ಮಹಾಬ್ರಹ್ಮರಥೋತ್ಸವ

0
154

ಚಿತ್ರದುರ್ಗ ಪ್ರತಿನಿಧಿ ವರದಿ
ಅದ್ಭುತ ಶಕ್ತಿಯ ಬೆಲಗೂರಿನಲ್ಲಿ ಮಹಾ ರಥೋತ್ಸವಕ್ಕೆ ಸಿದ್ಧತೆ
ನಡೆದಾಡುವ ಆಂಜನೇಯ ನೆಲೆಸಿದ್ದಾನೆಂಬ ಖ್ಯಾತಿಯ ಬಿಂದುಮಾಧವ ಶರ್ಮ ಸ್ವಾಮೀಜಿಯ ಸಾನ್ನಿಧ್ಯ ಹೊಂದಿರುವ ಬೆಲಗೂರಿನಲ್ಲಿ ಜಾತ್ರೋತ್ಸವದ ಸಿದ್ಧತೆಗಳು ನಡೆಯುತ್ತಿವೆ.
 
chitradurga-temple1
 
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀಕ್ಷೇತ್ರ ಬೆಲಗೂರುನಲ್ಲಿರುವ ಶ್ರೀ ಲಕ್ಷ್ಮಿ ನಾರಾಯಣ ಹಾಗೂ ಶ್ರೀ ವೀರಪ್ರತಾಪ ಆಂಜನೇಯ ಸ್ವಾಮೀಯವರ ಮಹಾಬ್ರಹ್ಮರಥೋತ್ಸವ ಡಿಸೆಂಬರ್ 10ರಿಂದ 14ರವರೆಗೆ ನಡೆಯಲಿದೆ.
 
 
 
ಶ್ರೀಕ್ಷೇತ್ರದ ಗುರುಗಳಾದ ಶ್ರೀ ಶ್ರೀ ಬಿಂದುಮಾಧವ ಶರ್ಮಾ ಸ್ವಾಮೀಜಿಯವರ ಮಾರ್ಗದರ್ಶನಲ್ಲಿ ಎಲ್ಲಾ ಕಾರ್ಯಕ್ರಮಗಳು ನಡೆಯಲಿದ್ದು ಪೂರ್ವಭಾವೀಕಾರ್ಯಗಳು ಪ್ರಾರಂಭಗೊಂಡಿವೆ.
 
 
ಡಿ.10ರಂದು ರಥೋತ್ಸವ ಆರಂಭವಾಗಲಿದ್ದು, ಡಿ.11ರಂದು ಬೆಳಗ್ಗೆ ಲಕ್ಷ್ಮೀಕಲ್ಯಾಣೋತ್ಸವ ಮತ್ತು ಸಂಜೆ ಸೀತಾಕಲ್ಯಾಣೋತ್ಸವ ನಡೆಯಲಿದೆ.
 
 
ಡಿ.12ರಂದು ಮಹಾಬ್ರಹ್ಮರಥೋತ್ಸವ ನಡೆಯಲಿದ್ದು, ಡಿ.13ರಂದು ಲಕ್ಷ್ಮೀನಾರಾಯಣಹೃದಯ ಹೋಮ ರಾಮತಾರಕ ಹೋಮ ನಡೆಯಲಿದೆ. ಡಿ.14ರಂದು ಬೆಳಗ್ಗೆ ದತ್ತಜಯಂತಿ, ಸಾಧುಪೂಜೆ, ದತ್ತಮೂಲ ಮಂತ್ರ ಹೋಮ ನಡೆಯಲಿದ್ದು, ಸಂಜೆ ಪುಷ್ಪೋತ್ಸವ ನಡೆಯಲಿದೆ. .

LEAVE A REPLY

Please enter your comment!
Please enter your name here