ಮಹತ್ವದ ಒಪ್ಪಂದಗಳಿಗೆ ಸಹಿ

0
301

ನಮ್ಮ ಪ್ರತಿನಿಧಿ ವರದಿ
2ಬಿಲಿಯನ್ ಗೂ ಅಧಿಕ ಮಹತ್ವದ ರಕ್ಷಣಾ ಒಪ್ಪಂದಗಳಿಗೆ ಅಮೆರಿಕ ಪ್ರವಾಸದಲ್ಲಿರುವ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅ ಸಹಿ ಮಾಡಿದ್ದಾರೆ.
ಸೋಮವಾರ ಅಮೆರಿಕಕ್ಕೆ ತೆರಳಿದ್ದ ಪರಿಕ್ಕರ್ ಅವರು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಷ್ಟನ್ ಕಾರ್ಟರ್ ರನ್ನು ಭೇಟಿ ಮಾಡಿದರು. ನಂತರ ಉಭಯ ನಾಯಕರು ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಮಾಡಿದ್ದಾರೆ. ಒಪ್ಪಂದದಲ್ಲಿ ಉಭಯ ದೇಶಗಳ ನಡುವಿನ ರಕ್ಷಣಾ ಪರಿಕರ ವಿನಿಮಯ ವಿಚಾರವೂ ಒಳಗೊಂಡಿರುವುದು ಪ್ರಮುಖವೆಂದು ಬಣ್ಣಿಸಲಾಗಿದೆ.
ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಭಾರತಕ್ಕೆ ರಕ್ಷಣಾ ತಂತ್ರಜ್ಞಾನಗಳ ಹಸ್ತಾಂತರಕ್ಕೆ ಅಮೆರಿಕ ಸಿದ್ಧವಾಗಿದೆ ಎಂದು ಅಮೆರಿಕಾ ತಿಳಿಸಿದೆ. ಇಲ್ಲಿನ ರಕ್ಷಣಾ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಸಿದ್ಧವಿರುವುದಾಗಿ ಮನೋಹರ್ ಪರಿಕ್ಕರ್ ಭೇಟಿ ವೇಳೆಗೆ ಅಮೆರಿಕಾ ರಕ್ಷಣಾ ಕಾರ್ಯದರ್ಶಿಗಳು ಸ್ಪಷ್ಟ ಪಡಿಸಿದ್ದಾರೆ. ಇಷ್ಟೇ ಅಲ್ಲದೆ ಭಾರತಕ್ಕೆ ಎಲ್ಲಾ ರೀತಿಯ ಅಗತ್ಯ ತಾಂತ್ರಿಕ ಹಾಗೂ ರಕ್ಷಣಾ ತಂತ್ರಜ್ಞಾನ ಒದಗಿಸಲು ಅಮೆರಿಕಾ ಉತ್ಸುಕವಾಗಿದೆ ಎಂದು ರಕ್ಷಣಾ ಕಾರ್ಯದರ್ಶಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here