ಅಂಕಣ: ಡಾ.ಸತೀಶ ಶಂಕರ್ ಬಿ.
ಇತಿಹಾಸ:
ಮಧು- ಜೇನು
ಮೇಹ- ಕ್ಷರಣ (ಅತಿಯಾದ ಸ್ರಾವ)
ಆಯುರ್ವೇದದ ಪ್ರಾಚೀನ ಗ್ರಂಥಗಳಲ್ಲಿ ಮಧುಮೇಹದ ಉಲ್ಲೇಖವಿದೆ. ಆಚಾರ್ಯ ಚರಕ, ಸುಶ್ರುತ ಮತ್ತು ವಾಗ್ಭಟರು ಮಧುಮೇಹದ ಬಗ್ಗೆ ಸವಿಸ್ತಾರವಾಗಿ ಉಲ್ಲೇಖಸಿದ್ದಾರೆ. ಮಧುಮೇಹವೆಂದರೆ ಸಿಹಿ ಮೂತ್ರ ಮತ್ತು ಅತಿಮೂತ್ರ. ರಕ್ತದಲ್ಲಿ ಮತ್ತು ಮೂತ್ರದಲ್ಲಿ ಸಕ್ಕರೆಯ ಅಂಶ ಹೆಚ್ಚಾದಾಗ ಮಧುಮೇಹ ಬರುತ್ತದೆ. ಮಧುಮೇಹಕ್ಕೆ ಡಯಾಬಿಟಿಸ್ ಎಂದೂ ಕರೆಯಲಾಗುತ್ತದೆ. ಹಿಂದಿನ ಕಾಲದಲ್ಲಿ ಮೂತ್ರ ಪರೀಕ್ಷೆಯ ಮೂಲಕ ಪತ್ತೆಹಚ್ಚಲಾಗುತ್ತಿತ್ತು. ಮೂತ್ರದ ಸುತ್ತ ಇರುವೆಗಳು ಸುತ್ತುವರಿದರೆ ಅದನ್ನು ಮಧುಮೇಹ ಎಂದು ಗುರುತಿಸಲಾಗುತ್ತಿತ್ತು.
ಡಯಾಬಿಟಿಸ್ ಎಂಬ ಶಬ್ದವನ್ನು ಮೊದಲು ಪ್ರಯೋಗಿಸಿದ್ದು ಅಪೊಲೋನಿಯಸ್ ಮೆಂಪಿಸ್. 250 ಬಿಸಿ ಯಲ್ಲಿ 1675ರಲ್ಲಿ ಥೋಮಸ್ ವಿಲ್ಲಿಸ್ ಇದಕ್ಕೆ …… ಶಬ್ದವನ್ನು ಸೇರಿಸಿ ಡಯಾಬಿಟಿಸ್ ಮೆಲೈಟಿಸ್ ಎಂದು ನಾಮಕರಣ ಮಾಡಿದರು. ಡಯಾಬಿಟಿಸ್ ಎಂದರೆ ಸಿಹಿ ಮೂತ್ರ.
1889ರಲ್ಲಿ ಜೋಸೆಫ್ ವಾನ್ ಮೆರಿಂಗ್ ಪ್ಯಾನ್ ಕ್ರಿಯಾಸ್ ನ ಮಹತ್ವವನ್ನು ಅರಿತರು. ಪಚನಕ್ರಿಯೆಯಲ್ಲಿ ಪ್ಯಾನ್ ಕ್ರಿಯಾಸ್ ಗ್ರಂಥಿಯ ಮಹತ್ವವನ್ನು ಅರಿಯುದಕ್ಕೆ ನಾಯಿಯ ಪ್ಯಾನ್ ಕ್ರಿಯಾಸ್ ಗ್ರಂಥಿಯನ್ನು ತೆಗೆದಾಗ ಅದರಲ್ಲಿ ಡಯಾಬಿಟಿಸ್ ಲಕ್ಷಣ ಕಾಣಿಸಿಕೊಂಡಿತು. ಇದರಿಂದ ಪ್ಯಾನ್ ಕ್ರಿಯಾಸ್ ಗ್ರಂಥಿಯ ಮಹತ್ವ ತಿಳಿಯಿತು.
