಕ್ಕೆ ಸೇರಿಸಿ. ತಯಾರಾದ ತಂಬುಳಿಯನ್ನು ಅನ್ನದೊಡನೆ ಸರ್ವ್ ಮಾಡಿ.

LEAVE A REPLY

Please enter your comment!
Please enter your name here