ಪ್ರಮುಖ ಸುದ್ದಿವಾರ್ತೆ

ಮಧುಮೇಹ ಮುಕ್ತ ಭಾರತ: ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ

ನಮ್ಮ ಪ್ರತಿನಿಧಿ ವರದಿ
ಆಯುರ್ ಸ್ಪರ್ಶ ಡಯಾಬೆಟಿಕ್ ಇನ್ನೋವೆಟಿವ್ ಫೌಂಡೇಷನ್ (ರಿ.) ಆಶ್ರಯದಲ್ಲಿ ಮಧುಮೇಹ ಮುಕ್ತ ಭಾರತ ಜನಜಾಗೃತಿ ಅಭಿಯಾನದ ಅಂಗವಾಗಿ ದಕ್ಷಿಣ ಕನ್ನಡ,ಕೊಡಗು ಮತ್ತು ಕಾಸರಗೋಡು ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
 
 
“ಮಧುಮೇಹ ಮುಕ್ತ ಭಾರತ” ವಿಷಯದಲ್ಲಿ ಹತ್ತು ಪುಟಗಳಿಗೆ ಮೀರದಂತೆ ಪ್ರಬಂಧ ರಚಿಸಬೇಕಾಗಿದೆ. ಪ್ರಾಥಮಿಕ, ಪ್ರೌಢ, ಕಾಲೇಜು ಹಾಗೂ ಮುಕ್ತ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಮುಕ್ತ ವಿಭಾಗ ಹೊರತುಪಡಿಸಿ ಇತರ ವಿಭಾಗಗಳಲ್ಲಿ ಭಾಗವಹಿಸುವವರು ಶಾಲಾ ಮುಖ್ಯಸ್ಥರ ದೃಢೀಕರಣ ಪತ್ರದೊಂದಿಗೆ ಪ್ರಬಂಧಗಳನ್ನು ಕಳುಹಿಸಬೇಕಾಗಿದೆ.
 
 
 
ಪ್ರಬಂಧಗಳು ಕೈ ಬರಹ ಅಥವಾ ಕನ್ನಡದಲ್ಲಿ ಟೈಪ್ ಮಾಡಿ ಕಳುಹಿಸಬಹುದಾಗಿದೆ. ಫುಲ್ ಸ್ಕೇಪ್ ಹಾಳೆಯ ಒಂದು ಬದಿಯಲ್ಲಿ ಮಾತ್ರ ಪ್ರಬಂಧ ಬರೆಯತಕ್ಕದ್ದು. ವಿಜೇತರಿಗೆ ಪ್ರಥಮ,ದ್ವಿತೀಯ,ತೃತೀಯ ಬಹುಮಾನಗಳನ್ನು, ನಗದು, ಪ್ರಶಸ್ತಿ ಪತ್ರ ಹಾಗೂ ಫಲಕಗಳೊಂದಿಗೆ ನೀಡಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಗೌರವಿಸಲಾಗುತ್ತದೆ.
 
 
ವಿಜೇತ ಪ್ರಬಂಧಗಳನ್ನು ಕನ್ನಡ ಅಂತರ್ಜಾಲ ಸುದ್ದಿತಾಣ ವಾರ್ತೆ.ಕಾಂ ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಆಯುರ್ ಸ್ಪರ್ಶ ಡಯಾಬೆಟಿಕ್ ಇನ್ನೋವೆಟಿವ್ ಫೌಂಡೇಷನ್ (ರಿ.) ಸ್ಥಾಪಕಾಧ್ಯಕ್ಷ ಸತೀಶ್ ಶಂಕರ್ ಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಫೌಂಡೇಷನ್ ನ ಸ್ಥಾಪಕ ಟ್ರಸ್ಟಿ ಹರೀಶ್ ಕೆ. ಆದೂರು 94834 55922 ಅವರನ್ನು ಸಂಪರ್ಕಿಸಬಹುದಾಗಿದೆ.
 
 
ಪ್ರಬಂಧಗಳನ್ನು ಅಧ್ಯಕ್ಷರು, ಆಯುರ್ ಸ್ಪರ್ಶ ಡಯಾಬೆಟಿಕ್ ಇನ್ನೋವೆಟಿವ್ ಫೌಂಡೇಷನ್ (ರಿ.), ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ, ವ್ಯವಸಾಯ ಬ್ಯಾಂಕಿನ ಹಿಂಬದಿ , ಮಳಲಿ ಕ್ರಾಸ್, ಗಂಜೀಮಠ 574 244 ಈ ವಿಳಾಸಕ್ಕೆ ಕಳುಹಿಸಬೇಕು. ಪ್ರಬಂಧಗಳನ್ನು ಫೆಬ್ರವರಿ 20ರೊಳಗೆ ತಲುಪುವಂತೆ ಕಳುಹಿಸಬೇಕೆಂದು ಪ್ರಕಟಣೆ ತಿಳಿಸಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here