ಮಹಾರಾಜರ ಮದುವೆಗೆ ರುಚಿರುಚಿ ಭೋಜನ

0
418

 
ಮೈಸೂರು ಪ್ರತಿನಿಧಿ ವರದಿ
ಸಾಂಸ್ಕೃತಿಕ ನಗರಿ ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜನಗರ ಒಡೆಯರ್ ಮತ್ತು ರಾಜಸ್ಥಾನ ರಾಜಕುಮಾರಿ ತ್ರಿಷಿಕಾ ವಿವಾಹ ಸಮಾರಂಭಕ್ಕೆ ಬಂದ ಅತಿಥಿಗಳಿಗೆ ಭೂರಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಅರಮನೆಯ ಎದುರಿಗೆ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ.
 
mysore king mrg dish
 
ದಕ್ಷಿಣ ಹಾಗೂ ಉತ್ತರ ಭಾರತದ ಸಾಂಪ್ರದಾಯಕ ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕಾಗಿ 150 ಬಾಣಸಿಗರು ಅಡುಗೆ ಕಾರ್ಯದಲ್ಲಿ ನಿರತರಾಗಿದ್ದರು.
 
 
 
ಮೈಸೂರು-ದಕ್ಷಿಣ ಭಾರತ ಶೈಲಿಯ ನಾನಾ ಭಕ್ಷ್ಯ, ಭೋಜನ ವ್ಯವಸ್ಥೆ ಮಾಡಲಾಗಿದೆ. ವಿವಾಹ ಮಹೋತ್ಸವದ ರುಚಿರುಚಿ ಭೋಜನದ ವಿವರ
ಮಧ್ಯಾಹ್ನ 12.30ಕ್ಕೆ ಅರಮನೆಯಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಸುಮಾರು 800 ಮಂದಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ. ಹೆಸರುಬೇಳೆ, ಕೆಲೆಬೇಳೆ ಕೋಸುಂಬರಿ, ಶ್ಯಾವಿಗೆ, ಒಣಹಣ್ಣಿನ ಗೊಜ್ಜು, ಮಾವಿನಕಾಯಿ ಚಟ್ನಿ, ಆಲೂಗಡ್ಡೆ ಪಲ್ಯ, ಬೀನ್ಸ್ ಪಲ್ಯ, ಅಂಬೋಡೆ, ಬಾದಾಮಿ ಪಾಯಸ, ಲಡ್ಡು, ಮೆಣಸಿನಕಾಯಿ ಬಜ್ಜಿಹಪ್ಪಳ, ಸೆಂಡಿಗೆ, ಬಿಸಿ ಬೇಳೆಬಾತ್, ಅಕ್ಕಿರೊಟ್ಟಿ, ಚನ್ನಾಮಸಾಲ, ಅನ್ನ, ಮಜ್ಜಿಗೆ, ಶ್ಯಾವಿಗೆ ಪಾಯಸ, ನಿಪ್ಪಟ್ಟು, ಪೂರಿ-ಕೂರ್ಮ ಬಡಿಸಲಾಗಿದೆ.
ಬೆಳಗ್ಗೆ ಸುಮಾರು 400 ಮಂದಿಗೆ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಕಾಶಿ ಹಲ್ವಾ, ಉಪ್ಪಿಟ್ಟು, ಚಟ್ನಿ, ತಟ್ಟ ಇಡ್ಲಿ, ಈರುಳ್ಳಿ ದೋಸೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here