ಮಳೆ ಪ್ರಮಾಣ

0
267

 
ಮಂಗಳೂರು ಪ್ರತಿನಿಧಿ ವರದಿ
ದ.ಕ ಜಿಲ್ಲೆಯಲ್ಲಿ ಕಳೆದ ವರ್ಷದ ಮಳೆ ಪ್ರಮಾಣ 1038.4 ಮಿ.ಮೀಗೆ ಹೋಲಿಸಿದಲ್ಲಿ ಈ ವರ್ಷ ಜೂನ್ 29 ರವರೆಗೆ ಜಿಲ್ಲೆಯಲ್ಲಿ 1030.0 .ಮಿಮೀ ಮಳೆಯಾಗಿದ್ದು ಇದು ಕಳೆದ ವರ್ಷದ ಮಳೆ ಪ್ರಮಾಣಕ್ಕಿಂತ 8.4 ಮಿ.ಮೀ ಕಡಿಮೆ ಪ್ರಮಾಣವಾಗಿದೆ.
 
2016 ರ ಜನವರಿಯಿಂದ 2016ರ ಜೂನ್ 29 ರವರೆಗೆ ಬಂಟ್ವಾಳದಲ್ಲಿ 10.54.6ಮಿ.ಮೀ ಮಂಗಳೂರಿನಲ್ಲಿ 1187.6 ಮಿ.ಮೀ ಅತ್ಯಧಿಕ ಮಳೆ, ಪುತ್ತೂರು 920.0 ಮತ್ತು ಸುಳ್ಯದಲ್ಲಿ 911.5 ಮಿ.ಮೀ ಕನಿಷ್ಠ ಪ್ರಮಾಣದ ಮಳೆಯಾಗಿದೆ.
 
ಇದೇ ಮೇಲ್ಕಂಡ ಅವಧಿಯಲ್ಲಿ ಕಳೆದ ವರ್ಷ ಬೆಳ್ತಂಗಡಿಯಲ್ಲಿ ಅತ್ಯಧಿಕ 1207.4 ಮಿ.ಮೀ ಮಳೆಯಾಗಿದ್ದರೆ ಮಂಗಳೂರಿನಲ್ಲಿ ಕನಿಷ್ಠ 780.8 ಮಿ.ಮೀ ಮಳೆಯಾಗಿತ್ತು.
ಸರಾಸರಿ ಪ್ರಮಾಣದಲ್ಲಿ 2015 ರ ಜೂನ್ 29 ರಂದು ಜಿಲ್ಲೆಯಲ್ಲಿ 7.1 ಮಿ.ಮೀ ಮಳೆಯಾಗಿದ್ದರೆ 2016 ರ ಜೂನ್ 29 ರಂದು 108.1 ಮಿ.ಮೀ ಮಳೆಯಾಗಿದೆ.
ಸಾಧಾರಣವಾಗಿ ಜನವರಿಯಿಂದ ಜೂನ್ ವರೆಗೆ ಜಿಲ್ಲೆಯ ಬಂಟ್ವಾಳದಲ್ಲಿ 1218.0, ಬೆಳ್ತಂಗಡಿಯಲ್ಲಿ 1208.0, ಮಂಗಳೂರಿನಲ್ಲಿ 1248.0, ಪುತ್ತೂರು 1192.0 ಮತ್ತು ಸುಳ್ಯದಲ್ಲಿ 1015.0 ಮಿ.ಮೀ ಮಳೆಯಾಗಬೇಕಿತ್ತು.

LEAVE A REPLY

Please enter your comment!
Please enter your name here