ಮಹಿಳೆಯರಿಗಾಗಿ ವಿಶೇಷ ವ್ಯವಸ್ಥೆ

0
279

ರಾಷ್ಟ್ರೀಯ ಪ್ರತಿನಿಧಿ ವರದಿ
ಇನ್ಮುಂದೆ ಕೇರಳದ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯರಿಗೆ ಟಾಯ್ಲೆಟ್ ವಿಚಾರವಾಗಿ ಕಿರಿಕಿರಿ ಇರುವುದಿಲ್ಲ. ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ರಾಜ್ಯದ ಹತ್ತು ರೈಲ್ವೆ ನಿಲ್ದಾಣಗಳಲ್ಲಿ ‘ಶಿ ಟಾಯ್ಲೆಟ್’ ವ್ಯವಸ್ಥೆ ಮಾಡಲಾಗುತ್ತದೆ.
 
 
ಈ ವ್ಯವಸ್ಥೆಯನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಆರಂಭಸಿದ್ದು, ಅ.27ರಂದು ಆರಂಭಗೊಳ್ಳಲಿದೆ. ರಾಜ್ಯದ ಕಾಸರಗೋಡು. ಕಾಞಂಗಾಡು, ಪಯ್ಯನ್ನೂರು, ಕಣ್ಣೂರು, ತಿರುವನಂತಪುರಂ, ವಡಗರ, ತ್ರಿಶೂರು, ಶೋರ್ನೂರು, ತಿರೂರು, ಪಾಲಕ್ಕಾಡ್ ರೈಲು ನಿಲ್ದಾಣಗಳಲ್ಲಿ ತಲಾ 5.25 ಲಕ್ಷ ರೂ. ವೆಚ್ಚದಲ್ಲಿ ‘ಶಿ-ಟಾಯ್ಲೆಟ್’ ವ್ಯವಸ್ಥೆ ಮಾಡಲಾಗಿದೆ.
 
 
ಈ ಶೌಚಾಲಯದ ಸೌಲಭ್ಯಕ್ಕಾಗಿ ಹಣ ಪಾವತಿಸಬೇಕಿಲ್ಲ. ಮಹಿಳಾ ಪ್ರಯಾಣಿಕರು ಉಚಿತವಾಗಿ ಬಳಸಬಹುದು. ಇದರಲ್ಲಿ ನಾಪ್ಕಿನ್ ಕೂಡ ಇದ್ದು, ವೆಂಡಿಂಗ್ ಮೆಷಿನ್ ಗೆ 5ರೂ. ಹಾಕಿದರೆ ನಾಪ್ಕಿನ್ ಲಭಿಸುತ್ತದೆ. ಶೌಚಾಲುದಲ್ಲಿ ಜನರಿದ್ದಾರೆಯೇ ಎಂದು ತಿಳಿಯಲು ಸಿಗ್ನಲ್ ಲೈಟ್ ಗಳನ್ನು ಆಳವಡಿಸಲಾಗಿದೆ.

LEAVE A REPLY

Please enter your comment!
Please enter your name here