ಮಲ್ಯಗೆ ಮತ್ತಷ್ಟು ಕಂಟಕ

0
632

ರಾಷ್ಟ್ರೀಯ ಪ್ರತಿನಿಧಿ ವರದಿ
ಉದ್ಯಮಿ ವಿಜಯ್‌ ಮಲ್ಯ ಅವರಿಗೆ ಶುಕ್ರವಾರ ಹೈಕೋರ್ಟ್‌ ಜಾಮೀನು ಸಹಿತ ಬಂಧನ ವಾರಂಟ್‌ ಜಾರಿ ಮಾಡಿದೆ. ನ್ಯಾಯಾಧೀಕರಣಕ್ಕೆ ನೀಡಿದ್ದ ಭರವಸೆ ಉಲ್ಲಂಘನೆ ಆರೋಪ ಸಂಬಂಧ ವಿಚಾರಣೆಗೆ ನೋಟಿಸ್ ಜಾರಿಯಾಗಿದೆ.
 
 
 
ಜೂನ್‌ 1ರಂದು ವಿಜಯ್ ಮಲ್ಯ ಅವರನ್ನು ಕೋರ್ಟ್ ಗೆ ಹಾಜರುಪಡಿಸುವಂತೆ ವಿಭಾಗೀಯ ಪೀಠ ಆದೇಶಿಸಿದೆ. ಅಲ್ಲದೆ ಮಲ್ಯ ಅವರಿಂದ 50 ಲಕ್ಷ ರುಪಾಯಿಯ ಮುಚ್ಚಳಿಕೆ ಪಡೆಯುವಂತೆಯೂ ಪೀಠ ಸೂಚಿಸಿದೆ.
 
 
ಸಾಲ ಬಾಕಿ ಸಂಬಂಧ ವಿಜಯ್‌ ಮಲ್ಯ ವಿರುದ್ಧ ಎಸ್‌ಬಿಐ ಮತ್ತಿತರ ಬ್ಯಾಂಕುಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹಾಗೂ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರನ್ನೊಳಗೊಂಡ ಪೀಠ, ಜಾಮೀನು ಸಹಿತ ವಾರಂಟ್ ಜಾರಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here