ಮರಳು ಸಾಗಾಟ ವಾಹನ ಅಪಘಾತ

0
267

ನಮ್ಮ ಪ್ರತಿನಿಧಿ ವರದಿ
ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮ ವ್ಯಾಪ್ತಿಯ ಪಡ್ಡ್ಯಾರಬೆಟ್ಟು ಸಂತೃಪ್ತಿ ಕಟ್ಟಡದ ಮುಂಭಾಗದ ರಸ್ತೆಯಲ್ಲಿ  ಮರಳು ಸಾಗಿಸುತ್ತಿದ್ದ ಪಿಕ್ ಅಪ್ ವಾಹನ ಖಾಸಗೀ ಬಸ್ ಗೆ ಡಿಕ್ಕಿಹೊಡೆದಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಎರಡೂ ವಾಹನಗಳ ಮುಂಭಾಗ ಜಖಂ ಆಗಿದೆ. ಮರಳು ಸಾಗಾಟವಾಹನ ಚಾಲಕನ ನಿಯಂತ್ರಣ ರಹಿತ ಚಾಲನೆ ಅಪಘಾತಕ್ಕೆ ಕಾರಣವೆಂದು ಹೇಳಲಾಗಿದೆ.
ಮರಳುಹೇರಿಕೊಂಡು ಹೊಸಂಗಡಿ ಭಾಗದಿಂದ ವೇಣೂರು ಕಡೆಗೆ ಪಿಕ್ ಅಪ್ ವಾಹನ ಸಾಗುತ್ತಿತ್ತು. ಬೆಳ್ತಂಗಡಿಯಿಂದ ಮೂಡಬಿದಿರೆತ್ತ ಖಾಸಗೀ ಬಸ್ ಸಾಗುತ್ತಿತ್ತು. ಈ ಸಂದರ್ಭ ಅಪಘಾತ ಸಂಭವಿಸಿದೆ.

LEAVE A REPLY

Please enter your comment!
Please enter your name here