ಮನೆಗಳು ಜಲಾವೃತ

0
285

 
ಯಾದಗಿರಿ ಪ್ರತಿನಿಧಿ ವರದಿ
ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲಿ ರಾತ್ರಿಯಿಡೀ ಭಾರಿ ಮಳೆಯಾಗಿದೆ. ಮಳೆಯ ಅರ್ಭಟಕ್ಕೆ ಭೀಮಾನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ.
 
 
ಭೀಮಾ ನದಿಯ ಹಿನ್ನೀರು ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮಕ್ಕೆ ನುಗ್ಗಿದೆ. ನೀರು ನುಗ್ಗಿದ ಪರಿಣಾಮ ಗ್ರಾಮದ 50ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ದೇಗುಲಗಳಲ್ಲಿ ಜನರ ವಾಸ್ತವ್ಯ ನೀಡಲಾಗಿದೆ. ಜನರು ರಾತ್ರಿಯಿಡೀ ದೇಗುಲ, ಎತ್ತರದ ಕಟ್ಟೆಗಳ ಮೇಲೆ ಜಾಗರಣೆ ಮಾಡಿದ್ದಾರೆ.
 
 
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಸನ್ನತ್ತಿ ಬ್ಯಾರೇಜ್ ಗೇಟ್ ಓಪನ್ ಮಾಡದ ಹಿನ್ನೆಲೆಯಲ್ಲಿ ಈ ಅನಾಹುತ ಸಂಭವಿಸಿದೆ. ಧಾನ್ಯಗಳು ಸೇರಿ ಮನೆಯಲ್ಲಿನ ವಸ್ತುಗಳು ನೀರುಪಾಲಾಗಿದೆ.

LEAVE A REPLY

Please enter your comment!
Please enter your name here