ಮಧುಮೇಹಿಗಳ ಪಾದಗಳ ಆರೈಕೆ

0
480

ಅಂಕಣ:  ಡಾ.ಸತೀಶ ಶಂಕರ್ ಬಿ
ಮಧುಮೇಹ ಇತ್ತೀಚೆಗೆ ಸರ್ವೇಸಾಮಾನ್ಯ ಎಂಬಷ್ಟು ವ್ಯಾಪಕವಾಗಿದೆ. ಮಧುಮೇಹದಿಂದ ಬರುವ ತೊಂದರೆಗಳಲ್ಲಿ ಪಾದದ ಅಲ್ಸರ್ ಸಮಸ್ಯೆ ಪ್ರಮುಖವಾದುದು. ಸಾಮಾನ್ಯವಾಗಿ ನಮ್ಮ ಕೈ ಕಾಲುಗಳು ಬೇಗನೇ ಹಾನಿಗೊಳಗಾಗುತ್ತದೆ. ಅದರಲ್ಲೂ ಕಾಲುಗಳು ಹೆಚ್ಚಾಗಿ ಕಲ್ಲುಮುಳ್ಳು, ಪಾದರಕ್ಷೆಗಳಿಂದಲೂ ಹಾನಿಗೊಳಗಾಗುತ್ತದೆ.
 
ಡಯಾಬಿಟಿಕ್ ಫೂಟ್ ಗೆ ಕಾರಣಗಳು:
1) ಬಾಹ್ಯ ನರರೋಗ(peripheral neuropathy)
2) ಸಣ್ಣಪುಟ್ಟ ಗಾಯಗಳು
3) ಸ್ವಚ್ಛತೆಯಿಲ್ಲದ ಪಾದಗಳು
4) ದುರ್ಬಲ ಪಾದದ ರಕ್ಷಣೆ
 
 
ಡಯಾಬಿಟಿಕ್ ಫೂಟ್ ತಡೆಯುವ ವಿಧಾನಗಳು:
ಸೂಕ್ತ ಪರಿಶೀಲನೆ:
ರಾತ್ರಿ ಮಲಗುವ ಮುನ್ನ ನಿಮ್ಮ ಪಾದಗಳನ್ನು ಪರೀಕ್ಷಿಸಿಕೊಳ್ಳಿ. ಯಾವುದೇ ಸಣ್ಣ ಗಾಯ ಇಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಇದ್ದರೆ ಕೂಡಲೇ ವೈದ್ಯರಲ್ಲಿ ಸಮಾಲೋಚಿಸಿ.
 
 
ಸ್ವಚ್ಛತಾ ಕ್ರಮ:
ನಿತ್ಯವೂ ಪಾದಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ.
 
 
ಪಾದರಕ್ಷೆಗಳ ಆಯ್ಕೆ:
ನಿಮ್ಮ ಪಾದಗಳಿಗೆ ಸರಿಯಾಗಿ ಹೊಂದಿಕೆಯಾಗುವದ ಪಾದರಕ್ಷೆಗಳನ್ನು ಉಪಯೋಗಿಸಿ. ಪಾದರಕ್ಷೆ ಬಿಗಿಯಾಗಿದ್ದರೆ ಊತ ಮತ್ತು ಸೋರಿಕೆ ಉಂಟಾಗಬಹುದು.
 
 
 
ವೈದ್ಯರಲ್ಲಿ ನಿಯಮಿತ ಪರಿಶೀಲನೆ:
ಕಾಲಕಾಲಕ್ಕೆ ವೈದ್ಯರಲ್ಲಿ ಪರೀಕ್ಷಿಸಿ. ಮಧುಮೇಹ ನಿಯಂತ್ರಣದಲ್ಲಿ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
 
 
ಮಾಯಿಶ್ಚರೈಸರ್:
ಇದರಲ್ಲಿರುವ ‘ವಿಟಮಿನ್ E’ ಪಾದಗಳಿಗೆ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ.
 
 
ನಡಿಗೆ:
ಮಿತವಾದ ವ್ಯಾಯಾಮಗಳನ್ನು ರೂಡಿ ಮಾಡಿಕೊಳ್ಳಿ. ಇದು ಚಟುವಟಿಕೆ ಒದಗಿಸುತ್ತದೆ. ಕಾಲಿನ ಸ್ನಾಯುಗಳನ್ನು ಬಲಗೊಳಿಸುತ್ತದೆ.
 
 
 
ವಿಟಮಿನ್ B ಅಂಶ:
ಇದು ಕೂಡ ನರಗಳಿಗೆ ಸಹಕಾರಿ ರಕ್ತಸಂಚಾರವನ್ನು ವೃದ್ಧಿಸುತ್ತದೆ.
 
 
ಡಾ.ಸತೀಶ ಶಂಕರ್ ಬಿ
[email protected]

LEAVE A REPLY

Please enter your comment!
Please enter your name here