ಮನೋಭಾವದ ಸಮಸ್ಯೆ

0
230

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ
ಹದಿಹರೆಯದಲ್ಲಿ ಸಂಘರ್ಷಾತ್ಮಕ ಮನೋಭಾವವಿರುತ್ತದೆ. ಅದು ಪೂರ್ಣ ಸ್ವಾತಂತ್ರ್ಯವನ್ನು ಪಡೆಯುವ ಹಂಬಲ ಮತ್ತು ಪೂರ್ಣ ಸ್ವಾತಂತ್ರ್ಯವನ್ನು ಪಡೆಯಲು ಸಾಧ್ಯವಾಗದ ಅಸಹಾಯಕತೆಯಿಂದ ಉಂಟಾಗಿರುತ್ತದೆ. ಈ ಸಂಘರ್ಷವು ಬೇರೆ ಬೇರೆ ರೀತಿಯಲ್ಲಿ ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ.
 
 
ವೃತ್ತಿನ ಅಪೇಕ್ಷೆ:
ಸ್ವಾತಂತ್ರ್ಯದ ಹಂಬಲವು ಆರ್ಥಿಕ ಸ್ವಾತಂತ್ರ್ಯದ ಕಡೆಗೆ ಮನಸ್ಸನ್ನು ಸೆಳೆಯುತ್ತದೆ. ಆಗ ಕಾಣಿಸುವುದೇ ವೃತ್ತಿಯ ಅಪೇಕ್ಷೆ. ಆದರೆ ಆರ್ಥಿಕ ಸ್ವಾತಂತ್ರ್ಯವನ್ನು ತಂದುಕೊಳ್ಳುವ ಸಾಮರ್ಥ್ಯ ಬಂದಿರುವುದಿಲ್ಲ. ಈ ಒತ್ತಡದಿಂದ ಹದಿಹರೆಯದವರು ಗೊಂದಲಗಳಿಗೆ ತುತ್ತಾಗುತ್ತಾರೆ.
 
 
ಕೀಳರಿಮೆ:
ಹದಿಹರೆಯದಲ್ಲಿ ಅನೇಕ ರೀತಿಯ ಕೀಳರಿಮೆಗಳು ಕಾಣಿಸುತ್ತದೆ. ತಾನು ಇನ್ನೊಬ್ಬನಿ/ಳಿಗಿಂತೆ ಅಲ್ಲ, ಸುಂದರ/ರಿ ಅಲ್ಲ. ದೈಹಿಕ ದೇಹದಾರ್ಢ್ಯತೆ ಎಲ್ಲ ಎಂಬಿತ್ಯಾದಿ ಕೀಳರಿಮೆಯ ಭಾವನೆಗಳು ಕಾಡಲು ತೊಡಗುತ್ತವೆ.
 
 
ಪ್ರೀತಿಯ ಸಮಸ್ಯೆ:
ಹದಿಹರೆಯದವರಿಗೆ ತಮ್ಮನ್ನು ಎಲ್ಲರೂ ಪ್ರೀತಿಸಬೇಕೆಂಬ ಆಸೆ ಇರುತ್ತದೆ. ಆದರೆ ಯಾರೂ ತಮ್ಮನ್ನು ಪ್ರೀತಿಸುವುದಿಲ್ಲವೆಂದು ಭಾವಿಸುತ್ತಾರೆ. ಹಾಗೆಂದು ಅವರ ಮೇಲೆ ಬಹುವಾದ ಪ್ರೀತಿಯನ್ನು ತೋರಿಸಲು ಹೊರಟರೆ ಅದು ಅವರಿಗೆ ಹಿಂಸೆಯ ಅನುಭವವನ್ನೂ ಉಂಟು ಮಾಡುತ್ತದೆ.
 
 
ವ್ಯಕ್ತಿ ಆರಾಧನೆ:
ಹದಿಹರೆಯದವರಲ್ಲಿವ್ಯಕ್ತಿ ಆರಾಧನೆಯ ಪ್ರವೃತ್ತಿ ಇರುತ್ತದೆ. ಅವರು ಆರಾಧಿಸುವ ವ್ಯಕ್ತಿಗಳ ಬಗ್ಗೆ ಆಪಸ್ವರ ಎತ್ತಿದರೆ ಜಗಳಕ್ಕೆ ಬಂದುಬಿಡುವ ಮನೋಭಾವವಿರುತ್ತದೆ.
 
 
ತಂಡದ ಸಮಸ್ಯೆ:
ಹಿರಿಯರ ಅವಲಂಬನೆಯಿಂದ ಮುಕ್ತರಾಗಲು ಬಯಸುವ ಹದಿಹರೆಯದವರು ಸಮ ವಯಸ್ಕ ತಂಡಗಳು ಬಹಳ ಇಷ್ಟವಾಗುತ್ತದೆ. ಆದರೆ ಇದರಲ್ಲಿಯೂ ಭಾವನಾತ್ಮಕ ಹೊಂದಾಣಿಕೆಯ ಸಮಸ್ಯೆಯು ಉಂಟಾಗುತ್ತದೆ. ನಾಯಕತ್ನಕ್ಕಾಗಿ ಪೈಪೋಟಿ, ಜಗಳಗಳು ಇರುತ್ತದೆ.
 
 
ಅಪರಾಧಿಕ ಪ್ರವೃತ್ತಿ
ಹದಿಹರೆಯದ ಆವೇಶದ ಮನಃಸ್ಥಿತಿಯು ಸ್ವಲ್ಪ ಅಪರಾಧಿಕ ಪ್ರವೃತ್ತಿಯನ್ನು ರೂಪಿಸುತ್ತದೆ. ಬಂಡಾಯದ ನಡವಳಿಕೆಗಳೂ ಇರುತ್ತದೆ.
 
 
ಭಾವುಕತೆಯ ಸಮಸ್ಯೆ:
ಭಾವುಕ ಪ್ರವೃತ್ತಿಯು ಹದಿಹರೆಯದಲ್ಲಿ ಜಾಸ್ತಿ ಇರುತ್ತದೆ. ಏನಾದರೊಂದು ಹಿತಕರವಲ್ಲದೆ ಇರುವುದನ್ನು ಕಂಡಾಗ ಸಿಕ್ಕಿದ್ದನ್ನು ಎಸೆಯುವುದು, ಜಗಳ ಹೊಡೆದಾಟಗಳಿಗಿಳಿಯುವುದು, ಆತ್ಮಹತ್ಯೆ ಮುಂತಾದವುಗಳಿಗೆ ಆಲೋಚಿಸಿದೆ ಜಾರಿಗೆ ತರುವ ಭಾವುಕತೆಯ ಕಾರಣವಾಗಿರುತ್ತದೆ.
 
 
ಸಂಬಂಧಗಳ ಅಸ್ಪಷ್ಟತೆ:
ಹದಿಹರೆಯವು ಕುಟುಂಬ ಮತ್ತು ಸಮುದಾಯದೊಂದಿಗೆ ಹೊಸ ರೀತಿಯ ಸಂಬಂಧ ಸ್ಥಾಪನೆಗೆ ಪೂರಕವಾಗಿರುತ್ತದೆ. ಆದರೆ ಅದು ಯಾವ ರೀತಿಯ ಸಂಬಂಧ ಎಂಬ ಸ್ಪಷ್ಟತೆ ಇಲ್ಲದೆ ಗೊಂದಲಕ್ಕೆ ಒಳಗಾಗುತ್ತಾರೆ.
 
ಅರವಿಂದ ಚೊಕ್ಕಾಡಿ
[email protected]

LEAVE A REPLY

Please enter your comment!
Please enter your name here