ಮಧುಮೇಹ ಮತ್ತು ವ್ಯಾಯಾಮ

0
520

ಅಂಕಣ: ಡಾ.ಸತೀಶ ಶಂಕರ್ ಬಿ.
ಮಧುಮೇಹ ಬಾರದಂತೆ ತಡೆಗಟ್ಟಲು ಮತ್ತು ಮಧುಮೇಹವನ್ನು ಹತೋಟಿಯಲ್ಲಿ ಇಡಲು ವ್ಯಾಯಾಮ ಸಹಕಾರಿ. ಮಧುಮೇಹಕ್ಕೆ ಯಾವ ವ್ಯಾಯಾಮ ಉತ್ತಮ, ಎಷ್ಟು ಹೊತ್ತು ವ್ಯಾಯಾಮ ಮಾಡಬೇಕು ಮತ್ತು ಅದರ ಪ್ರಯೋಜನಗಳೇನು? ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ.
 
 
ನಾವು ಸಾಮಾನ್ಯವಾಗಿ ಎಲ್ಲಾ ಮಧುಮೇಹಿ ರೋಗಿಗಳಿಗೆ ವ್ಯಾಯಾಮದ ಬಗ್ಗೆ ಹೇಳಿದಾಗ ನಾವು ಆಫೀಸ್ ಕೆಲಸ ಮಾಡುತ್ತೇವೆ ಅಥವಾ ಮನೆಕೆಲಸ ಮಾಡುತ್ತೇವೆ. ನಮಗೆ ಅದರ ಅಗತ್ಯವಿಲ್ಲ ಎಂಬ ಹೆಮ್ಮೆಯ ಉತ್ತರ ಬರುತ್ತದೆ. ಆದರೆ ಇವುಗಳಿಂದ ಮಧುಮೇಹ ತಡೆಗೆ ಅಥವಾ ಹತೋಟಿಗೆ ಪ್ರಯೋಜನವಾಗದು.
 
ಯಾವ ವ್ಯಾಯಾಮ ಉತ್ತಮ:
ಏರೋಬಿಕ್ ವ್ಯಾಯಾಮಗಳು:
1) ವೇಗದ ನಡಿಗೆ(Brisk Walk)
2) ಸೈಕ್ಲಿಂಗ್ (Cycling)
3) ಸ್ವಿಮ್ಮಿಂಗ್( Swimming)
4) ನೃತ್ಯ(Dancing)
 
 
ವ್ಯಾಯಾಮದ ಅವಧಿ:
ಸಾಮಾನ್ಯವಾಗಿ ಎಷ್ಟು ಹೊತ್ತು ಈ ವ್ಯಾಯಾಮ ಮಾಡಬೇಕು ಎನ್ನುವ ಪ್ರಶ್ನೆ ಎದುರಾಗುತ್ತದೆ. ಈ ವ್ಯಾಯಾಮಗಳನ್ನು ನಿತ್ಯವೂ 30ನಿಮಿಷ ಮಾಡಿದರೆ ಮಧುಮೇಹ ರೋಗಿಗಳಿಗೆ ಪ್ರಯೋಜನ ಶತಸಿದ್ಧ. ಮಧುಮೇಹ ಬಾರದಂತೆ ತಡೆಗಟ್ಟಲೂ ಇದು ಪ್ರಯೋಜನಕಾರಿ.
ವ್ಯಾಯಾಮ ಮತ್ತು ಮಧುಮೇಹ:
ಮಧುಮೇಹಕ್ಕೂ ವ್ಯಾಯಾಮಕ್ಕೂ ಇರುವ ಸಂಬಂಧ ಏನು? ವ್ಯಾಯಾಮ ಹೇಗೆ ಮಧುಮೇಹಿಗಳಿಗೆ ಉತ್ತಮ.
* ವ್ಯಾಯಾಮದಿಂದ ಇನ್ಸುಲಿನ್ ಕಾರ್ಯಕ್ಷಮತೆ ಹೆಚ್ಚುತ್ತದೆ.
* ಶರೀರ ಇನ್ಸುಲಿನ್ ಸೂಕ್ತವಾಗಿ ಸ್ಪಂದಿಸುತ್ತದೆ.
* ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ.
* ಶರೀರದ ತೂಕ ಸಮತೋಲನದಲ್ಲಿಡಲು ಸಹಕಾರಿ
* ಹೃದಯದ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ.
 
 
ಮಧುಮೇಹ ತಡೆಗೆ ಈ ಸೂತ್ರವನ್ನು ಅನುಸರಿಸಿ:
ನಿಯಮಿತ ಊಟ ನಸುಕಿನ ಓಟ
ಬಾರದು ಬಾಳಲಿ ಮಧುಮೇಹದ ಕಾಟ
 
ಡಾ.ಸತೀಶ ಶಂಕರ್ ಬಿ.
[email protected]

LEAVE A REPLY

Please enter your comment!
Please enter your name here