ಮಹಾರಾಜರ ಮದುವೆ ಬಲು ಜೋರು…

0
553

 
ಮೈಸೂರು ಪ್ರತಿನಿಧಿ ವರದಿ
ಮೈಸೂರು ಅರಮನೆಯಲ್ಲೀಗ ಮದುವೆಯ ಸಂಭ್ರಮವೇರಿದೆ. ರಾಜಗುರುಗಳ ಸಲಹೆಯಂತೆ ಮದುವೆ ಮುಹೂರ್ತ ಬದಲಾಗಿದೆ.
 
 
ಜೂನ್ 27ಕ್ಕೆ ಮೈಸೂರಿನ 27ನೇ ರಾಜವಶಸ್ಥನ ಮದುವೆ ಅದ್ದೂರಿಯಾಗಿ ನಡೆಯಲಿದೆ. ರಾಜವಂಶಸ್ಥ ಯದುವೀರ ಶ್ರೀಕೃಷ್ಣದತ್ತ ಚಾಮರಾಜ ಒಡೆಯರ್‌–ತ್ರಿಶಿಕಾಕುಮಾರಿ ಸಿಂಗ್‌ ವಿವಾಹಕ್ಕೆ ಭರ್ಜರಿ ತಯಾರಿ ನಡೆದಿದೆ. ಜೂನ್ 27ಕ್ಕೆ ಮದುವೆ, ಜೈನ್ 28 ಮತ್ತು 29ಕ್ಕೆ ಆರತಕ್ಷತೆ ನಡೆಯಲಿದೆ.
 
 
ಮದುವೆ ‘ಲಗ್ನಪತ್ರಿಕೆ’ ಶಾಸ್ತ್ರವನ್ನು ಅಂಬಾವಿಲಾಸ ಅರಮನೆಯ ಚಾಮುಂಡಿತೊಟ್ಟಿಯಲ್ಲಿ ಸೋಮವಾರ ಬೆಳಿಗ್ಗೆ 10.15ರಿಂದ 10.40ರ ಒಳಗಿನ ಶುಭ ‘ಮಿಥುನ’ ಲಗ್ನದಲ್ಲಿ ನೆರವೇರಿಸಲಾಯಿತು.
 
 
ಅರಮನೆಯ ರಾಜಪುರೋಹಿತರು, ಜೋಯಿಸರು, ಧರ್ಮಾಧಿಕಾರಿಗಳ ನೇತೃತ್ವದಲ್ಲಿ ನಡೆದ ‘ಲಗ್ನಪತ್ರಿಕೆ’ ಶಾಸ್ತ್ರ ಸಮಾರಂಭದಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಹಾಗೂ ರಾಜಸ್ತಾನ ಡುಂಗರಪುರದ ರಾಜವಂಶಸ್ಥರಾದ ತ್ರಿಶಿಕಾಕುಮಾರಿ ಸಿಂಗ್‌ ಅವರ ತಂದೆ ಹರ್ಷವರ್ಧನ್‌ ಸಿಂಗ್‌ ಹಾಗೂ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here