ಮನ್ ಕಿ ಬಾತ್…

0
202

ರಾಷ್ಟ್ರೀಯ ಪ್ರತಿನಿಧಿ ವರದಿ
ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದ ಜನರನ್ನು ಉದ್ದೇಶಿಸಿ ಮನ್ ಕಿ ಬಾತ್ ಮೂಲಕ ಮಾತನಾಡಿದ್ದಾರೆ. ಏಕಕಾಲದಲ್ಲಿ 104 ಉಪಗ್ರಹಳನ್ನು ಇಸ್ರೋ ಉಡಾವಣೆ ಮಾಡಿದ್ದು, ಸಂಸ್ಥೆ ಪಿಎಸ್ ಎಲ್ ವಿ ರಾಕೆಟ್ ಮೂಲಕ ಉಡಾವಣೆ ಮಾಡಿದೆ. ಇಸ್ರೋ ಮಾಡಿರುವ ಸಾಧನೆ ಭಾರತದ ಘಟನತೆಯನ್ನು ಹೆಚ್ಚಿಸಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಸಾಧನೆಗೆ ಮನ್ನಣೆ ಸಿಕ್ಕಿದೆ. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಇದು ಅಪೂರ್ವ ಸಾಧನೆಯಾಗಿದೆ. ಈ ನಿಟ್ಟಿನಲ್ಲಿ ಸಂಶೋಧನೆಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಸಾಧನೆಗೈದ ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.
 
 
ಮೀನುಗಾರರಿಗಾಗಿಯೇ ಒಂದು ಆ್ಯಪ್ ಸಿದ್ದವಾಗಿದೆ. ಈ ಆ್ಯಪ್ ನಿಂದ ಮೀನುಗಾರರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಪ್ರಧಾನಿ ವಿವರಿಸಿದ್ದಾರೆ.
 
 
ಮೈಸೂರು ನಿವಾಸಿ ಸಂತೋಷ್ ಗೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಸಂತೋಷ್ ಡಿಜಿಟಲ್ ವ್ಯವಹಾರದಲ್ಲಿ ಬಹುಮಾನ ಪಡೆದಿದ್ದ. ಲಕ್ಕಿ ಡಿಪ್ ನಲ್ಲಿ ಪಡೆದ ಬಹುಮಾನವನ್ನು ಬೆಂಕಿ ಅಪಘಾತದಲ್ಲಿ ಗಾಯಗೊಂಡಿದ್ದ ವೃದ್ಧೆಗೆ ದಾನ ಮಾಡಿದ್ದ. ಈ ಬಗ್ಗೆ ಯುವ ಮೋದಿ ಆ್ಯಪ್ ನಲ್ಲಿ ಬರೆದುಕೊಂಡಿದ್ದ. ಈ ಬಗ್ಗೆ ಪ್ರಧಾನಿ ಮೋದಿ ಮನ್ ಕಿ ಬಾತ್ ನಲ್ಲಿ ಉಲ್ಲೇಖಿಸಿದ್ದಾರೆ.

LEAVE A REPLY

Please enter your comment!
Please enter your name here