ಮಳೆಯ ಅವಾಂತರ…

0
379

 
ಕೋಲಾರ ಪ್ರತಿನಿಧಿ ವರದಿ
ಬಿಸಿಲ ಬೇಗೆಯಿಂದ ಬೆಂದ ಕೋಲಾರ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದೆ. ಆದರೆ ಇಲ್ಲಿನ ಜನರು ಒಂದೆಡೆ ಮಳೆ ಬಂತೆಂದು ಖುಷಿ ಪಟ್ಟರೆ, ಮತ್ತೊಂದೆಡೆ ಸಂಕಷ್ಟ ಅನುಭವಿಸುವಂತಾಗಿದೆ. ಹೌದು ವರುಣನ ಅರ್ಭಟಕ್ಕೆ ಹಲವೆಡೆ ಅವಾಂತರ ಸೃಷ್ಠಿಯಾಗಿದೆ. ಚಿನ್ನದನಾಡಲ್ಲಿ ಬಿದ್ದ ಮಳೆಗೆ ರೈತರ ಬದುಕು ಬರ್ಬಾದ್ ಆಗಿದೆ.
 
 
 
ಮಳೆಯಿಂದಾಗಿ ರೈತರು ಬೆಳೆಸಿದ ಬೆಳೆಗಳು ನೀರುಪಾಲಾಗಿದೆ. ದಿಢೀರ್ ಮಳೆಗೆ ಮಾವು, ಪಪ್ಪಾಯಿ ಬೆಳೆಗಳು ನಾಶವಾಗಿದೆ. ವರುಣನ ಆರ್ಭಟಕ್ಕೆ ಬಾಳೆ ಬೆಳೆ ಕೊಚ್ಚಿ ಹೋಗಿದೆ.
 
 
ಅಲ್ಲದೆ ಭಾರೀ ಗಾಳಿ-ಮಳೆಗೆ ಹಲವೆಡೆ ಮನೆಯ ಮೇಲ್ಛಾವಣಿಗಳು ಹಾರಿಹೋಗಿದೆ. ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಇದರಿಂದ ಬಿಸಿಲ ಧಗೆಗೆ ಬೆಂದು ಮಳೆಗಾಗಿ ಕಾಯುತ್ತಿದ್ದ ಗ್ರಾಮಸ್ಥರಿ ಮಳೆರಾಯನಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಮಳೆಯಿಂದ ಬೆಳೆ ನಾಶವಾದ ಹಿನ್ನೆಲೆಯಲ್ಲಿ ಸರ್ಕಾರ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here