'ಮನೆ-ಮನೆ ಅಭಿಯಾನ'

0
409

 
ವರದಿ-ಚಿತ್ರ: ಶ್ಯಾಮ್ ಪ್ರಸಾದ್, ಬದಿಯಡ್ಕ
ದೇವೋತ್ತಮನಾದ ನಾರಾಯಣನು ಶ್ರೀರಾಮನ ರೂಪದಲ್ಲಿ ಅವತರಿಸಿದ್ದೂ ಒಂದು ಅಭಿಯಾನವೇ. ನೀರು ಸಾರುಗಳು ವೃಕ್ಷದ ಬೇರು ಬೇರುಗಳಿಗೆ ಆಸರೆಯಾಗಿರುವಂತೆ ಸಮಾಜದ ಬೇರುಗಳಾದ ಪ್ರತಿ ಸದಸ್ಯನಿಗೆ ಮಠದ ವಿಚಾರಗಳು ತಿಳಿಯಬೇಕು. ನಾಯಕನಾದವನಿಗೆ ಕೆಳಮಟ್ಟದಲ್ಲಿರುವ ಸಾಮಾನ್ಯ ಸದಸ್ಯನನ್ನು ತಲುಪುವ ಗುಣವಿರಬೇಕು ಎಂದು ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
 
badiydka-kodagu1
ಅವರು ಆದಿತ್ಯವಾರದಂದು ಮಡಿಕೇರಿಯಲ್ಲಿ ಜರಗಿದ ಮುಳ್ಳೇರಿಯ ಮಂಡಲ ‘ಮನೆ-ಮನೆ ಅಭಿಯಾನ’ದ ಸಮಾರೋಪ ಸಮಾರಂಭದಲ್ಲಿ ಭಕ್ತರನ್ನು ಉದ್ಧೇಶಿಸಿ ಅಶೀರ್ವಚನ ನೀಡುತ್ತಿದ್ದರು.
 
 
ದೇವತಾಕಾರ್ಯ ಮತ್ತು ಸತ್ಕಾರ್ಯದಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡರೆ ದೇವರು ನಮಗಾಗಿ ತನ್ನನ್ನೇ ಕೊಡುತ್ತಾನೆ. ನಾವು ಏನನ್ನು ಕೊಡುತ್ತೇವೆಯೋ ಅದಕ್ಕೆ ಮಿಗಿಲಾದದ್ದು ನಮಗೆ ಬರುತ್ತದೆ. ಯಾವುದನ್ನು ದೇವರು, ಗುರುಗಳು ಮಾಡುತ್ತಾರೆ ಅಂತಹ ಪುಣ್ಯ ಕಾರ್ಯವನ್ನು ಅಭಿಯಾನದ ಮೂಲಕ ಮಠದ ಕಾರ್ಯಕರ್ತರಾದ ನೀವು ಮಾಡಿದ್ದೀರಿ. ನಾಯಕ ಮನೆ-ಮನಗಳಿಗೆ, ಮನ-ಮನಗಳಿಗೆ ತಲುಪುವ ವ್ಯಕ್ತಿಯಾಗಿರಬೇಕು. ಅವನು ಬೇರಿನಂತೆ ತಳಮಟ್ಟಕ್ಕೂ ಇಳಿದು ಬರಬೇಕು. ಮಂಡಲದ ಎಲ್ಲಾ ಪದಾಧಿಕಾರಿಗಳು ಗುರುತ್ವವನ್ನು ಅವಾಹಿಸಿಕೊಂಡು ಅಭಿಯಾನವನ್ನುಗೈದು ಧನ್ಯರಾದಿರಿ. ಮಠವೆಂಬ ಅಮೃತದ ಕಲಶದಿಂದ ಹರಿಯುವ ಮಾಧ್ಯಮವಾಗಿ ಸಮರ್ಪಿಸಿಕೊಂಡ ನೀವೆಲ್ಲರೂ ಅಮೃತತ್ವವನ್ನು ಹೊಂದಿದ್ದೀರಿ.
 
 
badiydka-kodagu2
ಕೊಡಗು ತಂಪು… ಕೊಡಗಿನ ಜನರೂ ತಂಪು…ನಿನ್ನೆಯಿಂದ ಇಲ್ಲಿ ನಿಮ್ಮೊಂದಿಗಿದ್ದು ನಮ್ಮ ಮನಸ್ಸೂ ತಂಪಾಗಿದೆ ನಿಮ್ಮ ಬಾಳು ಅನುದಿನ ತಂಪಾಗಿರಲಿ…..ಕಾವೇರಮ್ಮನ ಅನುಗ್ರಹ ನಿಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಭಕ್ತರನ್ನು ಅಶೀರ್ವದಿಸಿದರು.
 
 
 
ಗೋಕರ್ಣ ಮಂಡಲ ಅಧ್ಯಕ್ಷ ಡಾ| ವೈ ವಿ ಕೃಷ್ಣಮೂರ್ತಿ, ಈಶ್ವರಿ ಬೇರ್ಕಡವು, ಮೋಹನಭಾಸ್ಕರ ಹೆಗಡೆ, ಮುಳ್ಳೇರಿಯ ಮಂಡಲದ ಅಧ್ಯಕ್ಷ ಬಿ.ಜಿ ರಾಮ್ ಭಟ್ ಗೋಳಿತ್ತಡ್ಕ, ಕಾರ್ಯದರ್ಶಿ ಸತ್ಯನಾರಾಯಣ ಭಟ್ ಮೊಗ್ರ, ಕೊಡಗು ಹವ್ಯಕ ವಲಯದ ಅಧ್ಯಕ್ಷ ಮಿತ್ತೂರು ಈಶ್ವರ ಭಟ್, ಕಾರ್ಯದರ್ಶಿ ಡಾ| ರಾಜಾರಾಮ್, ಕೇಶವ ಪ್ರಸಾದ್ ಮುಳಿಯ, ಶ್ರೀಧರ ಹೆಗಡೆ, ಎಂ.ಎನ್. ಹರೀಶ್, ಮುಳ್ಳೇರಿಯ ಮಂಡಲದ ಪ್ರಸಾರ ಪ್ರಧಾನ ಗೋವಿಂದ ಬಳ್ಳಮೂಲೆ, ವಿವಿಧ ಮಂಡಲಗಳ ಪದಾಧಿಕಾರಿಗಳು ಹಾಗೂ ಶಿಷ್ಯವೃಂದದವರು ಉಪಸ್ಥಿತರಿದ್ದರು.
 
 
 
ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಪರಶುರಾಮ ಯಜ್ಞ, ಶಿಷ್ಯವೃಂದದವರು ಬೆಳೆಸಿದ ಬೆಳೆ ಸಮರ್ಪಣೆ ನಡೆಯಿತು. ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಗಣೇಶ್ ಭಟ್ ಮುಣ್ಚಿಕ್ಕಾನ ಮುನ್ನಡೆಸುವ ಚಲಿಸುವ ಗೋ ಆಲಯದಲ್ಲಿ ಗೋಮಾತೆಗೆ ಅನೇಕರು ಆರತಿಯನ್ನು ಬೆಳಗಿದರು.

LEAVE A REPLY

Please enter your comment!
Please enter your name here