ಮನವಿ

0
270

ದ.ಕ. ಪ್ರತಿನಿಧಿ ವರದಿ
ಉಡುಪಿ ಮತ್ತುದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಮರಳು ನೀತಿ ಗೊಂದಲ ಪರಿಹರಿಸಲು ಮಂತ್ರಿ ವಿನಯ್ ಕುಲಕರ್ಣಿಗೆ ಕೋಟಾ ಆಗ್ರಹ.
ಕಳೆದ ಜನವರಿ 22ನೇ ತಾರೀಖಿನಿಂದ ಉಡುಪಿ ಜಿಲ್ಲೆಯ ಸಿಆರ್ಝಡ್ನಿಂದ ಬೊಗಸೆ ಮರಳು ತೆಗೆಯಲು ಅವಕಾಶವಿಲ್ಲ. ಒಳನಾಡು ಮರಳುಗಾರಿಕೆಯ ಹೊಣೆ ಇರುವ ಲೋಕೋಪಯೋಗಿ ಇಲಾಖೆ ಟೆಂಡರ್ ಹೆಸರಿನಲ್ಲಿ ಮತ್ತೊಂದು ಗೊಂದಲ ಉಂಟುಮಾಡಿದ್ದು ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಂತೂ ಸಂಪೂರ್ಣ ಸ್ಥಗಿತವಾಗಿದೆ.
ಮಳೆಗಾಲ ಸನಿಹವಾಗುತ್ತಿದ್ದು ರಸ್ತೆಗಳ ಕೆಲಸವಂತೂ ಮರಳಿಲ್ಲದೇ ನಿಂತುಹೋಗಿದೆ. ಕಾಳಸಂತೆಯಲ್ಲಿ ಮರಳು ಮಾರಾಟವಾಗುತ್ತಿರುವುದರಿಂದ ಬಡವರ ಮನೆಗೆ ಸರಕಾರ ಕೊಡುವ ಹಣಒಂದು ಲೋಡು ಮರಳು ಖರೀದಿಸಲು ಸಾಕಾಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಜಿಲ್ಲಾಡಳಿತದ ಎದುರು ಬಿ.ಜೆ.ಪಿ ಪ್ರತಿಭಟನೆ ಮಾಡಿದಾಗಲೂ ಕೂಡ ಸಮಸ್ಯೆ ಪರಿಹಾರವಾಗಿಲ್ಲ. ಸರಕಾರವೇ ಕೊಟ್ಟ ಭರವಸೆಯಂತೆ ಮರಳಿನ ಆತಂಕ ನಿವಾರಣೆ ಮಾಡಿಲ್ಲ. ಆದ್ದರಿಂದ ತಕ್ಷಣ ಸರಕಾರ ಮಧ್ಯ ಪ್ರವೇಶಿಸಬೇಕೆಂದು ರಾಜ್ಯ ಬಿ.ಜೆ.ಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಹಾಗೂ ಶಾಸಕ ಕೋಟಾ ಶ್ರೀನಿವಾಸ ಪೂಜಾರಿ ಗಣಿ ಮತ್ತು ಭೂ ವಿಜ್ಚಾನ ಮಂತ್ರಿ ವಿನಯಕುಲಕರ್ಣಿಯವರಿಗೆ ವಿಧಾನಸೌಧದಲ್ಲಿ ಮನವಿ ಸಲ್ಲಿಸಿದರು.
ಜಿಲ್ಲೆಯ ಮರಳಿನ ಗೊಂದಲ ನಿವಾರಣೆಯಾಗದಿದ್ದರೆ ಮತ್ತೊಮ್ಮೆ ಹೋರಾಟ ಮುಂದುವರಿಸುವುದು ನಮಗೆ ಅನಿವಾರ್ಯವಾಗಿದೆ ಎಂದು ಕೋಟಾ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಮಂತ್ರಿ ವಿನಯಕುಲಕರ್ಣಿ ಈಗಾಗಲೇ ತಾನು ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ತಕ್ಷಣ ಕಾರ್ಯ ಪ್ರವೃತ್ತರಾಗುವುದಾಗಿ ಭರವಸೆ ನೀಡಿದರು.

LEAVE A REPLY

Please enter your comment!
Please enter your name here