ಮಸಾಲೆ ಕಡ್ಲೆಕಾಯಿ

0
419

 
ವಾರ್ತೆ ರೆಸಿಪಿ
ಬೇಕಾಗುವ ಪದಾರ್ಥಗಳು:
1/2 ಪಾವು ಬೆಳ್ಳಗೆ ಹುರಿದು, ಸಿಪ್ಪೆತೆಗೆದು, ವಿದಳ ಮಾಡಿದ ಕಡಲೆಕಾಯಿಬೀಜ, 1ಟೀ.ಚ. ಕರಿ ಮೆಣಸು ಕಾಳಿನ ಪುಡಿ, ಅಚ್ಚಮೆಣಸಿನ ಕಾಯಿ ಪುಡಿ, ಕರಿಬೇವು ಸೊಪ್ಪಿನ ಪುಡಿ (ಕರಿಬೇವು ಸೊಪ್ಪನ್ನು ಒಣಗಿಸಿ ಪುಡಿಮಾಡಬೇಕು), 1/2ಟೀ.ಚ ಅರಶಿನ, 2ಚಿಟಿಕೆ ಇಂಗು, 1/4 ಟಿ. ಚ ಉಪ್ಪು, 2 ಟೆ.ಚ. ಕಡಲೆಕಾಯಿ ಎಣ್ಣೆ
 
 
ತಯಾರಿಸುವ ವಿಧಾನ:
ಮೊದಲು ಕರಿ ಮೆಣಸು ಕಾಳಿನ ಪುಡಿ, ಅಚ್ಚಮೆಣಸಿನ ಕಾಯಿ ಪುಡಿ, ಅರಶಿನ, ಕರಿಬೇವು ಸೊಪ್ಪಿನ ಪುಡಿ ಮತ್ತು ಇಂಗು ಎಲ್ಲವನ್ನು ಬೆರಸಿ ಮಿಶ್ರಣ ಮಾಡಿಕೊಳ್ಳಿ. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಮಾಡಿ. ಅದಕ್ಕೆ ಮೇಲೆ ಮಾಡಿದ ಮಿಶ್ರಣ ಹಾಕಿ ಸ್ವಲ್ಪ ಹಸಿ ವಾಸನೆ ಹೋಗುವತನಕ ಸಣ್ಣ ಉರಿಯಲ್ಲಿ ಹುರಿಯಿರಿ. ಈಗ ಇದಕ್ಕೆ ಕಡಲೆಬೀಜ ಹಾಕಿ ಒಂದು ನಿಮಿಷ ಹುರಿಯಿರಿ. ಇದಕ್ಕೆ ಉಪ್ಪು ಸೇರಿಸಿ ಚೆನ್ನಾಗಿ ಬೆರಸಿ. ಈಗ ಮಸಾಲೆ ಕಡ್ಲೆಕಾಯಿ ರೆಡು ಟು ಈಟ್.

LEAVE A REPLY

Please enter your comment!
Please enter your name here