ಮಧುಮೇಹ ಮತ್ತು ಜೀವನ ಶೈಲಿ 

0
549

ಅಂಕಣ: ಡಾ.ಸತೀಶ ಶಂಕರ್ ಬಿ.
ಇಂದು ವಿಶ್ವಾದ್ಯಂತ ಮಧುಮೇಹ ವೇಗವಾಗಿ ವ್ಯಾಪಿಸುತ್ತಿದೆ. Type II ಮಧುಮೇಹ ಇಂದು 20ರ ಹರೆಯದವರಲ್ಲೂ ಕಾಣಿಸುತ್ತಿದೆ. ಇದಕ್ಕೆ ಬದಲಾದ ಜೀವನಶೈಲಿ ಮತ್ತು ಮಧುಮೇಹದ ಬಗ್ಗೆ ಮಾಹಿತಿಯ ಕೊರತೆ ಮುಖ್ಯವಾದ ಕಾರಣಗಳಲ್ಲಿ ಒಂದು.
ಮಧುಮೇಹ ತಡೆಗೆ ಜೀವನಶೈಲಿಯಲ್ಲಿ ಮಾಡಬೇಕಾದ ಬದಲಾವಣೆಗಳೇನು?
ಈ ಕೆಳಗಿನ 6 ವಿಷಯಗಳನ್ನು ದಿನನಿತ್ಯ ಅಳವಡಿಸಿಕೊಳ್ಳಿ:
1. ಹಿತ-ಮಿತವಾದ ಆಹಾರ:
ಆಯುರ್ವೇದ ಸುಭಾಷಿತದಲ್ಲಿ ಆರೋಗ್ಯ ಕಾಪಾಡಲು ಸೂತ್ರವೊಂದನ್ನು ಹೇಳಲಾಗಿದೆ.
“ಯಾರೂ ಹಿತಮಿತವಾಗಿ ಆಹಾರ ಸೇವಿಸುತ್ತಾರೆ ಅವರೇ ಸ್ವಸ್ಥರು”.
 
ಜೀವನ ಶೈಲಿಯಲ್ಲಿ ಪ್ರಮುಖವಾಗಿ ಆಹಾರಕ್ರಮದಲ್ಲಿ ಕೆಲವೊಂದು ಬದಲಾವಣೆ ಮಾಡಿ.
* ಜಂಕ್ ಫುಡ್/ಫಾಸ್ಟ್ ಫುಡ್ ನಿಂದ ದೂರವಿರಿ
* ಮೈದಾದಿಂದ ತಯಾರಿಸಿದ ಆಹಾರವನ್ನು ಹೆಚ್ಚಾಗಿ ಸೇವಿಸಬೇಡಿ.
* ಪ್ಯಾಕೇಜ್ ಫುಡ್ ಸೇವಿಸಬೇಡಿ.
* ಸಾಫ್ಟ್ ಡ್ರಿಂಕ್ಸ್ ಅತಿಯಾಗಿ ಸೇವಿಸಬೇಡಿ.
* ತಾಜಾ ಹಣ್ಣು-ಹಂಪಲುಗಳನ್ನು ಸೇವಿಸಿ.
* ಧಾನ್ಯಗಳನ್ನು, ತರಕಾರಿಗಳನ್ನು ಹೆಚ್ಚು ಉಪಯೋಗಿಸಿ.
* ನಾರಿನಾಂಶ ಇರುವ ಆಹಾರ ಹೆಚ್ಚಾಗಿ ಸೇವಿಸಿ.
* ಅತಿಯಾದ ಸಿಹಿತಿನಿಸು ತಿನ್ನಬೇಡಿ.
 
