ಮಹಾರಾಷ್ಟ್ರದಲ್ಲಿ ಮುಂದುವರಿದ ಧಾರಾಕಾರ ಮಳೆ

0
234

 
ರಾಷ್ಟ್ರೀಯ ಪ್ರತಿನಿಧಿ ವರದಿ
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ವರುಣನ ಅರ್ಭಟ ಹೆಚ್ಚಾಗಿದೆ. ಇದರಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ 7 ಸೇತುವೆಗಳು ಜಲಾವೃತವಾಗಿದೆ.
 
 
ವೇದಗಂಗಾ ನದಿಯ ಜತ್ರಾಟ-ಭೀವಶಿ ಮಾರ್ಗದ ಸೇತುವೆ, ಅಕ್ಕೋಳ-ಸಿದ್ನಾಳಮ ಭೋಜವಾಡಿ-ಹುನ್ನುರಗಿ ಸೇತುವೆ, ಮಲಿಕವಾಡ-ದತ್ತವಾಡ,ಸದಲಗಾ-ಬೋರಗಾಂವ ಸೇತುವೆ, ಕೃಷ್ಣಾ ನದಿಯ ಕಲ್ಲೋಳ-ುಯಡೂರು ಸೇತುವೆಗಳು ಜಲಾವೃತವಾಗಿದೆ.
 
 
ಮಹಾರಾಷ್ಟ್ರದ ರಾಜಾಪೂರ ಡ್ಯಾಂನಿಂದ ಕೃಷ್ಣಾ ನದಿಗೆ ನೀರು ಬೀಡಲಾಗಿದೆ. ರಾಜಾಪೂರ ಡ್ಯಾಂನಿಂದ 1.775 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹಿಪ್ಪರಗಿ ಬ್ಯಾರೇಜ್ ನಿಂದ ಆಲಮಟ್ಟಿ ಡ್ಯಾಂಗೆ ನೀರು ಬಿಡುಗಡೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್ ನಿಂದ 1.20ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾಗಿದೆ.

LEAVE A REPLY

Please enter your comment!
Please enter your name here