ಮಹಾರಾಜರ ಮದುವೆಗೆ ಕ್ಷಣಗಣನೆ

0
356

ಮೈಸೂರು ಪ್ರತಿನಿಧಿ ವರದಿ
ಸಾಂಸ್ಕೃತಿಕ ನಗರಿ ಮೈಸೂರು ಅರಮನೆಯಲ್ಲಿ ಮದುವೆ ಸಂಭ್ರಮ ಮುಗಿಲುಮುಟ್ಟಿದೆ. ಮಹಾರಾಜ ಯದುವೀರ್ ಮತ್ತು ತ್ರಿಷಿಕಾ ಕುಮಾರಿ ಮದುವೆ ಕ್ಷಣಗಣನೆ ಆರಂಭವಾಗಿದೆ.
 
yaduveertrishika marg
ಬೆಳಗ್ಗೆ 9 ಗಂಟೆ 35 ನಿಮಿಷದಲ್ಲಿ ಸಲ್ಲುವ ಶುಭ ಲಗ್ನದಲ್ಲಿ 24 ವರ್ಷದ ಯದುವೀರ್ ಕೃಷ್ಣದತ್ತ ಚಾಮರಾಜನಗರ ಒಡೆಯರ್ ಅವರು 22 ಹರೆಯದ ತ್ರಿಷಿಕಾ ಅವರನ್ನು ವರಿಸಲಿದ್ದಾರೆ.
 
 
ಮಹಾರಾಜರ ವಿವಾಹ ಮಹೋತ್ಸಕ್ಕೆ ಗಣ್ಯರು ದಂಡೇ ಆಗಮಿಸುತ್ತಿದೆ. ಲಗ್ನ ಪತ್ರ ಇದ್ದರವರಿಗೆ ಮಾತ್ರ ಮದುವೆ ಅವಕಾಶ ನೀಡಲಾಗಿದೆ.
 
 
 
ಅರಮನೆಯಲ್ಲಿ ಬೆಳಗಿನಿಂದ ಮದುವೆ ಶಾಸ್ತ್ರಗಳು ಒಂದಾದ ಒಂದು ಜರಗುತ್ತಿದೆ. ಕನ್ಯಾ ನಿರೀಕ್ಷಣೆ, ಮಹಾಸಂಕಲ್ಪ, ಗೋತ್ರ ಪ್ರವರ, ಕನ್ಯಾದಾನ, ಅಕ್ಷತಾರೋಪಣೆ, ಸಂಬಂಧ ಮಾಲೆ, ಕಂಕಣಧಾರಣೆ, ದಾಕ್ಷಾಯಿಣಿ ಪುಜೆ, ಮಾಂಗಲ್ಯಧಾರಣೆ, ಅಗ್ನಿಮುಖಲಾಜ ಹೋಮ, ಆರತಿ, ಶ್ರೀಮಠಗಳ ಫಲಮಂತ್ರಾಕ್ಷತೆ, ಗಾಹು ದೇವಸ್ಥಾನಗಳಿಂದ ಪ್ರಸಾದ ಸಮರ್ಪಣೆ, ಗಣಪತಿ ಪೂಜೆ, ಬೃಹಸ್ಪತಿ ಪೂಜೆ. ಕನ್ಯಾ ಪ್ರತಿಗ್ರಹ ಪೂಜೆ, ರಾತ್ರಿ 7.30ಕ್ಕೆ ಉರುಟಣೆ, ಉಯ್ಯಾಲೆ ಕಾರ್ಯಕ್ರಮ ನಡೆಯಲಿದೆ.
 
 
 
28 ರಂದು ದರ್ಬಾರ್ ಹಾಲ್ ನಲ್ಲಿ ಆರತಕ್ಷತೆ ಕಾರ್ಯಕ್ರಮಕ್ಕೆ ಜನರಿಗೆ ಅವಕಾಶ ನೀಡಲಾಗಿದೆ. ಜುಲೈ 2ರಂದು ಬೆಂಗಳೂರು ಅರಮನೆಯಲ್ಲಿ ಆರತಕ್ಷತೆ ನಡೆಯಲಿದೆ. ಯದುವೀರ್ ಕಾರಿನಲ್ಲಿ ಅರಮನೆಯ ಸುತ್ತ ಒಂದು ಸುತ್ತು ಬಂದಿದ್ದಾರೆ. ಐದೂ ದಿನ ಯದುವೀರ್ ವಿಶೇಷ ಪೋಷಾಕು ಧರಿಸಲಿದ್ದಾರೆ.
ನವದಂಪತಿಗೆ ಅರುಂಧತಿ ನಕ್ಷತ್ರ ದರ್ಶನ, ಧ್ರುವ ನಕ್ಷತ್ರ ದರ್ಶನ ನಡೆಯಲಿದೆ.
 
 
 
ವಿಶೇಷ ಭೋಜನ:
ಅರಮನೆಯಲ್ಲಿ ವಿಶೇಷ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಸುಮಾರು 400 ಮಂದಿಗೆ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಕಾಶಿ ಹಲ್ವಾ, ಉಪ್ಪಿಟ್ಟು, ಚಟ್ನಿ, ತಟ ಇಡ್ಲಿ, ಈರುಳ್ಳಿ ದೋಸೆ ಮಾಡಲಾಗಿದೆ.
 
 
ಮಧ್ಯಾಹ್ನ 12.30ಕ್ಕೆ ಅರಮನೆಯಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಭಕ್ಷ್ಯ ಪಟ್ಟಿಯಲ್ಲಿ ದಕ್ಷಿಣ ಭಾರತ ಶೈಲಿ ತಿನಿಸುಗಳಿವೆ. ಸುಮಾರು 800 ಮಂದಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ. ಹೆಸರುಬೇಳೆ, ಕಡಲೆಬೇಳೆ ಕೋಸುಂಬರಿ, ಶ್ಯಾವಿಗೆ, ಒಣಹಣ್ಣಿನ ಗೊಜ್ಜು, ಮಾವಿನಕಾಯಿ ಚಟ್ನಿ, ಆಲೂಗಡ್ಡೆ ಪಲ್ಯ, ಬೀನ್ಸ್ ಪಲ್ಯ, ಅಂಬೋಡೆ, ಬಾದಾಮಿ ಪಾಯಸ, ಬಿಸಿ ಬೇಳೆಬಾತ್, ಅಕ್ಕಿರೊಟ್ಟಿ, ಚನ್ನಾಮಸಾಲ, ಅನ್ನ, ಮಜ್ಜಿಗೆ ಇದೆ.

LEAVE A REPLY

Please enter your comment!
Please enter your name here