ಮನಸೂರೆಗೊಂಡ 'ಗಾನ ಸಂಭ್ರಮ'

0
746

ವರದಿ: ಶಿವಮಲ್ಲಯ್ಯ ಬನ್ನಿಗನೂರು
ಅಲ್ಲಿ ಸಂಗೀತದ ಜೊತೆಗೆ ಭಕ್ತಿಯ ಭಾವಲಹರಿಯಿತ್ತು. ಜನಪದೀಯ ಧಾಟಿಯ ಸಾಹಿತ್ಯದ ತತ್ವ ಅನುರಣನಗೊಂಡಿತ್ತು. ಗೀತಗಾಯನದ ಮಾಧುರ್ಯ ನೆಲೆಗೊಂಡಿತ್ತು. ಜನಮನದ ಸಂಭ್ರಮವನ್ನು ಹೆಚ್ಚಿಸಿತ್ತು.
 
 
ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಗಾನ ಸಂಭ್ರಮ ಸಂಗೀತ ಕಾರ್ಯಕ್ರಮ ಜನಮನಸೆಳೆದ ಬಗೆಯಿದು.
ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ಪುತ್ತೂರಿನ ಜಗದೀಶ ಅಚಾರ್ಯ ಅವರ ಕಲಾಸಿಂಧು ಬಳಗದಿಂದ ‘ಗಾನ ಸಂಭ್ರಮ’ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
 
 
ದೇವರ ಸ್ತುತಿ, ಭಕ್ತಿಗೀತೆಗಳು ಭಕ್ತಿಭಾವದ ಅಲೆ ಮೂಡಿಸಿದವು. ಬೇಂದ್ರೆ ಕಾವ್ಯ ಗಾಯನದ ಸ್ಪರ್ಶದೊಂದಿಗೆ ಹೊಸ ಅರ್ಥ ಹೊಳೆಸಿತು. ಗಾಯಕ ಗಣೇಶ ಅಚಾರ್ಯರವರು ‘ಶರಣು ಬೆನಕನೆ, ಕನಕ ರೂಪನೆ’ ಎಂಬ ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿ, ಅವರದೇ ಸ್ವರಚಿತವಾಗಿ ರಚಿಸಿ, ರಾಗ ಸಂಯೋಜಿಸಿದ ‘ ರಾಮ ಮಂತ್ರವ ಜಪಿಸೋಣಾ, ಪಾಪ ಕಳೋಕಣಾ’ ಎಂಬ ಗೀತೆಗೆ ಸಂಭಾಗಣದ ಭಕ್ರಾಧಿಗಳು ಕರತಾಡನದ ಜೊತೆಗೆ, ಜೈ ಶ್ರೀರಾಮ್ ಎಂಬ ಉದ್ಘೋಷ ಮೊಳಗಿಸಿದರು.
ಅಯ್ಯಪ ಸ್ತುತಿ ಗೀತೆ, ಶಿವನಾಮ ಸ್ಮರಣೆ, ಸುಬ್ರಾಯ್ ಚೊಕ್ಕಾಡಿಯವರ ರಚಿಸಿದ ‘ಮುನಿಸು ತರವೇ, ಮುಗುದೇ ಹಿತವಾಗಿ ನಗಬಾರದೇ’ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.
 
 
ಗಾಯಕಿ ಕಲಾವತಿ ಇಂದೂರು ‘ಕುರುಡು ನಾಯಿ ತಾ, ಸಂತೆಗೆ ಬಂದಂತೆ’ ಎಂಬ ದಾಸಗೀತೆ ಹಾಗೂ ದ.ರಾ.ಬೇಂದ್ರೆಯವರ ‘ಮರುಳ ಮಾಡಾಕಾ ಹೋಗಿ, ಮರಳಾಸಿದ್ದಳಾದಳು ನಾರಿ’, ಮತ್ತು ‘ನಿಂಬಿಯಾ ಬಾನದಾ ಮ್ಯಾಗಳ’, ‘ಎಂಥಾ ಮೋಜಿನ ಕುದುರೆ’, ಎಂಬ ಜನಪದ ಗೀತೆಗಳನ್ನು ಅವರ ಕಂಚಿನ ಕಂಠದ ಹಾಡುವ ಮೂಲಕ ಪ್ರೇಕ್ಷಕರ ಮನಸೆಳೆದರು.
 
 
ಇನ್ನೋರ್ವ ಗಾಯಕಿ, ಸುರೇಖಾ ಕೆ.ಎಸ್ ಅವರು ಭಕ್ತಿ ಗೀತೆಗಳನ್ನು ಹಾಡಿ ಸಂಭಾಗಣದ ಪ್ರೇಕ್ಷಕರನ್ನು ಸೆಳೆದರು. ‘ನೀಡು ಶಿವ, ನೀಡದಿರು ಶಿವ’, ”ಪಾಂಡುರಂಗ, ಪ್ರಭು ವಿಠಲ, ವೇಣುಗೋಪಾಲ ಲೋಲ’, ಎಂಬ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಕೃಷ್ಣಪ್ರಸಾದ್ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here