ಮರ ಕೆಲಸದ ಮುಹೂರ್ತ ಸಂಪನ್ನ

0
189

ಶ್ಯಾಮ್ ಪ್ರಸಾದ್, ಬದಿಯಡ್ಕ,
ಉಕ್ಕಿನಡ್ಕ ಸಮೀಪದ ನೆಲ್ಲಿಕುಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು ದೇವಸ್ಥಾನಕ್ಕೆ ಅಗತ್ಯವಿದ್ದ ಮರದ ಕೆಲಸವನ್ನು ಪ್ರಾರಂಭಿಸುವ ಮುಹೂರ್ತ ಸೋಮವಾರ ನೆರವೇರಿಸಲಾಯಿತು.
 
 
ಬೆಳಗ್ಗೆ 7.30ಕ್ಕೆ ಪೂಜೆಯ, ಸಾಮೂಹಿಕ ಪ್ರಾರ್ಥನೆ ಹಾಗೂ ಭವ್ಯ ಮೆರವಣಿಗೆಯ ಮೂಲಕ ಸರವು ಕಾಚಿಕ್ಕಾಡು ಗೋಪಾಲಕೃಷ್ಣ ಶರ್ಮರ ಮನೆಗೆ ತೆರಳಿ 9.30ಕ್ಕೆ ಬ್ರಹ್ಮಶ್ರೀ ನಾರಾಯಣ ಭಟ್ ಹೊಸಮನೆ ಅವರಿಂದ ಗಣಪತಿ ಪೂಜೆ, ಕ್ಷೇತ್ರ ನಿರ್ಮಾಣ ಮರದ ಶಿಲ್ಪಿ ವಿಶ್ವಕರ್ಮ ಬೆದ್ರಂಪಳ್ಳ ಕೃಷ್ಣನ್ ಅವರಿಂದ ವಿಶ್ವಕರ್ಮ ಪೂಜೆ, ಸಾಮೂಹಿಕ ಪ್ರಾರ್ಥನೆ ಹಾಗೂ ಮರ ಕಡಿಯುವ ಮುಹೂರ್ತ ಕೈಗೊಳ್ಳಲಾಯಿತು. ಸೇವಾಸಮಿತಿ ಅಧ್ಯಕ್ಷ ಸತೀಶ್ ರಾವ್ ನೆಲ್ಲಿಕುಂಜೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೇಗಿನಕಡಾರು ರಮಾನಾಥ ರೈ, ಕಾರ್ಯಾಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here