ಮಧುಮೇಹ-ಔಷಧೀಯ ಸಸ್ಯಗಳು:

0
299

ಅಂಕಣ: ಡಾ.ಸತೀಶ ಶಂಕರ್ ಬಿ.
ಅಮೃತಬಳ್ಳಿ:
ಆಯುರ್ವೇದದಲ್ಲಿ ‘ಗುಡೂಚಿ’ ಎಂದು ಪ್ರಸಿದ್ಧ. ಹಲವು ರೋಗಗಳನ್ನು ವಾಸಿ ಮಾಡುವ ಗುಡೂಚಿ ಮಧುಮೇಹ ಹತೋಟಿಯಲ್ಲಿಡಲು ಸಹಕಾರಿ. ಅಮೃತಬಳ್ಳಿ ಎಂದು ಕರೆಯಲ್ಪಡುವ ಬಳ್ಳಿ ನಿಜವಾಗಿಯೂ ಅಮೃತಕ್ಕೆ ಸಮಾನ. ಇದು ಅತ್ಯಂತ ಕಹಿ ಗುಣ ಹೊಂದಿದ್ದರೂ ಆರೋಗ್ಯಕ್ಕೆ ಅಮೃತದಂತೆ. ಇದರ ಎಲೆಯಿಂದ ತಯಾರಿಸಿದ ರಸ ಮಧುಮೇಹನಾಶಕ ಗುಣ ಹೊಂದಿದೆ.
ಮಧುಮೇಹಕ್ಕೆ ಪ್ರಮಾಣ: 2 ಚಮಚ ಅಮೃತಬಳ್ಳಿ ಎಲೆ ರಸವನ್ನು ಜೇನಿನೊಂದಿದೆ ಸೇವಿಸಬೇಕು.
 
 
ಗೋಕ್ಷುರ:
ತ್ರಿಕಂಟಕ ಎಂದು ಹೆಸರುಪಡೆದಿರುವ ಗೋಕ್ಷುರ ಮಧುಮೇಹದಿಂದ ಬರುವ ಕಿಡ್ನಿಯ ತೊಂದರೆಗಳಲ್ಲಿ ಸಹಕಾರಿ. ಇದರ ಹಣ್ಣು ಮುಳ್ಳಿನಿಂದ ಕೂಡಿರುತ್ತದೆ. ಇದನ್ನು ಪುಡಿ ಮಾಡಿ 1/2ದಿಂದ ಒಂದು ಚಮಚ ಸೇವಿಸಿದರೆ ಕಿಡ್ನಿಯ ತೊಂದರೆಗಳನ್ನು ನಿವಾರಿಸಬಹುದು ಅಥವಾ ಕಷಾಯ ಮಾಡಿ ಕುಡಿದರೆ (50ಮಿ.) ಮೂತ್ರ ದೋಷ ನಿವಾರಣೆಯಾಗುತ್ತದೆ.
 
 
 
ಅರಸಿನ
ಆಯುರ್ವೇದದಲ್ಲಿ ಹರಿದ್ರ ಎಂದು ಕರೆಯಲ್ಪಡುವ ಅರಸಿನ ಮಧುಮೇಹಿಗಳುಗೆ ಅತ್ಯುತ್ತಮ. ಅರಸಿನದ ಹುಡಿ 3 ಗ್ರಾಂ.ನಷ್ಟು ನಿತ್ಯವೂ ಸೇವಿಸಿದರೆ ಮಧುಮೇಹ ಹತೋಟಿಗೆ ಬರುತ್ತದೆ.
ಅರಸಿನದ ಹುಡಿಯನ್ನು ನೆಲ್ಲಿಕಾಯಿಯ ಹುಡಿಯೊಂದಿಗೆ ಸೇರಿಸಿ ಸೇವಿಸಿದರೆ ಮಧುಮೇಹಕ್ಕೆ ರಾಮಬಾಣ.
ಅರಸಿನದಲ್ಲಿ curcumin ಎಂಬ ಅಂಶವಿದ್ದು ಇದು ಬಿಪಿ ಹತೋಟಿಗೆ ತರಲು ಸಹಕಾರಿ.
ಅರಸಿನ ಕೊಲೆಸ್ಟೆರಾಲ್ ಕಡಿಮೆಗೊಳಿಸುತ್ತದೆ. ಕೊಬ್ಬಿನ ಅಂಶ ಹೊರಹಾಕಲು ಸಹಕಾರಿ.
ಅಂಕಣ: ಡಾ.ಸತೀಶ ಶಂಕರ್ ಬಿ.
[email protected]

LEAVE A REPLY

Please enter your comment!
Please enter your name here