ಮಲ್ಯ ಗಡಿಪಾರಿಗೆ ನಕಾರ

0
231

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಸದ್ಯ ಇಂಗ್ಲೆಂಡ್ ನಲ್ಲಿರುವ ಉದ್ಯಮಿ ವಿಜಯ ಮಲ್ಯಗೆ ಬಿಗ್ ರಿಲೀಫ್ ಸಿಕ್ಕಿದೆ. ಮಲ್ಯಗೆ ಇಂಗ್ಲೆಂಡ್ ನಲ್ಲಿ ನೆಲಸಲು ಯಾವುದೇ ರೀತಿಯ ಅಬ್ಚೆಕ್ಷನ್ ಇಲ್ಲವಂತೆ..
ಮಲ್ಯರನ್ನು ಗಡಿಪಾರು ಮಾಡಲು ಇಂಗ್ಲೆಂಡ್ ಸರ್ಕಾರ ಸಕಾರ ಎಂದಿದೆ. ಈ ಬಗ್ಗೆ ವಿದೇಶಾಂಗ ಇಲಾಖೆಗೆ ಇಂಗ್ಲೆಂಡ್ ಸರ್ಕಾರ ಮಾಹಿತಿ ನೀಡಿದೆ.
 
 
ಇಂಗ್ಲೆಂಡ್ ನಲ್ಲಿ ವಾಸಿಸಲು ಮಲ್ಯರಿಗೆ ಪಾಸ್ ಪೋರ್ಟ್ ಅಗತ್ಯವಿಲ್ಲ. 1971 ಇಮಿಗ್ರೇಶನ್ ಆ್ಯಕ್ಟ್ ಪ್ರಕಾರ ಪಾಸ್ ಪೋರ್ಟ್ ನ ಅಗತ್ಯವಿಲ್ಲ. ಇಂಗ್ಲೆಂಡ್ ಗೆ ಬರುವಾಗ ಲೀಗಲ್ ಪಾಸ್ ಪೋರ್ಟ್ ಹೊಂದಿರಬೇಕು. ಆದರೆ ಮಲ್ಯ ಅವರು ಕಾನೂನು ಬದ್ಧ ಪಾಸ್ ಪೋರ್ಟ್ ಹೊಂದಿದ್ದಾರೆ.
 
 
 
ಭಾರತದಿಂದ ಬರುವಾಗ ಅವರ ಪಾಸ್ ಪೋರ್ಟ್ ರದ್ದಾಗಿರಲಿಲ್ಲ. ಇಂಗ್ಲೆಂಡ್ ಬಂದ ಮೇಲೆ ಅವರ ಪಾಸ್ ಪೋರ್ಟ್ ರದ್ದಾಗಿತ್ತು. ಹೀಗಾಗಿ ಇಂಗ್ಲೆಂಡ್ ನಲ್ಲಿ ಮಲ್ಯ ವಾಸಿಸಲು ಯಾವುದೇ ಕಾನೂನುಬದ್ಧವಾದ ಅಬ್ಚೆಕ್ಷನ್ ಇಲ್ಲ ಎಂದು ಇಂಗ್ಲೆಂಡ್ ಸ್ಪಷ್ಟಪಡಿಸಿದೆ.
 
 
 
ಆದರೂ ಮಲ್ಯರ ಪ್ರಕಣವನ್ನು ಗಂಭೀರವಾಗಿ ಪರಿಗಣಿಸಲು ತೀರ್ಮಾನಿಸಲಾಗಿದೆ. ಹಸ್ತಾಂತರದ ಬಗ್ಗೆ ಮನವಿ ಸಲ್ಲಿಸಿದ್ರೆ ಪರಿಗಣಿಸಲು ನಿರ್ಧರಿಸಲಾಗುತ್ತದೆ. ಈ ಸಂಬಂಧ ಕಾನೂನಿನ ನೆರವು ನೀಡಲು ಇಂಗ್ಲೆಂಡ್ ನಿರ್ಧರಿಸಿದೆ ಎಂದು ಇಂಗ್ಲೆಂಡ್ ಸರ್ಕಾರದ ಹೇಳಿಕೆ ಬಗ್ಗೆ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕಾಸ್ ಸ್ವರೂಪ್ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here