'ಮನೀಷಾ' ವಾರ್ಷಿಕ ಸಂಚಿಕೆ ಬಿಡುಗಡೆ

0
286

ಉಜಿರೆ ಎಸ್.ಡಿ.ಎಂ ಕಾಲೇಜಿನ ವಾರ್ಷಿಕ ಸಂಚಿಕೆ ‘ಮನೀಷಾ’ ಇತ್ತೀಚೆಗೆ ಬಿಡುಗಡೆಗೊಂಡಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಸಂಚಿಕೆ ಬಿಡುಗಡೆಗೊಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
 
 
ವಿದ್ಯಾರ್ಥಿಗಳ ಅರ್ಥಪೂರ್ಣ ಬರಹಗಳು ಮತ್ತು ಕಾಲೇಜಿನ ವಾರ್ಷಿಕ ಕಾರ್ಯಕ್ರಮಗಳ ಸಮಗ್ರ ಚಿತ್ರಣಗಳನ್ನೊಳಗೊಂಡ ‘ಮನೀಷಾ’ ಪ್ರತಿವರ್ಷ ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಶಸ್ತಿಯನ್ನು ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ.
 
 
 
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಎಸ್ ಮೋಹನನಾರಾಯಣ, ‘ಮನೀಷಾ’ 2016-2017ರ ಸಂಪಾದಕ ಮಂಡಳಿಯ ಡಾ. ಬಿ.ಪಿ ಸಂಪತ್ ಕುಮಾರ್, ಡಾ. ರಾಮಚಂದ್ರ ಪುರೋಹಿತ, ಡಾ.ಶ್ರೀಧರ ಭಟ್, ಧನೇಶ್ವರಿ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ: ಶರ್ಮ, ಉಜಿರೆ
ವರದಿ: ಕೃಷ್ಣಪ್ರಶಾಂತ್.ವಿ

LEAVE A REPLY

Please enter your comment!
Please enter your name here