ಮಧುಮೇಹ-ಔಷಧೀಯ ಸಸ್ಯಗಳು:

0
249

ಅಂಕಣ: ಡಾ.ಸತೀಶ ಶಂಕರ್ ಬಿ.
ನೇರಳೆ:
ಸಂಸ್ಕೃತದಲ್ಲಿ ಇದಕ್ಕೆ ಜಂಬೂ ಎಂಬ ಹೆಸರಿದೆ. ಮಧುಮೇಹದಲ್ಲಿ ನೇರಳೆಹಣ್ಣು ಮತ್ತು ಬೀಜ ಉಪಯೋಗಿಸಲಾಗುತ್ತದೆ. ನೇರಳೆಯ ಬೀಜದ ಹುಡಿ ಮತ್ತು ಹಣ್ಣು ಮಧುಮೇಹವನ್ನು ಹತೋಟಿಗೆ ತರುತ್ತದೆ. 2 ಚಮಚದಷ್ಟು ನೇರಳೆ ಬೀಜದ ಹುಡಿಯನ್ನು ನಿತ್ಯವೂ ಸೇವಿಸಬೇಕು.
 
 
 
ಪಟೋಲ:
ಕನ್ನಡದಲ್ಲಿ ಕಾಡು ಪಡುವಲ ಎಂದು ಕರೆಯಲಾಗುತ್ತದೆ. ಮಧುಮೇಹದಿಂದ ಬರುವ ಕಣ್ಣಿನ ತೊಂದರೆಗಳನ್ನು ತಡೆಯಲು ಪಟೋಲ ಸಹಕಾರಿಯಾಗಿದೆ. ತುಂಬಾ ಮಧುಮೇಹದಿಂದ ಬಳಲುತ್ತಿರುವವರಿಗೆ ಡಯಾಬಿಟಿಕ್ ರೆಡಿನೋಪತಿ ತೊಂದರೆ ಬರುವ ಸಾಧ್ಯತೆ ಇವೆ. ಇದನ್ನು ತಡೆಗಟ್ಟಲು ಮತ್ತು ಡಯಾಬಿಟಿಕ್ ರೆಡಿನೋಪತಿಯಿಂದ ಬಳಲುತ್ತಿರುವವರಿಗೆ ಕಣ್ಣಿನ ಸಣ್ಣ ರಕ್ತನಾಳಗಳಲ್ಲಿ ರಕ್ತಸ್ರಾವವಾಗದಂತೆ ತಡೆಗಟ್ಟಲು ಪಟೋಲ ಸಹಕಾರಿಯಾಗಿದೆ. ಇದರ ಎಲೆ ಮತ್ತು ಎಲೆಯಿಂದ ತಯಾರಿಸಿದ ಪಟೋಲಾದಿ ಘೃತ ಉಪಯೋಗಿಸಲಾಗುತ್ತದೆ.
 
 
ಭೃಂಗರಾಜ:
ಇದು ಮುಖ್ಯವಾಗಿ ತಲೆಗೂದಲಿನ ಆರೋಗ್ಯಕ್ಕೆ ಪ್ರಮುಖವಾಗಿ ಉಪಯೋಗಿಸ್ಪಡುತ್ತದೆ. ಭೃಂಗರಾಜ ಮಧುಮೇಹದಿಂದ ಬರುವ ಕಣ್ಣಿನ ತೊಂದರೆಯಲ್ಲಿ ಸಹಕಾರಿಯಾಗುತ್ತದೆ. ಮುಖ್ಯವಾಗಿ ಡಯಾಬಿಟಿಕ್ ರೆಟಿನೋಪತಿಯಲ್ಲಿ ಉಪಯೋಗಿಸಬಹುದು. ಸಂಪೂರ್ಣ ಭೃಂಗರಾಜ ಸ್ವರಸವನ್ನು ಸೇವಿಸುವುದರಿಂದ ಕಣ್ಣಿನ ತೊಂದರೆಗಳನ್ನು ನಿವಾರಿಸಬಹುದು.
 
 
 
ಸೊಗದೆ ಬೇರು:
ಇದಕ್ಕೇ ಅನಂತ ಎಂಬ ಇನ್ನೊಂದು ಹೆಸರಿದೆ ಸೊಗದೆ ಬೇರಿನ ಚೂರ್ಣ ಅಥವಾ ಇದರಿಂದ ತಯಾರಿಸ್ಪಟ್ಟ ಆಸವ ಮಧುಮೇಹದಿಂದ ಬರಬಹುದಾದ ಕಣ್ಣಿನ ತೊಂದರೆಗಳನ್ನು ನಿವಾರಿಸುತ್ತದೆ. ಇದು ಮುಖ್ಯವಾಗಿ ಶೀತಗುಣ ಹೊಂದಿದೆ. ಮಧುಮೇಹದಿಂದ ಬರುವ ಅಲ್ಸರ್ ಸಮಸ್ಯೆಗೆ ಇದು ರಾಮಬಾಣ ಇದ್ದಂತೆ.
 
ಅಂಕಣ: ಡಾ.ಸತೀಶ ಶಂಕರ್ ಬಿ.
[email protected]

LEAVE A REPLY

Please enter your comment!
Please enter your name here