1921ರಲ್ಲಿ ಪೆಟ್ರಿಕ್ ಗ್ರಾಂಟ್ ಬಾಂಟಿಂಗ್ ಮತ್ತು ಚಾಲ್ಸರ್್ ಬೆಸ್ಟ್ ಗೆ ಸಂಶೋಧನೆಯ ಮೂಲಕ ಇನ್ಸೂಲಿನ್ ಕೊಟ್ಟಾಗ ಡಯಾಬಿಟಿಸ್ ಹತೋಟಿಗೆ ಬರುತ್ತದೆ ಎಂಬುದು ತಿಳಿಯಿತು. ಪ್ಯಾನ್ ಕ್ರಿಯಾಸ್ ತೆಗೆದಿದ್ದ ನಾಯಿಗೆ ಇನ್ಸುಲಿನ್ ಕೊಟ್ಟಾಗ ಅದರ ಮಧುಮೇಹ ಹತೋಟಿಗೆ ಬಂತು. ಹೀಗಾಗಿ ಇನ್ಸುಲಿನ್ ಮಧುಮೇಹ ಬರದಂತೆ ತಡೆಗಟ್ಟುತ್ತದೆ. ಮತ್ತು ಪ್ಯಾನ್ ಕ್ರಿಯಾಸ್ ಗ್ರಂಥಿ ಇನ್ಸುಲಿನ್ ಉತ್ಪಾದಿಸುತ್ತದೆ ಎಂಬುದು ಖಚಿತವಾಯಿತು. ಇದಕ್ಕಾಗಿ ಬಾಂಟಿಂಗ್ ಗೆ 1923ರಲ್ಲಿ ನೊಬೆಲ್ ಪುರಸ್ಕಾರವೂ ದೊರೆಯಿತು.
1922ರಲ್ಲಿ ಲಿಯೋನಾರ್ಡ್ ಥಾಮ್ಸನ್ ಟೊರಾಂಟೋದಲ್ಲಿ ಪ್ರಥಮ ಬಾರಿಗೆ ಇನ್ಸುಲಿನ್ ಇಂಜೆಕ್ಷನ್ ಪಡೆದ ವ್ಯಕ್ತಿಯಾಗಿದ್ದರು. 1936ರಲ್ಲಿ ಹೆರಾಲ್ಡ್ ಪರ್ಸೆವಲ್ ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸಿ ಬಗ್ಗೆ ವಿವರವಾಗಿ ತಿಳಿಸಿದರು. 1982ರಲ್ಲಿ ಡಯಾಬಿಟಿಸ್ ಗೆ ಹ್ಯೂಮನ್ ಇನ್ಸುಲಿನ್ ಕಂಡು ಹಿಡಿಯಲಾಯಿತು.
ಆಯುರ್ವೇದ ಗ್ರಂಥಗಳಲ್ಲಿ ಮಧುಮೇಹದ 2 ವಿಧವಾದ ಟೈಪ್1 ಮತ್ತು ಟೈಪ್2 ಬಗ್ಗೆ ವಿವರವಾದ ಉಲ್ಲೇಖವಿದೆ. ಆಯುರ್ವೇದ ಗ್ರಂಥಗಳಲ್ಲಿ ಮಧುಮೇಹಕ್ಕೆ ಮೂತ್ರ ಪರೀಕ್ಷೆಯ ಉಲ್ಲೇಖವಿದೆ. ಮೂತ್ರಕ್ಕೆ ಇರುವೆಗಳು ಮುತ್ತಿಕೊಂಡಲ್ಲಿ ಮಧುಮೇಹ ಇರುವುದನ್ನು ಖಚಿತಪಡಿಸಲಾಗುತ್ತಿತ್ತು.
ಅಂಕಣ: ಡಾ.ಸತೀಶ ಶಂಕರ್ ಬಿ.
[email protected]