ಮಧುಮೇಹ-ಮನೆಮದ್ದು

0
570

ಅಂಕಣ: ಡಾ.ಸತೀಶ ಶಂಕರ್ ಬಿ.
1. ಹಾಗಲಕಾಯಿ-ಬಾಯಿಗೆ ಕಹಿ ಆರೋಗ್ಯಕ್ಕೆ ಸಿಹಿ
ಹಾಗಲಕಾಯಿ ಜ್ಯೂಸ್:
ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಹಾಗಲಕಾಯಿ ಜ್ಯೂಸ್ ಕುಡಿದರೆ ಮಧುಮೇಹ ಹತೋಟಿಗೆ ಬರಲು ಸಹಕಾರಿ. ಹಾಗಲಕಾಯಿಯಲ್ಲಿ Momorcidin ಮತ್ತು charatin ಎಂಬ ಮಧುಮೇಹ ನಿವಾರಕ ಅಂಶಗಳಿವೆ. ಇವು ಇನ್ಸುಲಿನ್ ಉತ್ಪಾದನೆಯನ್ನು ಪ್ರೇರೇಪಿಸುತ್ತದೆ.
ಹಾಗಲಕಾಯಿ ಜ್ಯೂಸ್ ಮಾಡುವ ಮುನ್ನ ಅದನ್ನು ಚೆನ್ನಾಗಿ ತೊಳೆಯಿರಿ. ಮಧ್ಯಭಾಗದಲ್ಲಿ ಕತ್ತರಿಸಿ, ಬೀಜವನ್ನು ಚಮಚದಿಂದ ಪ್ರತ್ಯೇಕಿಸಿ. ಆ ನಂತರ ಹಾಗಲಕಾಯಿಯನ್ನು ಸಣ್ಣದಾಗಿ ತುಂಡರಿಸಿಕೊಳ್ಳಿ. ನಂತರ ಇದನ್ನು 30 ನಿಮಿಷ ನೀರಿನಲ್ಲಿ ಮುಳುಗಿಸಿಡಿ. ಬಳಿಕ ಇವುಗಳನ್ನು ಮಿಕ್ಸರ್ ನಲ್ಲಿ ಹಾಕಿ ಅಗತ್ಯವಿದ್ದಷ್ಟು ನೀರು ಸೇರಿಸಿ ಹಾಗಲಕಾಯಿ ಜ್ಯೂಸ್ ತಯಾರಿಸಿ.
ಒಂದು ದಿನಕ್ಕೆ 2 ಹಾಗಲಕಾಯಿಗಿಂತ ಹೆಚ್ಚು ಸೇವಿಸಬಾರದು. ಮಧುಮೇಹಕ್ಕೆ ಇದಕ್ಕೆ ಸಂಪೂರ್ಣ ಚಿಕಿತ್ಸೆಯಲ್ಲಿ-ವೈದ್ಯರ ಸಲಹೆ ಪಡೆದು ಪರೀಕ್ಷಿಸಿಕೊಳ್ಳಿ.
 
 
 
2. ಮೆಂತೆಕಾಳು:
ಮೆಂತೆಕಾಳು 100ಗ್ರಾಂ ತೆಗೆದುಕೊಳ್ಳಿ. ಅದನ್ನು ಚೆನ್ನಾಗಿ ಪುಡಿಮಾಡಿ. ಅದಕ್ಕೆ 25 ಗ್ರಾಂ. ಅರಿಶಿನ ಪುಡಿ ಸೇರಿಸಿ. ಅದನ್ನು 1 ಲೋಟ ಹಾಲಿನ ಜೊತೆ ಸೇರಿಸಿ, ಸೇವಿಸಿ. ನಿತ್ಯವೂ 2 ಚಮಚ ಹಾಲಿಗೆ ಸೇರಿಸಿ ಕುಡಿಯಿರಿ.
 
 
 
3. ಅರಶಿನ ಹುಡಿ:
ಅರ್ಧ ಚಮಚ ಅರಶಿನ ಹುಡಿಗೆ ಅರ್ಧಚಮಚ ನೆಲ್ಲಿಕಾಯಿ ಹಿಡಿಯನ್ನು ಸೇರಿಸಿ. ನಿತ್ಯ ಎರಡು ಬಾರಿ ಸೇವಿಸುವುದರಿಂದ ಮಧುಮೇಹ ಹತೋಟಿಯಲ್ಲಿ ಇಡಬಹುದು.
 
 
4. ಜಂಬೂ ಫಲದ ಬೀಜ:
1 ಚಮಚ ಜಂಬೂ ಫಲದ ಬೀಜದ ಹುಡಿಯನ್ನು ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಮಧುಮೇಹ ಹತೋಟಿಗೆ ಬರುತ್ತದೆ.
 
 
5. ನೆಲ್ಲಿಕಾಯಿ:
ನೆಲ್ಲಿಕಾಯಿಯಿಂದ ತಯಾರಿಸಿದ ಜ್ಯೂಸ್ ನಿತ್ಯವೂ 30 ಮಿಲಿ. ಸೇವಿಸುವುದರಿಂದ ಮಧುಮೇಹ ತಡೆಗಟ್ಟಬಹುದು.
 
ಡಾ.ಸತೀಶ ಶಂಕರ್ ಬಿ
[email protected]

LEAVE A REPLY

Please enter your comment!
Please enter your name here