ಮಹಿಳೆಯರು ಕುಟುಂಬ ಹಾಗೂ ಗ್ರಾಮಗಳ ಬೇರುಗಳು 

0
370

 
ವರದಿ-ಚಿತ್ರ: ಸುನೀಲ್ ಬೇಕಲ್
ಮಹಿಳೆಯರು ಜಾಗೃತರಾದರೆ ಕುಟುಂಬ ಅಭಿವೃದ್ಧಿಯೊಂದಿಗೆ ಗ್ರಾಮಗಳ ಅಭಿವೃದ್ಧಿ ಸಾಧ್ಯ.ಮಹಿಳೆಯರು ಕುಟುಂಬ ಹಾಗೂ ಗ್ರಾಮಗಳ ಮೂಲ ಬೇರುಗಳಿದ್ದಂತೆ. ಕೇವಲ ವರ್ಷಕ್ಕೊಮ್ಮೆಆದಾಯ ಕಾಣುವ ನಾವು ಖರ್ಚಿನ ಬಗ್ಗೆ ಹಿಡಿತ ಮಾಡಬೇಕು. ಸ್ವಸಹಾಯ ಸಂಘಗಳಲ್ಲಿ ಸೇರಿಕೊಂಡ ಮಹಿಳೆಯರು ಸುಜ್ಞಾನವಂತರಾಗಿ ಸಮಾಜವನ್ನು ಮುನ್ನಡೆಸುವಂತಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನುಡಿದರು.
 
 
ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಸಹಾಧನದಡಿಯಲ್ಲಿ ಹೂಳೆತ್ತಲಾದ ತಾಲೂಕಿನ ಹೆಬ್ಬಳ್ಳಿ ಗ್ರಾಮದಕೆರೆಯನ್ನು ಸಾರ್ವಜನಿಕರಿಗೆ ಸಮರ್ಪಿಸಿ, ಕೆರೆದಂಡೆಯ ಮೇಲೆ ಗಿಡ ನೆಡುವುದರೊಂದಿಗೆ ಜಿಲ್ಲೆಯ ಜಲಾನಯನ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
 
 
 
ಕೆರೆಗೆ ಹಾರ ಎಂಬ ಕಥೆಯನ್ನು ನೆನಪಿಸಿದ ಹೆಗ್ಗಡೆಯವರು ಹಿಂದಿನ ಕಾಲದಲ್ಲಿ ಕೆರೆ ಕಟ್ಟೆ ತೋಡಿಸಿ ನೀರು ಸಿಗದಿದ್ದಾಗ ಸ್ತ್ರೀಯರನ್ನು ಬಲಿ ನೀಡುವ ಪರಿಪಾಠವಿತ್ತು. ಆದರೀಗ ಅಂತಹ ಸ್ಥಿತಿ ಇಲ್ಲ. ಬದಲಾಗಿ ದೈತ್ಯಾಕಾರದ ಯಂತ್ರಗಳು ಕೆಲವೇ ದಿನಗಳಲ್ಲಿ ಎಷ್ಟು ದೊಡ್ಡಕೆರೆಯನ್ನು ಬೇಕಾದರೂ ನಿರ್ಮಿಸಬಲ್ಲವು. ಅಲ್ಪ ಹಣದಲ್ಲಿ ಅತ್ಯಂತ ಸುಂದರವಾದ ಕೆರೆಹೆಬ್ಬಳ್ಳಿಯಲ್ಲಿ ನಿರ್ಮಾಣವಾಗಿದ್ದು ಇದನ್ನು ಸಂರಕ್ಷಿಸಿಕೊಂಡು ಹೋಗುವ ಜವಾಬ್ದಾರಿ ತಮ್ಮೆಲ್ಲರ ಮೇಲಿದೆ. ಸರ್ವಪಾಪ ನಿವಾರಣೆಗೂ ಗಂಗೆಯೇ ಬೇಕು. ಆದರೆ ಅಂತರ್ಜಲದ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು ಭೂಮಿಗೆ ನೀರುಣಿಸುವ ಕೆಲಸವನ್ನು ನಾವೆಲ್ಲಾ ಒಟ್ಟಾಗಿ ಮಾಡಬೇಕಾಗಿದೆಎಂದರು.
 
 
ಕೆರೆ ಏರಿಯ ಸುತ್ತಲೂ ಇನ್ನೂರಕ್ಕೂ ಹೆಚ್ಚು ವಿವಿಧ ಹಣ್ಣು ಹೂವಿನ ಗಿಡಗಳ ನಾಟಿ ಮಾಡುವ ಕಾರ್ಯಕ್ರಮಕ್ಕೆ ಹೆಗ್ಗಡೆಯವರು ಸ್ವತಃ ಮಾವಿನ ಗಿಡ ನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಿದರು. ನಂತರ ಸ್ವಸಹಾಯ ಸಂಘದ ಇನ್ನೂರಕ್ಕೂ ಹೆಚ್ಚು ಮಹಿಳೆಯರು ಗಿಡ ನೆಟ್ಟು ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಹೆಬ್ಬಳ್ಳಿ ಶಿವಾನಂದ ಮಠದ ಬ್ರಹ್ಮಾನಂದ ಸ್ವಾಮಿಗಳು ಹೆಗ್ಗಡೆಯವರನ್ನು ಸನ್ಮಾನಿಸಿದರು.
 
 
ಸಮಾರಂಭದಲ್ಲಿಗ್ರಾಮಾಭಿವೃದ್ಧಿಯೋಜನೆಯಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಎಚ್. ಮಂಜುನಾಥ್, ಪ್ರಾದೇಶಿಕ ನಿರ್ದೇಶಕರಾದ ಎನ್.ಜಯಶಂಕರ ಶರ್ಮ, ಹೆಬ್ಬಳ್ಳಿ ಗ್ರಾ.ಪಂ ಅಧ್ಯಕ್ಷೆ ರತ್ನವ್ವ ಸುಣಗಾರ್, ಉಪಾಧ್ಯಕ್ಷ ರಮೇಶ್ ಧಾರವಾಡ, ತಾ.ಪಂ ಸದಸ್ಯ ಮಲ್ಲಪ್ಪ ಬಾವಿಕಟ್ಟೀ ಮೊದಲಾದವರು ಉಪಸ್ಥಿತರಿದ್ದರು.
 
 
 
ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಜಿಲ್ಲಾ ನಿರ್ದೇಶಕ ದಿನೇಶ್ ಎಂ. ಪ್ರಸ್ಥಾವಿಸಿ ಸ್ವಾಗತಿಸಿದರೆ, ನವಲಗುಂದ ಯೋಜನಾಧಿಕಾರಿ ಸತೀಶ್ಎಚ್. ನಿರೂಪಿಸಿದರು. ಹೆಬ್ಬಳ್ಳಿ ಗ್ರಾ.ಪಂ ಅಭಿವೃದ್ಧಿಅಧಿಕಾರಿ ಬಿ.ಡಿ ಚೌರಡಿ ವಂದಿಸಿದರು. ಆಡಳಿತ ಯೋಜನಾಧಿಕಾರಿ ಗಣಪತಿ ಮಾಳಂಜಿ ಸಹಕರಿಸಿದರು.

LEAVE A REPLY

Please enter your comment!
Please enter your name here