 
2) ವ್ಯಾಯಾಮ: ನಿತ್ಯವೂ 30 ನಿಮಿಷಗಳ ಸಮಯವನ್ನು ವ್ಯಾಯಾಮಕ್ಕೆ ಮೀಸಲಿಡಿ.
ಯಾವ ವ್ಯಾಯಾಮ ಉತ್ತಮ:
1) ವೇಗದ ನಡಿಗೆ(Brisk Walk)
2) ಸೈಕ್ಲಿಂಗ್ (Cycling)
3) ಸ್ವಿಮ್ಮಿಂಗ್( Swimming)
4) ನೃತ್ಯ(Dancing)
ಮಧುಮೇಹ ತಡೆಯಲು- 1) ಹಲಾಸನ, 2) ವಕ್ರಾಸನ, 3) ಅರ್ಧಮತ್ಸೇಂದ್ರಾಸನ, 4) ಧನುರಾಸನ.
ಈ ನಾಲ್ಕು ವಿಧವಾದ ಆಸನಗಳು ಮಧುಮೇಹ ತಡೆಗೆ ಉತ್ತಮ ಎಂದು ಸಂಶೋಧನೆಗಳಲ್ಲಿ ದೃಢಪಟ್ಟಿದೆ.
3) ಧೂಮಪಾನದಿಂದ ದೂರವಿರಿ
4) ಮದ್ಯಪಾನದಿಂದ ದೂರವಿರಿ.
5) ನಿಯಮಿತ ಮಧುಮೇಹದ ರಕ್ತಪರೀಕ್ಷೆ: ಪ್ರತೀ ಆರು ತಿಂಗಳಿಗೊಮ್ಮೆ ಮಧುಮೇಹದ ರಕ್ತ ಪರೀಕ್ಷೆ ಮಾಡಿಸಿ ವೈದ್ಯರ ಸಲಹೆ ಪಡೆಯಿರಿ. ಈ ಬಾರಿಯ ವಿಶ್ವಮಧುಮೇಹ ದಿನದಂದು ಇದಕ್ಕೆ ಪ್ರಾಮುಖ್ಯತೆ ಕೊಡಲಾಗಿದೆ.
ವೈದ್ಯರು ಹಣಕ್ಕೊಸ್ಕರ 6 ತಿಂಗಳಿಗೊಮ್ಮೆ ಪರೀಕ್ಷಿಸಲು ತಿಳಿಸುತ್ತಾರೆ ಎಂದು ಜರಿಯುವವರೂ ಇದ್ದಾರೆ. ಆದರೆ ಮಧುಮೇಹವನ್ನು ಆರಂಭದಲ್ಲೆ ಪತ್ತೆಹಚ್ಚಿದರೆ ಮಧುಮೇಹದಿಂದ ಬರುವ ತೊಂದರೆಗಳನ್ನು ತಡೆಗಟ್ಟಬಹುದು. ಮತ್ತು ಸುಲಭವಾಗಿ ಮಧುಮೇಹವನ್ನು ಹತೋಟಿಗೆ ತರಬಹುದು.
ಮಾನಸಿಕ ಒತ್ತಡ: ಅತಿಯಾದ ಮಾನಸಿಕ ಒತ್ತಡ(stress) ಕೂಡ ಗ್ಲುಕೋಸ್ ಏರುಪೇರಿಗೆ ಕಾರಣವಾಗುತ್ತದೆ. ದಿನದ ಸ್ವಲ್ಪ ಸಮಯವಾದರೂ ನಿಮ್ಮ ಪರಿವಾರದೊಂದಿಗೆ ಕಳೆಯಿರಿ. ಇದು ಮಾನಸಿಕ ನೆಮ್ಮದಿಗೆ ಸಹಾಯಕವಾಗುತ್ತದೆ.
ಬಿರುಸಲ ನಡೆ ಆರೋಗ್ಯ ಪಡೆ
ಸುಳಿಯದು ಮಧುಮೇಹ ನಿನ್ನಯ ಕಡೆ
ಮಿತಿಯಲಿ ಉಂಡವ ಬದುಕಲಿ ಯೋಗಿ
ಅತಿಯಲಿ ಉಂಡವ ಸಕ್ಕರೆ ರೋಗಿ
 
ಡಾ.ಸತೀಶ ಶಂಕರ್ ಬಿ.
[email protected]

LEAVE A REPLY

Please enter your comment!
Please enter your name here