ಮರಕ್ಕೆ ಕಾರು ಡಿಕ್ಕಿ: ಅಜ್ಜ-ಮೊಮ್ಮಗ ಸಾವು

0
594

ಬಂಟ್ವಾಳ ಪ್ರತಿನಿಧಿ ವರದಿ
ಮರಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಅಜ್ಜ-ಮೊಮ್ಮಗ ದುರ್ಮರಣ ಹೊಂದಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಗ್ರಾಮದಲ್ಲಿ ಸಂಭವಿಸಿದೆ.
 
 
 
ಕಡಂಬು ಗ್ರಾಮದ ನಿವಾಸಿ ಸುಲೇಮಾನ್ ಹಾಜಿ(62) ಮತ್ತು ಸುಲೇಮಾನ್ ಹಾಜಿಯ 3 ತಿಂಗಳ ಮೊಮ್ಮಗ ಸಜನ್ ಸಾವನ್ನಪ್ಪಿದ್ದ ದುರ್ದೈವಿಗಳಾಗಿದ್ದಾರೆ. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ಬಂಟ್ವಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here